ಯಾದಗಿರ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಮಳೆಗಾಗಿ ದೇಗುಲಗಳಲ್ಲಿ ವಿಶೇಷ ಪೂಜೆ

0
231
  • ಶ್ರೀಕಾಂತ್ ಸಾಹುಕಾರ್, 

ಕೆಂಭಾವಿ: ಕೆಂಭಾವಿ ಪಟ್ಟಣದಲ್ಲಿ ಮಳೆಗಾಗಿ ನಡೆಯುವ ವಿಶೇಷ ಪೂಜೆ ಹಿಂದಿನ ಸಂಪ್ರದಾಯದಂತೆ ಪ್ರತಿ ವರ್ಷವು ಕೂಡ ಪಟ್ಟಣದ ಎಲ್ಲಾ ಹಿರಿಯರು, ರೈತರು ಸೇರಿದಂತೆ ಯಾವುದೇ ಜಾತಿ ಮತ, ಭೇದವಿಲ್ಲದೆ ಎಲ್ಲರೂ ಪಾಲ್ಗೊಂಡು.

ಮಳೆಗಾಗಿ ಪಟ್ಟಣದಲ್ಲಿರುವ ಒಂದು ನೂರಾ ಒಂದು (101) ಲಿಂಗಗಳಿಗೆ ಭಾಜ ಭಜಂತ್ರಿ, ಡೊಳ್ಳು, ಭಜನೆಯೊಂದಿಗೆ ಪಂಚಾಮೃತ ಅಭಿಷೇಕ ಮತ್ತು ಪಟ್ಟಣದ ಸಿಮೆ ಬದುವಿಗೆ ಇರುವ “ಶ್ರೀರಾಮಲಿಂಗೇಶ್ವ ದೇವಸ್ಥಾನಕ್ಕೆ ತೆರಳಿ ಊರಿನ ಪ್ರಮುಖರು ಮತ್ತು ಪಟ್ಟಣದ ಸಾವಿರಾರು ರೈತರು ಸೇರಿದಂತೆ ಒಂದು ರಾತ್ರಿ ಅಲ್ಲಿಯೇ ಇದ್ದು  “ದೇವರ ಲಿಂಗಕ್ಕೆ ಮಳೆಗಾಗಿ ಗಂಧದಾಭಿಷೇಕ, ಕುಂಕುಮಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ ನೆರವೇರಿಸಿ.

Contact Your\'s Advertisement; 9902492681

ಶ್ರೀರಾಮಲಿಂಗೇಶ್ವರರನ್ನು ಕೆಂಭಾವಿಯ ಪಟ್ಟದ ದೇವರಾದ ಶ್ರೀ ಮಲ್ಲಿಕಾಜು೯ನ ಪೂಜಾರಿ ಅವರೊಂದಿಗೆ ಪಲ್ಲಕ್ಕಿ ಸಮೇತ ಮಣ್ಣಿನ ಕೂಡದೊಂದಿಗೆ ಅಲ್ಲಿನ ದೇವಸ್ಥಾನದ ಕೆಳಗಿನ ಕೂಂಡದಿಂದ ಮಡಿಯಿಂದ ನೀರು ತಂದು ಕೆಂಭಾವಿ ಪುರಾಣ ಪ್ರಸಿದ್ಧ ಶ್ರೀ ರೇವಣಸಿದ್ದೇಶ್ವರರ ದೇವಸ್ಥಾನದಲ್ಲಿ ಪಂಚ ಲಿಂಗದ ಗದ್ದುಗೆಗೆ ಅಭಿಷೇಕ ಮಾಡುವದು ಸಂಪ್ರದಾಯ ಪ್ರತಿವರ್ಷ ಕೊಡ ನಡೆಯುವುದು ವಾಡಿಕೆ ಇದೆ ಎಂದು ರೈತ ಮುಖಂಡ ಹಾಗೂ ಜಾನಪದ ಪ್ರಶಸ್ತಿ ಪುರಸ್ಕೃತ ಮುರಗೇಶ ಸಾಹು ಹುಣಸಗಿ ಹೇಳಿದರು.

ಲೋಕ ಕಲ್ಯಾಣಕ್ಕಾಗಿ ಉತ್ತಮ ಮಳೆ, ಬೆಳೆಯಾಗಿ ರೈತಾಪಿ ವರ್ಗದ ಸಂಕಷ್ಟ ಪರಿಹಾರವಾಗಲೆಂದು ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ರೈತ ಮುಖಂಡ ಮಡಿವಾಳಪ್ಪಗೌಡ ಪೋ ಪಾಟೀಲ ಮಾತನಾಡಿ ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ತೀವ್ರ ತರಹವಾದ ಬರಗಾಲ ವ್ಯಾಪಿಸಿ ರೈತಾಪಿ ವರ್ಗ ಹಾಗೂ ಜನಸಾಮಾನ್ಯರು ಕುಡಿಯುವ ನೀರಿಗೂ ಪರಿತಪ್ಪಿಸುವ ಸ್ಥಿತಿ ನಿರ್ಮಾಣವಾಗಿದ್ದು ಇದರ ಪರಿಹಾರಕ್ಕಾಗಿ ಪಟ್ಟಣದ 101 ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತೆಂದರು.

ಉತ್ತಮ ಮಳೆಯಾಗಿ ಕೆರೆ ಕಟ್ಟೆ ಜಲಾಶಯಗಳು ತುಂಬಬೇಕು, ಜನರ ಬದುಕು ಹಸನಾಗಬೇಕು ಅದಕ್ಕಾಗಿ ಮಳೆ ಬೆಳೆಯಾಗಿ ಸಮೃದ್ಧಿ ನೆಲೆಸಲು ಪ್ರಾರ್ಥನೆ ಸಲ್ಲಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು ಎಂದು ಪುರಸಭೆ ಸದಸ್ಯ ಮಹಿಪಾಲರೆಡ್ಡಿ ದಿಗ್ಗಾವಿ ಹೇಳಿದರು.

ವಿಶೇಷ ಪೂಜೆ ವೇಳೆ ಬಾಪೂಗೌಡ ಪೋ ಪಾಟೀಲ,ಮಲ್ಕನಗೌಡ ಪೋ ಪಾಟೀಲ, ಸುರೇಶಗೌಡ ಪೋ ಪಾಟೀಲ,ನಿಜಗುಣಿ ಬಡಿಗೇರ,ಚೆನ್ನಯ್ಯ ಚಿಕ್ಕಮಠ, ಶಿವರೆಡ್ಡಿ ಧರಿ,ಬಾಳಪ್ಪ ಚಾನಕೋಟಿ, ಸೇರಿದಂತೆ ಮಹಿಳೆಯರು, ಮಕ್ಕಳು, ಸಾರ್ವಜನಿಜರು ಹಾಗೂ ಭಕ್ತಾಧಿಗಳು ಪಾಲ್ಗೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here