ದೇಶಾದ್ಯಂತ ಬಿರುಬೇಸಿಗೆಯ ಬಿಸಿ ಏರುತ್ತಿದ್ದಂತೆ ಮನೆಗಳಲ್ಲಿ ಆರಾಮದಾಯಕವಾದ ವಾತಾವರಣ ನಿರ್ಮಾಣಕ್ಕೆ ಕೂಲಿಂಗ್ ಅಪ್ಲಾಯನ್ಸ್ ಗೆ ಬೇಡಿಕೆ ಹೆಚ್ಚಾಗತೊಡಗಿದೆ. ಗ್ರಾಹಕರ ಆರೋಗ್ಯ ಮತ್ತು ನೈರ್ಮಲ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿರುವ ಹೊಸ ಪೀಳಿಗೆಯ ಕೂಲಿಂಗ್ ಅಪ್ಲಾಯನ್ಸ್ ಗೆ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ.
ಫ್ಲಿಪ್ ಕಾರ್ಟ್ ನ ಒಳನೋಟಗಳ ಪ್ರಕಾರ, ಪ್ರಸ್ತುತದ ಬಿಸಿ ಹವೆಯ ಪರಿಣಾಮ ಕೂಲಿಂಗ್ ಅಪ್ಲಾಯನ್ಸ್ ಗಳಾದ ಎಸಿಗಳು, ರೆಫ್ರಿಜರೇಟರ್ ಗಳು, ಕೂಲರ್ ಗಳು ಮತ್ತು ಫ್ಯಾನ್ ಗಳಿಗೆ ದೇಶಾದ್ಯಂತ ಬೇಡಿಕೆ ಹೆಚ್ಚಳವಾಗಿದೆ.
ಬೆಂಗಳೂರು ನಗರದಲ್ಲಿ ಒಟ್ಟಾರೆ ಕೂಲಿಂಗ್ ಅಪ್ಲಾಯನ್ಸ್ ವಿಭಾಗದಲ್ಲಿ ಶೇ.1.2 ಪಟ್ಟು ಹೆಚ್ಚಳ ಕಂಡುಬಂದಿದೆ. ಇದರಲ್ಲಿ ಪ್ರಮುಖವಾಗಿ ಎಸಿಗಳು, ಸೀಸನಲ್ ಅಪ್ಲಾಯನ್ಸ್ ಗಳು (ಕೂಲರ್ ಗಳು ಮತ್ತು ಫ್ಯಾನ್ ಗಳು) ಹಾಗೂ ರೆಫ್ರಿಜರೇಟರ್ ವಿಭಾಗದಲ್ಲಿ ಕ್ರಮವಾಗಿ 1.3 ಪಟ್ಟು, 1.3 ಪಟ್ಟು ಮತ್ತು 1.1 ಪಟ್ಟಿನಷ್ಟು ಬೇಡಿಕೆ ಹೆಚ್ಚಾಗಿದೆ.
ರಸಗೊಬ್ಬರ ಬೆಲೆ ಏರಿಕೆ ಕನ್ನಡ ಭೂಮಿ ಖಂಡನೆ
ಗ್ರಾಹಕರು ಆರೋಗ್ಯ ಮತ್ತು ನೈರ್ಮಲ್ಯ ಹಾಗೂ ಸುಲಭ ದರದಲ್ಲಿ ಲಭ್ಯವಾಗುವ ಆ್ಯಂಟಿ ಬ್ಯಾಕ್ಟೀರಿಯಲ್, ಏರ್ ಪ್ಯೂರಿಫಿಕೇಷನ್ ಮತ್ತು ಇಂಧನ ಉಳಿತಾಯದ ವೈಶಿಷ್ಟ್ಯತೆಗಳಿರುವ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಲು ಆದ್ಯತೆ ನೀಡುತ್ತಿದ್ದಾರೆ.
