ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ‘ಕನ್ನಡ ಭಾಷಾ ಮಾಧ್ಯಮ’ ಪ್ರಶಸ್ತಿ ಪ್ರದಾನ

0
106

ಕಲಬುರಗಿ: ನಗರದ ಡಾ. ಎ  ಎಸ್. ಎಂ  ಪಂಡಿತ ರಂಗ ಮಂದಿರದಲ್ಲಿ ಕನ್ನಡ ಅಭಿವೃದ್ಧಿ ಪ್ರಧಿಕಾರ ವತಿಯಿಂದ ಕನ್ನಡ ಮಾಧ್ಯಮದಲ್ಲಿ  ಹೆಚ್ಚು ಅಂಕ ಪಡೆದ  ವಿದ್ಯಾರ್ಥಿಗಳಿಗೆ ‘ಕನ್ನಡ ಭಾಷಾ ಮಾಧ್ಯಮ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಸ್ತಾವಿಕವಾಗಿ ಮಾತನಾಡಿದ ಪ್ರೊ. ಎಸ್. ಜಿ. ಸಿದ್ದರಾಮಯ್ಯ  ಅವರು ಬಹುತ್ವ ಭಾರತದ ಪ್ರತೀಕ ಭಾಷೆಯಾಗಿದೆ ಒಕ್ಕೂಟ ಭಾರತದ ಒಳಗೆ  ಬಹುತ್ವ ವನ್ನು  ಕೇಂದ್ರ ಸರಕಾರ ಗೌರವಿಸಬೇಕು ಎಂದು ಕರೆ ನೀಡಿದರು.

Contact Your\'s Advertisement; 9902492681

ಒಂದು ಕಾಲಕ್ಕೆ ಕನ್ನಡದಲ್ಲಿ ಮಾತನಾಡಲು ಹಿಂಜರಿಕೆ ಮಾಡುತಿದ್ದ ಸ್ಥಿತಿ ಹೈದರಾಬಾದ್ ಕರ್ನಾಟಕ ದಲ್ಲಿ ಇತ್ತು  ಆದರೆ ಇಂದು ಎಲ್ಲ ಧರ್ಮ ಜಾತಿ ಜನರು ಕನ್ನಡ ಓದುವ, ಮಾತನಾಡುವ, ಶಿಕ್ಷಣ ಪಡೆಯುವ ಸ್ಥಿತಿಗೆ ಬಂದದ್ದು ನಮ್ಮ ಭಾಗದ ವಿದ್ಯಾರ್ಥಿಗಳು  ತಲುಪಿದ್ದು ಹೆಮ್ಮೆಪಡುವವಂತದ್ದಾಗಿದೆ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಶಿವಶರಣ ಮುಳೇಗಾಂವ ಅವರು ಪ್ರತಿಭಾವಂತ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳ ಕುರಿತು ಸಂಸ್ಕೃತಿ ಚಿಂತಕ ಡಾ. ಜಯಶ್ರೀ ದಂಡೆ ಮಾತನಾಡಿ, ಕನ್ನಡ ಭಾಷೆ ನಮ್ಮ  ಸಂಸ್ಕೃತಿಯೂ ಆಗಿದೆ. ಕನ್ನಡಕ್ಕೆ ಕುತ್ತು ಬಂದಾಗ ಕನ್ನಡಿಗರು ಸುಮ್ಮನೆ ಕುಳಿತಿಲ್ಲ. ಪ್ರತಿಭಟಿಸಿ ಭಾಷೆ ಮತ್ತು ಸಂಸ್ಕೃತಿಯ ಅಸ್ಮಿತೆ ಯನ್ನು ರಕ್ಷಿಸಿದ್ದು ಇತಿಹಾಸದಲ್ಲಿ ನೋಡುತ್ತೇವೆ ಹನ್ನೆರಡನೆಯ ಶತಮಾನದ ವಚನಕಾರರು ಕನ್ನಡ ಭಾಷೆ ಸಾಹಿತ್ಯದ ಅಸ್ಮಿತೆ ಎತ್ತಿ ಹಿಡಿಯುವ ಪ್ರಯತ್ನ ಮಾಡಿದ್ದನ್ನು ನೆನೆದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ ಎಸ್. ಜಿ. ಸಿದ್ದರಾಮಯ್ಯ, ನಿವೃತ್ತ ಪ್ರಾಧ್ಯಾಪಕರು  ಸಾಹಿತಿ ಡಾ ವೀರಣ್ಣ ದಂಡೆ ಅವರು  ಮತ್ತು  ಜಿಲ್ಲಾ ಕನ್ನಡ  ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ, ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳೀಧರ ಹಾಗೂ  ಕನ್ನಡ ಪ್ರಾಧಿಕಾರದ ಜಾಗೃತಿ ಸಮಿತಿ ಸದಸ್ಯ ಡಾ. ಆನಂದ ಸಿದ್ದಮಣಿ, ಡಾ. ಚಿ. ಸಿ. ನಿಂಗಣ್ಣ, ಎಸ್. ಕೆ. ಬಿರಾದಾರ, ಶಿವಾನಂದ ಅಣಜಗಿ, ಡಾ. ರಾಜಶೇಖರ ಮಾಂಗ, ನದಾಫ್  ಅವರು  ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭ ತುಂಬಾ ತರಾತುರಿಯಲ್ಲಿ ಸಮಾರಂಭ ನಡೆದಂತೆ ಕಂಡು ಬಂದಿತು. ವೇದಿಕೆಯಲ್ಲಿದ್ದ ಬ್ಯಾನರ್ ನಲ್ಲಿ ಸ್ಥಳ ಎಂ. ಎಸ್. ಪಂಡಿತ  ರಂಗಮಂದಿರ ಎಂದು ಅಚ್ಚಾಗಿದ್ದದ್ದು ಕಾಣಿಸಿದಲ್ಲದೇ, ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದ ಜನಪ್ರತಿನಿಧಿಗಳು ವೇದಿಕೆಗೆ ಗೈರು ಹಾಜರಾದದ್ದು ಕಾರ್ಯಕ್ರಮದಲ್ಲಿ ಗೋಚರಿಸಿತು. ವೇದಿಕೆಯ ಮೇಲೆ ಅತಿಥಿಗಳನ್ನು ಆಹ್ವಾನಿಸದೇ ಸಂಯೋಜಕರು ನಾಡಗೀತೆಯೊಂದಿಗೆ ಕಾರ್ಯಕ್ರಮ ನಿರ್ವಹಿಸುವ ಮೂಲಕ ತರಾತುರಿಯಲ್ಲಿ ಸಮಾರಂಭ ನಡೆಸಿದು ಕಂಡು ಬಂತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here