ಕಲಬುರಗಿ: ಸಿಎಂ ಯಡಿಯೂರಪ್ಪ ವಿರುದ್ದ ಸಚಿವ ಕೆ.ಎಸ್.ಈಶ್ವರಪ್ಪ ಹೈಕಮಾಂಡ್ ದೂರು ನೀಡಿದ್ದಾರೆಂದು ಹೇಳಲಾದ ಕುರಿತು ಟ್ವಿಟ್ ಮಾಡಿರುವ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಜಗಜ್ಜಾಹೀರಾಗಿದೆ ಎಂದು ಬರೆದುಕೊಂಡಿದ್ದಾರೆ.
” ಶಾಸಕರಿಗೆ ಸಚಿವರ ಮೇಲೆ ನಂಬಿಕೆಯಿಲ್ಲ. ಸಚಿವರಿಗೆ ಸಿಎಂ ಮೇಲೆ ನಂಬಿಕೆಯಿಲ್ಲ. ಸಿಎಂ ಗೆ ಹೈಕಮಾಂಡ್ ಮೇಲೆ ನಂಬಿಕೆಯಿಲ್ಲ. ಒಟ್ಟಿನಲ್ಲಿ ಈ ಬಿಜೆಪಿ ಸರಕಾರ ಬಂದರೆ ರಾಜ್ಯದ ಜನರಿಗೆ ಪೀಕಲಾಟ ತಪ್ಪಿದ್ದಲ್ಲ ” ಎಂದು ಲೇವಡಿ ಮಾಡಿದ್ದಾರೆ.