ಶಹಾಬಾದ: ಕ್ಷೌರಿಕ ಸಮಾಜದವರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ ಸಚಿವ ಪ್ರಭು ಚವ್ಹಾಣ್ ವಿರುದ್ಧ ಕ್ರಮಕೈಗೊಳ್ಳಬೇಕು.ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಶನಿವಾರ ನಗರದ ಸವಿತಾ ಸಮಾಜ ಸಂಘದಿಂದ ಉಪತಹಸೀಲ್ದಾರ ಮಲ್ಲಿಕಾರ್ಜುನ ರೆಡ್ಡಿ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಪ್ರತಿಭಟನಾಕಾರರು, ಬಸವ ಕಲ್ಯಾಣ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಪಶು ಸಂಗೋಪನೆ ಸಚಿವ ಮತ್ತು ಔರಾದ ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಅವರು ಕ್ಷೌರ ವೃತ್ತಿಯ ಬಗ್ಗೆ ಆಡಿದರೆನ್ನಲಾದ ಅವಹೇಳನಕಾರಿ ಪದಪ್ರಯೋಗಕ್ಕೆ ಕ್ಷಮೆ ಯಾಚಿಸಬೇಕು. ಸಚಿವರು ಕ್ಷಮೆ ಕೇಳುವವರೆಗೂ ಪ್ರತಿಭಟನೆಯೂ ನಿಲ್ಲುವುದಿಲ್ಲ.
ನಳೀನ್ ಕುಮಾರ ಕಟೀಲ್ ಹೇಳಿಕೆಗೆ ಆಕ್ರೋಶ
ಒಂದು ಸಮಾಜದ ಬಗ್ಗೆ ಈ ರೀತಿ ಇಲ್ಲಸಲ್ಲದ ಮಾತುಗಳನ್ನಾಡುವುದು ಶೋಭೆ ತರುವುದಿಲ್ಲ. ಇಂತ ವ್ಯಕ್ತಿಗೆ ಒಂದು ಸಚಿವಗಿರಿ ಕೊಟ್ಟಿರುವುದು ಕಳಂಕ.ಬಾಯಿಗೆ ಬಂದಂತೆ ಮಾತನಾಡುವುದು ನೋಡಿದರೇ ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ ಎಂದು ಎನಿಸುತ್ತದೆ.ಅವರನ್ನು ಕೂಡಲೇ ಹೆಚ್ಚಿನ ಚಿಕಿತ್ಸೆ ಕೊಡಿಸಿ.ಇಲ್ಲದಿದ್ದರೇ ಮತ್ತೇನು ಅನಾಹುತ ಮಾಡುತ್ತಾರೆ ಗೊತ್ತಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಪ್ರಭು ಚವ್ಹಾಣ ಅವರ ಸಚಿವ ಸ್ಥಾನವನ್ನು ವಜಾಗೊಳಿಸಬೇಕು. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವವರೆಗೂ ರಾಜ್ಯಾದ್ಯಂತ ಉಗ್ರ ಪತ್ರಿಭಟನೆ ನಡೆಸಲಾಗುವದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸವಿತಾ ಸಮಾಜ ಶಹಬಾದ ತಾಲೂಕ ಅಧ್ಯಕ್ಷ ದಶರಥ.ಎಸ್. ಕೋಟನೂರ, ಪ್ರಧಾನ ಕಾರ್ಯದರ್ಶಿ ವೀರಭದ್ರಪ್ಪಾ ಮೊರೆ, ಉಪಾಧ್ಯಕ್ಷ ನರಸಪ್ಪ ಸತನೂರ, ಖಜಾಂಚಿ ಕಂಟಪ್ಪ.ಬಿ.ಕೋಟನೂರ., ಮಲ್ಲು ಅಲ್ಲಿಪುರ್, ಶಿವು ಗೋರಕುಂಡಾ, ರವಿ ಹುಲಗೊಳ್, ಮುಖಂಡರಾದ ಸಂತೋ?.ಎಸ್.ಕೊಟನೂರ, ರವಿ ಸತನೂರ, ಅಂಜು ಗುರುಜಲ್ ಇತರರು ಇದ್ದರು.