ಈ ಹಿಂದೆಯೂ ಈ ವೈಶಿಷ್ಟ್ಯತೆಗಳು ಇದ್ದವಾದರೂ ಗ್ರಾಹಕರಲ್ಲಿ ವಾಯು ಗುಣಮಟ್ಟಕ್ಕೆ ಆದ್ಯತೆ ನೀಡುವುದು ಹೆಚ್ಚಾಗಿದೆ. ಫ್ಲಿಪ್ ಕಾರ್ಟ್ ಆ್ಯಪ್ ನಡೆಸಿರುವ ಗ್ರಾಹಕ ಸಮೀಕ್ಷೆ ಪ್ರಕಾರ, ಬಹುತೇಕ ಮಂದಿ ಗ್ರಾಹಕರು ತಮ್ಮ ಎಸಿಗಳಲ್ಲಿ ಬಿಲ್ಟ್-ಇನ್- ಏರ್ ಪ್ಯೂರಿಫೈಯರ್ ಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಈ ಆದ್ಯತೆಯು ಸ್ಯಾಮ್ಸಂಗ್, ಹೈಯರ್, ವರ್ಲ್ ಪೂಲ್, ಡೈಕಿನ್, ಬ್ಲೂಸ್ಟಾರ್, ವೋಲ್ಟಾಸ್ ಮತ್ತು ಗೋದ್ರೇಜ್ ನಂತಹ ಹೆಸರಾಂತ ಕಂಪನಿಗಳು ಈ ವೈಶಿಷ್ಟ್ಯತೆಗಳನ್ನು ಹೊಂದಿರುವ ಎಸಿ ಬ್ರ್ಯಾಂಡ್ ಗಳನ್ನು ಬಿಡುಗಡೆ ಮಾಡಲು ಕಾರಣವಾಗಿದೆ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಗ್ರಾಹಕರು ಈ ಕಂಪನಿಗಳ ಬಹುವೈಶಿಷ್ಟ್ಯಗಳಿರುವ ಕೂಲಿಂಗ್ ಅಪ್ಲಾಯನ್ಸ್ ಗಳನ್ನು ಖರೀದಿಸುತ್ತಿದ್ದಾರೆ.
ರಸಗೊಬ್ಬರ ಬೆಲೆ ಏರಿಕೆ ದೇಶ ವಿನಾಶದ ಕೃತ್ಯ: ಸಿದ್ದರಾಮಯ್ಯ
ರೆಫ್ರಿಜರೇಟರ್ ವಿಭಾಗದಲ್ಲಿ ಇಂಧನ ಸಮರ್ಥತೆ ಮತ್ತು ಕನ್ವರ್ಟಿಬಲ್ ವೇರಿಯೆಂಟ್ ಆಫರಿಂಗ್ ನ ಹೆಚ್ಚು ಸ್ಟೋರೇಜ್ ಸಾಮರ್ಥ್ಯದ ರೆಫ್ರಿಜರೇಟರ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ವಿಶೇಷವೆಂದರೆ, ಕರ್ಡ್ ಮೇಕರ್ ನಂತಹ ಬಹುಕಾರ್ಯನಿರ್ವಹಣೆಯ ರೆಫ್ರಿಜರೇಟರ್ ಗಳನ್ನು ಹೆಚ್ಚು ಗ್ರಾಹಕರು ಬಯಸುತ್ತಿದ್ದಾರೆ. ವಿಶ್ವದ ಇತರೆ ಭಾಗಗಳಿಗೆ ಹೋಲಿಸಿದರೆ ಫ್ರೀಜರ್ ಬಳಕೆ ಭಾರತಕ್ಕೆ ಮಾತ್ರ ಸೀಮಿತವಾಗಿದೆ. ಕನ್ವರ್ಟಿಬಲ್ ಆಯ್ಕೆಗಳು ಫ್ರೀಜರ್ ವಿಭಾಗವನ್ನು ಸಾಮಾನ್ಯ ಫ್ರಿಡ್ಜ್ ಗಳಿಗೆ ರೂಪಾಂತರಗೊಳಿಸುತ್ತಿವೆ. ಸುದೀರ್ಘ ಅವಧಿಯಿಂದ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿರುವುದು ಮತ್ತು ಕಲಿಯುತ್ತಿರುವುದರಿಂದ ಗ್ರಾಹಕರು ಹೆಚ್ಚು ಸ್ಟೋರೇಜ್ ಸ್ಥಳಾವಕಾಶವಿರುವ ರೆಫ್ರಿಜರೇಟರ್ ಗಳಿಗೆ ಆದ್ಯತೆ ನೀಡುತ್ತಿದ್ದಾರೆ.
