ಫರಹತಾಬಾದ: ನೂತನ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಹಾಗೂ ಎಸ್.ಡಿ.ಎಮ್.ಸಿ ಸರ್ವ ಸದಸ್ಯರು ತಮ್ಮ ಜವಾಬ್ದಾರಿ ಅರಿತುಕೊಂಡು ಶಾಲೆ ಮತ್ತು ಗ್ರಾಮದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಮಾಜಿ ಗ್ರಾ.ಪಂ ಸದಸ್ಯ ಶಿವಕುಮಾರ ಶರ್ಮಾ ಹೇಳಿದರು.
ತಾಲೂಕಿನ ಫರಹತಾಬಾದ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಹಾಗೂ ಎಸ್.ಡಿ.ಎಮ್.ಸಿ ಸಮಿತಿಯ ಸರ್ವ ಸದಸ್ಯರ ಸನ್ಮಾನ ಕಾರ್ಯಕ್ರಮವನನು ಉದ್ದೇಶಿಸಿ ಮಾತನಾಡಿದ ಶರ್ಮಾ ಅವರು ನಿಮ್ಮನ್ನು ಸದಸ್ಯರನ್ನಾಗಿ ಮಾಡಲು ಊರ ಜನರೇಲ್ಲಾ ಮತಗಟ್ಟೆ ತನಕ ಬಂದು ಮತ ಹಾಕಿ ನಿಮ್ಮ ಕೋರಳಿಗೆ ವಿಜಯದ ಹಾರ ಹಾಕಿದ್ದಾರೆ. , ಬೆರಳಿಗೆ ಮಸಿ ಹಚ್ಕೊಂಡು ಮತ ನೀಡಿದರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಬೇಡಿ . ಅವರ ಋಣ ನಿಮ್ಮ ಮೆಲೆ ಇದೆ . ಭ್ರಷ್ಟಚಾರಕ್ಕೆ ಮಾಡದೇ ಜನರ ಕೆಲಸ ಮಾಡಿಸಿ ವಿಶ್ವಾಸ ಗಳಿಸಿ ಎಂದು ಹೇಳಿದರು. ಗ್ರಾ.ಪಂ ಸದಸ್ಯ ಚನ್ನಬಸಪ್ಪ ಸಜ್ಜನ ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷ ಮಾಳಪ್ಪ ಎಚ್ ಪೂಜಾರಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರುಗಳಾದ ರೇಣುಕಾ ವಹಿಸಿದರು. ಸಿ.ಆರ್.ಪಿ ಭಗವಂತರಾಯ , ಗ್ರಾ.ಪಂ ಅಧ್ಯಕ್ಷ ಹುಣಚಪ್ಪ ಸೀತನೂರ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಅನಸೂಬಾಯಿ ಬುಕ್ಕನ , ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಎಸ್.ಡಿ.ಎಮ್.ಸಿ ಸರ್ವ ಸದಸ್ಯರು ಭಾಗವಹಿಸಿದರು. ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕಿ ಶೀಲಾವತಿ ನಿರೂಪಿಸಿದರು, ಸರಸ್ವತಿ ಸ್ವಾಗತಿಸಿದರು, ಮೈತ್ರಾದೇವಿ ಕೊನೆಯಲ್ಲಿ ವಂದಿಸಿದರು.