ಕಲಬುರಗಿ: 2ನೇ ಹಂತದ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಪ್ರತಿ ಗ್ರಾಮದಲ್ಲಿ, ವಾರ್ಡಗಳ ಮನೆ ಮನೆಗಳಿಗೆ ಹೋಗಿ ಕೊರೋನಾ ಲಸಿಕೆ ಹಾಕಿ ಜನರ ಆರೋಗ್ಯ ಕಾಪಾಡಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿಗೆ ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ಅಧಕ್ಷ ಶಿವರಾಜ ಅಂಡಗಿ ಮನವಿ ಸಲ್ಲಿಸಿದರು.
ಈ ವೇಳೆಯಲ್ಲಿ ನೂತನವಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಡಾ. ಶರಣಬಸಪ್ಪಾ ಗಣಜಲಖೇಡ ಅವರಿಗೆ ವಿಶ್ವ ಆರೋಗ್ಯ ದಿನಾಚರಣೆ ನಿಮಿತ್ತ ಹೂಗುಚ್ಛ ನೀಡುವ ಮುಖಾಂತರ ಅಭಿನಂದನೆ ಸಲ್ಲಿಸಿ ಮನವಿ ಪತ್ರ ನೀಡಿದರು. ಉದ್ಯಮಿ ರವಿ ಗಣಜಲಖೇಡ ಹಾಗೂ ಡಾ. ಜಯಶ್ರೀ ಗಣಜಲಖೇಡ ಉಪಸ್ಥಿತರಿದ್ದರು.