ಇದಲ್ಲದೇ, ಫ್ಲಿಪ್ ಕಾರ್ಟ್ ನಲ್ಲಿ ಹೆಚ್ಚಿನ ಗ್ರಾಹಕರು ರೆಫ್ರಿಜರೇಟರ್ ಖರೀದಿ ವೇಳೆ ರೀಪ್ಲೇಸ್ ಮೆಂಟ್ ಅನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ, ಕಳೆದ ಒಂದು ವರ್ಷದಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆ ಮಾಡಿಕೊಂಡಿರುವವರ ಸಂಖ್ಯೆಯಲ್ಲಿ ಶೇ. 20 ರಷ್ಟು ಹೆಚ್ಚಳವಾಗಿದೆ. ಇದು ಗ್ರಾಹಕರಿಗೆ ಸುಲಭ ದರದಲ್ಲಿ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಈ ಅಂಶಗಳೊಂದಿಗೆ ಫ್ಲಿಪ್ ಕಾರ್ಟ್ ಸುಲಭ ದರದ ಆಧಾರದಲ್ಲಿ ಗ್ರಾಹಕರ ಅಪ್ಲಾಯನ್ಸ್ ಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ನೆರವಾಗುತ್ತಿದೆ.
ವಿಜೃಂಭಣೆಯಿಂದ ಅಂಬೇಡ್ಕರ ಜಯಂತಿ ಆಚರಿಸಿ: ಜಿಲ್ಲಾಧಿಕಾರಿ ಡಾ:ರಾಗಪ್ರೀಯ
ಇವೆಲ್ಲದರ ಜತೆಗೆ ಗ್ರಾಹಕರು ಇಂಧನ ಕ್ಷಮತೆಯ ಎಸಿಗಳು ಮತ್ತು ರೆಫ್ರಿಜರೇಟರ್ ಗಳನ್ನು ಖರೀದಿಸುವ ಮೂಲಕ ತಮ್ಮ ವಿದ್ಯುತ್ ಬಿಲ್ ಅನ್ನು ಉಳಿತಾಯ ಮಾಡಿಕೊಳ್ಳುವುದು ಮತ್ತು ಕಾರ್ಯಾಚರಣೆಯ ವೆಚ್ಚವನ್ನು ತಗ್ಗಿಸುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ. ಈ ಹಿಂದೆ 5 ಸ್ಟಾರ್ ಹೈ ಕೆಪ್ಯಾಸಿಟಿ, ಹೆಚ್ಚು ಇಂಧನ ಕ್ಷಮತೆ ಎಸಿಗಳು, ರೆಫ್ರಿಜರೇಟರ್ ಗಳ ಬೇಡಿಕೆಯಲ್ಲಿ ಶೇ.40 ರವರೆಗೆ ಹೆಚ್ಚಳವಾಗಿತ್ತು. ಈಗಲೂ ಇದೇ ಟ್ರೆಂಡ್ ಮುಂದುವರಿದಿದೆ.
