ಜೇವರ್ಗಿ: ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಮಂಗಳವಾರ ದಿನದಂದು ಸಂತೆಯ ರದ್ದುಪಡಿಸಿದ್ದು ವಿವಿಧ ಹಳ್ಳಿಗಳಿಂದ ಆಗಮಿಸಿದ ಸಣ್ಣ ವರ್ತಕರು ಹಾಗೂ ರೈತರಿಗೆ ತೊಂದರೆ ಉಂಟಾಗಿದೆ.
ಬೇರೆ ಯಾವ ತಾಲೂಕಿನಲ್ಲಿಯೂ ಸಂತೆಗಳನ್ನು ರದ್ದು ಪಡಿಸಿಲ್ಲ ಇತರೆಲ್ಲ ವ್ಯಾಪಾರ ವಹಿವಾಟುಗಳು ಸುಗಮವಾಗಿ ನಡೆಯುತ್ತಿವೆ .ಆದರೆ ಜೇವರ್ಗಿಯಲ್ಲಿ ಮಾತ್ರ ಮಂಗಳವಾರ ದಿನದಂದು ಸಂತೆಯನ್ನು ಯಾಕೆ ರದ್ದುಗೊಳಿಸಲಾಗಿದೆ? ಎಂದು ಪ್ರಶ್ನಿಸಿದ್ದಾರೆ.
ಸ್ಲಂ ಜನಾಂದೋಲನಾ ಜಿಲ್ಲಾ ಸಮಿತಿಯಿಂದ ಜಗಜೀವನರಾಮ ಪ್ರತಿಮೆಗೆ ಮಾಲಾರ್ಪಣೆ
ಮಂಗಳವಾರ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದರೆ ನಾವು ಇಲ್ಲಿಗೆ ಬರುವುದೇ ಇಲ್ಲ ಎಂದು ರೈತರು ಹಾಗೂ ಸಣ್ಣಪುಟ್ಟ ವರ್ತಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಕುರಿತಂತೆ ತಹಸೀಲ್ದಾರ್ ಕಚೇರಿ ಎದುರು ಜಮಾಯಿಸಿದ ವರ್ತಕರು ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಹಾಗೂ ಸಂತೆ ನಡೆಸಲು ಅವಕಾಶ ನೀಡಬೇಕೆಂದು ಹೇಳಿದ್ದಾರೆ.
ಈ ಕುರಿತಂತೆ ಪುರಸಭೆಯ ಸಿಬ್ಬಂದಿಗಳು ರಸ್ತೆಯ ಪಕ್ಕದಲ್ಲಿ ಸಂತೆಯಲ್ಲಿ ಮಾರಾಟಕ್ಕೆ ಇಟ್ಟಿದ್ದ ತರಕಾರಿಗಳನ್ನು ತೆಗೆದುಕೊಂಡು ಹೋಗುವಂತೆ ಅವರನ್ನು ಅಲ್ಲಿಂದ ಎಬ್ಬಿಸಲಾಗಿದೆ ಎಂದು ತಿಳಿದುಬಂದಿದೆ.