ಕಲ್ಯಾಣ ಕರ್ನಾಟಕದ ಹಕ್ಕಿಗಾಗಿ ನಿರಂತರ ಹೋರಾಟ: ಲಕ್ಷ್ಮಣ ದಸ್ತಿ

1
47

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಯಾವುದೋ ಯುದ್ಧದಲ್ಲಿ ಗೆದ್ದುಕೊಂಡ ಪ್ರದೇಶದಂತೆ  ಹಳೇ ಮೈಸೂರಿನ ಮುಖಂಡರು ಮತ್ತು ಮುಂಬೈ ಕರ್ನಾಟಕದ ಮುಖಂಡರು ನಮಗೆ ಗುಲಾಮರಂತೆ ವರ್ತಿಸುತ್ತಾ, ಅಭಿವೃದ್ಧಿಯಿಂದ ನಮ್ಮನ್ನು ವಂಚಿಸಿ,  ನಿರಂತರ ಅನ್ಯಾಯ, ನಿರ್ಲಕ್ಷತನ, ಮಲತಾಯಿ ಧೋರಣೆ ನಡೆಸುತ್ತಿದ್ದಾರೆ ಎಂದು ಹೈದಾರಾಬಾದ್ ಕರ್ನಾಟಕ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಆಕ್ರೋಶ ವ್ಯಕ್ತಪಿಡಿಸಿದ್ದಾರೆ.

ಪ್ರದೇಶದ ಪ್ರತ್ಯೇಕ ಬಜೆಟ್ ಮಂಡನೆ ಕನಸಾಗಿಯೇ ಉಳಿಯಿತು. ೩೭೧ನೇ (ಜೆ) ಕಲಂ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ನಿರ್ಲಕ್ಷ, ಮಂತ್ರಿ ಮಂಡಲದಲ್ಲಿ ನಿರ್ಲಕ್ಷ.  ಹೀಗೆ ನಮ್ಮ ಹಕ್ಕಿನ ಮಂಜೂರಾದ ಯೋಜನೆಗಳು, ಮಂಜೂರಾಗಬೇಕಾದ ಯೋಜನೆಗಳು ಮತ್ತು ಇದ್ದಂತಹ ಯೋಜನೆಗಳು, ನೆನೆಗುದಿಗೆ ಹಾಕುತ್ತಿರುವುದು, ಸ್ಥಳಾಂತರ ಮಾಡುತ್ತಿರುವುದು, ರದ್ದು ಮಾಡುತ್ತಿರುವುದು ನೋಡಿದರೆ, ಕರ್ನಾಟಕ ರಾಜ್ಯದಲ್ಲಿ ನಮ್ಮ ಭವಿಷ್ಯವಿಲ್ಲವೆಂಬುದು ಸ್ಪಷ್ಟವಾಗುತ್ತಿದೆ. ಇದನ್ನು ಗಮನದಲ್ಲಿಟ್ಟು ಕೊಂಡು ಸಮಿತಿ ಫೆಬ್ರುವರಿ ೨ನೇ ವಾರದಲ್ಲಿ ಸರ್ವ ಪಕ್ಷಗಳ ಸಭೆ ನಡೆಸಿತ್ತು, ಈ ಸಭೆಯಲ್ಲಿ ಎಲ್ಲಾ ಪಕ್ಷಗಳ ನಾಯಕರ ಸಂಘಟಿತ ಇಚ್ಛಾಶಕ್ತಿ ವ್ಯಕ್ತಪಡಿಸಲು ಒಕ್ಕೋರಲಿನಿಂದ ಒತ್ತಾಯಿಸಲಾಗಿದ್ದು, ಶೀಘ್ರ ಮುಖ್ಯಮಂತ್ರಿಗಳ ಹತ್ತಿರ ಸರ್ವ ಪಕ್ಷಗಳ ನಿಯೋಗ ತೆಗೆದುಕೊಂಡು ಹೋಗುವ ಬಗ್ಗೆ ನಿರ್ಣಯಿಸಿರುವಂತೆ ನಿಯೋಗ ಹೋಗಲೇಬೇಕಾಗಿದೆ. ಇದರ ಜೊತೆಗೆ ನಿರಂತರ ಒತ್ತಡ ಹೋರಾಟಗಳು ನಡೆಯಬೇಕಾಗಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಮಾಜಿ  ಸಚಿವರು, ಸಂಸದರು, ಶಾಸಕರು, ಎಲ್ಲಾ ಪಕ್ಷಗಳ ಮುಖಂಡರು, ಬುದ್ಧಿ ಜೀವಿಗಳು, ಚಿಂತಕರು, ಆರ್ಥಿಕ ತಜ್ಞರು, ಕಲ್ಯಣ ಕರ್ನಟಕ ಪರ  ಹೋರಾಟಗಾರರು ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಮುಖಂಡರು, ಸಾಹಿತಿಗಳು ಸೇರಿದಂತೆ ಎಲ್ಲಾ ಕ್ಷೇತ್ರದ ಆಯ್ದ ೨೦೦ ರಿಂದ ೫೦೦ ಪ್ರತಿನಿಧಿಗಳು ಭಾಗವಹಿಸುವಂತೆ ಆಯಾ ಕ್ಷೇತ್ರದ ಗಣ್ಯರ ಸಮ್ಮತಿ ಪಡೆದು ಮಹಾ ಅಧಿವೇಶನ ಹಮ್ಮಿಕೊಳ್ಳ ಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಅಧಿವೇಶನದಲ್ಲಿ ಕೈಗೊಳ್ಳುವ ನಿರ್ಣಯದಂತೆ ನಮ್ಮ ಹಕ್ಕಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಸಂಘಟಿತ ರಾಜಕಿಯ ಒತ್ತಡ ತರುವುದರ ಬಗ್ಗೆ, ಉಗ್ರ ಸ್ವರೂಪದ ರೀತಿಯಲ್ಲಿ ಧರಣಿ ಸತ್ಯಾಗ್ರಹ, ರಸ್ತೆ ತಡೆ, ಹೆದ್ದಾರಿ ತಡೆ, ರೈಲು ರೋಕೊ, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಬಂದ್, ಹೀಗೆ ವಿನೂತನ ಮಾದರಿಯ ನಿರಂತರ ಹೋರಾಟಗಳು ನಡೆಸಿ ವಿಧಾನ ಸೌಧ ಮುತ್ತಿಗೆ ಹಾಕಲು ಮಹಾ ಅಧಿವೇಶನದಲ್ಲಿ ಚರ್ಚಿಸಿ, ಪೂಜ್ಯರ, ಎಲ್ಲಾ ಕ್ಷೇತ್ರದ ಗಣ್ಯರ, ಉಪಸ್ಥಿತಿಯಲ್ಲಿ ಸರ್ವಾನುಮತದ ದಿಟ್ಟ ನಿರ್ಣಯ ಕೈಗೊಳ್ಳಲಾಗುವುದೆಂದಿದ್ದಾರೆ.

ಮನೀಷ್ ಜಾಜು, ಶಿವಲಿಂಗಪ್ಪ ಬಂಡಕ್, ಲಿಂಗರಾಜ ಸಿರಗಾಪೂರ, ಮಹಮ್ಮದ ಮಿರಾಜೊದ್ದೀನ್, ಅಸ್ಲಂ ಚೌಂಗೆ, ಭದ್ರಶೆಟ್ಟಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here