ಸಂಗೀತದಿಂದ ಮಾನಸಿಕ ನೆಮ್ಮದಿ: ಡಾ. ಎಂ.ಎಸ್. ಪಾಟೀಲ

0
53

ಕಲಬುರಗಿ: ವಿಶ್ವ ಸಂಗೀತ ದಿನ ಹಾಗೂ ಪಂಡಿತ ಪಂಚಾಕ್ಷರಿಗಳ ಪುಣ್ಯತಿಥಿ ಅಂಗವಾಗಿ ನಗರದ ಅಪ್ಪಪಬ್ಲಿಕ್ ಶಾಲೆಯಲ್ಲಿ ಇಂದು ಸಂಜೆ ಮಕ್ಕಳಿಂದ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮೊದಲಿಗೆ ನಾಲ್ಕನೆ ತರಗತಿ ವಿದ್ಯಾರ್ಥಿನಿಯರು ‘ಬಸವಣ್ಣನವರ ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂಬ ವಚನ ಪ್ರಾರ್ಥನೆ ನೆರವೇರಿಸಿದರು.

Contact Your\'s Advertisement; 9902492681

ನಂತರ ಐದನೆ ತರಗತಿ ವಿದ್ಯಾರ್ಥಿಗಳು ‘ನೌಜವಾನ್ ದೇಶಕಿ’ ಎಂಬ ಹಾಡು ದೇಶಾಭಿಮಾನ ಮೂಡಿಸುವಂತಿತ್ತು.
ಐದನೆ ತರಗತಿ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಜಾನಪದ ಗೀತೆ ಗಮನಸೆಳೆಯುವಂತಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಡಾ. ಎಂ.ಎಸ್. ಪಾಟೀಲ ಮಾತನಾಡಿ, ಸಂಗೀತ ಮಾನಸಿಕ ನೆಮ್ಮದಿಗೆ ಮೆಡಿಸಿನ್ ಆಗಿ ಉಪಯೋಗಿಸುತ್ತಿದ್ದಾರೆ. ಸಂಗೀತ ಹಾಡುವುದು, ಕೇಳುವುದರಿಂದ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಡಾ. ಛಾಯಾ ಭರತನೂರ ಮಾತನಾಡಿದರು. ಶಾಲೆಯ ಪ್ರಾಚಾರ್ಯ ಶಂಕರಗೌಡ ಅಧ್ಯಕ್ಷತೆ ವಹಿಸಿದ್ದರು. ಸಮತಾ ಪಾಟೀಲ, ಮಲ್ಲಿನಾಥ ಹಾವನೂರ ಇತರರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here