ಮೇಲೆ ಪ್ರಸ್ತಾಪಿಸಲಾಗಿರುವ ಟ್ರೆಂಡ್ ಗಳು ಕೇವಲ ಮೆಟ್ರೋ ನಗರಗಳಿಗೆ ಸೀಮಿತವಾಗಿಲ್ಲ. ಬದಲಿಗೆ ಸಣ್ಣ ನಗರಗಳು ಮತ್ತು 2 & 3 ನೇ ದರ್ಜೆಯ ನಗರಗಳಲ್ಲಿಯೂ ಈ ಟ್ರೆಂಡ್ ಇರುವುದನ್ನು ಫ್ಲಿಪ್ ಕಾರ್ಟ್ ಸಮೀಕ್ಷೆ ಬಹಿರಂಗಪಡಿಸಿದೆ. ಈ ಟ್ರೆಂಡ್ ಸಣ್ಣ ಸಣ್ಣ ಪಟ್ಟಣಗಳಲ್ಲಿ ಬದಲಾವಣೆಗೊಳ್ಳುತ್ತಿರುವ ಗ್ರಾಹಕರ ಮನೋಭಾವನೆ ಮತ್ತು ಖರೀದಿ ಆದ್ಯತೆಯಲ್ಲಿ ಬದಲಾವಣೆಯಾಗುತ್ತಿರುವುದರ ಸೂಚಕವಾಗಿದೆ.
ಫ್ಲಿಪ್ ಕಾರ್ಟ್ ಲಾರ್ಜ್ ಅಪ್ಲಾಯನ್ಸಸ್ ನ ಉಪಾಧ್ಯಕ್ಷ ಹರಿ ಜಿ.ಕುಮಾರ್ ಅವರು ಮಾತನಾಡಿ, “ಕೋವಿಡ್-19 ಸಾಂಕ್ರಾಮಿಕವು ಈಗ ಏರ್ ಪ್ಯೂರಿಫೈಯರ್, ವಿಸ್ತರಿಸಬಹುದಾದ ಸ್ಟೋರೇಜ್ ಮತ್ತು ಇಂಧನ ದಕ್ಷತೆಯ ಕ್ರಿಯಾತ್ಮಕತೆಗಳು ಇರುವ ಉತ್ಪನ್ನಗಳನ್ನು ಗ್ರಾಹಕರು ತಮ್ಮ ಹೆಚ್ಚಿನ ಆದ್ಯತೆಗಳನ್ನಾಗಿ ನೋಡುವಂತೆ ಮಾಡಿದೆ. ಇದು ಭಾರತದಲ್ಲಿ ಕೂಲಿಂಗ್ ಅಪ್ಲಾಯನ್ಸ್ ಗಳ ಮಾರುಕಟ್ಟೆಯ ಪಕ್ವತೆಯ ಸೂಚಕವಾಗಿದ್ದು, ಇದು ಈ ವರ್ಷ ಮತ್ತಷ್ಟು ಗಮನಾರ್ಹ ಬೆಳವಣಿಗೆಯನ್ನು ಕಾಣಲಿದೆ.
ಕಲಬುರಗಿ: ಅತ್ಯುತ್ತಮ ಡೇಟಾ ಎಂಟ್ರಿ ಆಪರೇಟರ್ ಪ್ರಶಸ್ತಿ ಪ್ರದಾನ
ಗ್ರಾಹಕರ ಅಗತ್ಯತೆಗಳ ಸೂಕ್ಷ್ಮವಾದ ತಿಳುವಳಿಕೆಯೊಂದಿಗೆ ಸ್ವದೇಶಿ ಇ-ಕಾಮರ್ಸ್ ಮಾರುಕಟ್ಟೆಯಾಗಿರುವ ಫ್ಲಿಪ್ ಕಾರ್ಟ್ ಲಕ್ಷಾಂತರ ಭಾರತೀಯ ಗ್ರಾಹಕರಿಗೆ ಅವರ ಮನೆ ಬಾಗಿಲಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪೂರೈಸುವ ನಿಟ್ಟಿನಲ್ಲಿ ನಾವು ಪ್ರಮುಖವಾದ ಬ್ರ್ಯಾಂಡ್ ಗಳು ಮತ್ತು ಮಾರಾಟ ಪಾಲುದಾರರೊಂದಿಗೆ ಸಹಭಾಗಿತ್ವವನ್ನು ಮುಂದುವರಿಸುತ್ತೇವೆ’’ ಎಂದರು.