ಶಹಾಬಾದ: ನಗರದ ವಾಡಿ-ಶಹಾಬಾದ ನಗರಯೋಜನಾ ಪ್ರಾಧಿಕಾರ ಕಾರ್ಯಾಲಯದಲ್ಲಿ ಬುಧವಾರ ಪ್ರಥಮ ಸಭೆ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ವಾಡಿ ಪಟ್ಟಣ ಹಾಗೂ ರಾವೂರ ಗ್ರಾಮದಲ್ಲಿ ಕೃಷಿ ಭೂಮಿಗೆ ಭೂಪರಿವರ್ತನೆ ಮಾಡಲು ಮೊದಲು ಸರ್ಕಾರಿ ನಿಯಮಾವಳಿ ಪ್ರಕಾರ ಸಂಬಂಧಪಟ್ಟವರು ಎಲ್ಲಾ ಮೂಲಸೌಲಭ್ಯಗಳನ್ನು ಮಾಡಿದ್ದರೇ ಮಾಡತಕ್ಕದ್ದು.ಇಲ್ಲದಿದ್ದರೇ ಮಾಡಕೂಡದು ಎಂದು ತಿಳಿಸಿದರು.
ಶಹೀದ್ ಭಗತ್‌ಸಿಂಗ್‌ರ ೯೧ ನೇ ಹುತಾತ್ಮ ದಿನಾಚರಣೆ
ಎಲ್ಲಾ ಸೌಲಭ್ಯಗಳನ್ನು ಮಾಡಲಾಗಿದೆ ಎಂದು ತಿಳಿಸಿದಾಗ ಭೂಪರಿವರ್ತನೆಗೆ ಒಪ್ಪಿಗೆ ಸೂಚಿಸಲಾಯಿತು. ಅಲ್ಲದೇ ವಾಡಿ-ಶಹಾಬಾದ ನಗರಯೋಜನಾ ಪ್ರಾಧಿಕಾರ ಕಾರ್ಯಾಲಯದಲ್ಲಿ ಅಂಬುಜಾ ಅರುಣ ಗೌಳಿ ಅವರು ಕಳೆದ ೨೩ ವರ್ಷದಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.ಇಲ್ಲಿಯವರೆಗೆ ಅವಳಿಗೆ ಯಾವುದೇ ಆರ್ಥಿಕ ಭದ್ರತೆಯಿಲ್ಲ.ಆದ್ದರಿಂದ ಅಂಬುಜಾಗೆ ಇಎಸ್‌ಐ ಮತ್ತು ಪಿಎಫ್ ಸೌಲಭ್ಯವನ್ನು ಒದಗಿಸತಕ್ಕದ್ದು ಎಂದು ಸರ್ವ ಸದಸ್ಯರು ಹೇಳಿದರು.
ಸಭೆಯಲ್ಲಿ ಸದಸ್ಯ ಕಾರ್ಯದರ್ಶಿ ವಿ? ಭಂಡಾರಿ, ಅಧಿಸೂಚಿತ ಕ್ಷೇತ್ರ ಸಮಿತಿಯ ಮುಖ್ಯಾಧಿಕಾರಿ ಪೀರಶೆಟ್ಟಿ, ಮುಖ್ಯ ಅಧಿಕಾರಿ, ಶ್ರೀಮಂತ ಪುರಸಭೆ ವಾಡಿ, ಸದಸ್ಯರಾದ ಬಸವರಾಜ ಬಿರಾದಾರ, ರಾಜು ಮುಕ್ಕಣ್ಣ, ಲತಾ ಸಂಜೀವ ಉಪಸ್ಥಿತರಿದ್ದರು.