ನಯ ಸವೇರ ಸಂಘಟನೆಯಿಂದ ಅಂಬೇಡ್ಕರ್ ಜಯಂತೋತ್ಸವ ನಿಮಿತ್ತ ಪ್ರತಿಜ್ಞೆ ವಿಧಿ ಸ್ವೀಕರ

0
42

ಕಲಬುರಗಿ: ನಯ ಸವೇರ ಸಂಘಟನೆ ವತಿಯಿಂದ ಡಾ. ಬಿಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಆಚರಿಸಲಾಯಿತು. ಈ ವೇಳೆಯಲ್ಲಿ ಜಿಲ್ಲಾ ಖಾಜಿ ವಂಶಸ್ಥರಾ ಡಾ. ಖಾಜಿ ಹಾಮಿದ್ ಫೈಸಲ್ ಸಿದ್ದಿಕಿ ಅವರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು .  ಈ ಸಂದರ್ಭದಲ್ಲಿ ನ್ಯಾಯದ ಪರವಾಗಿ ಹೋರಾಡುತ್ತೇವೆ ಎಂದು ಸಂವಿಧಾನದ ಪೀಠಿಕೆ ಓದಿ ಪ್ರತಿಜ್ಞೆ ವಿಧಿ ಸ್ವೀಕರಿಸಿದರು.

ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಸಂವಿಧಾನದ ರಚನೆಯಲ್ಲಿ ಮಹತ್ವದ ಪಾತ್ರವಹಿಸಿದರು. ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವ ತತ್ವಗಳ ಆಧಾರದ ಮೇಲೆ ಶೋಷಿತ ಸಮುದಾಯಗಳ ಪರವಾಗಿ ಸತತವಾಗಿ ಹೋರಾಡಿದರು ಎಂದು ಸಲೀಂ ಅಹ್ಮದ್ ಚಿತಾಪುರ್ ಪ್ರಧಾನ ಕಾರ್ಯದರ್ಶಿ ಹೇಳಿದರು.

Contact Your\'s Advertisement; 9902492681

ಡಾ. ಬಿ.ಆರ್. ಅಂಬೇಡ್ಕರ್ – ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ ಎಂದು ಸಂಘಟನೆಯ ಉತ್ತರ ವಲಯದ ಅಧ್ಯಕ್ಷರಾದ ಹೈದರ್ ಅಲಿ ಇನಮ್ದಾರ್ ಹೇಳಿದರು.

ಧರ್ಮದಲ್ಲಿ ಭಕ್ತಿಯು ಆತ್ಮಕ್ಕೆ ಮುಕ್ತಿ ಸಿಗುವ ಮಾರ್ಗವಾಗಿರಬಹುದು.ಆದರೆ ರಾಜಕೀಯದಲ್ಲಿನ ಭಕ್ತಿ ಅಥವಾ ವ್ಯಕ್ತಿ ಆರಾಧನೆ ಮುಂದೆ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ, ಭಾರತೀಯರು ಎರಡು ವಿಭಿನ್ನ ಸಿದ್ಧಾಂತಗಳಿಂದ ಆಳಲ್ಪಡುತ್ತಿದ್ದಾರೆ. ಒಂದು ಸಂವಿಧಾನದ ಪ್ರಸ್ತಾವನೆಯಲ್ಲಿ ಅವರ ರಾಜಕೀಯ ಆದರ್ಶವು ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವದ ಜೀವನವನ್ನು ದೃಢಪಡಿಸುತ್ತದೆ.ಇನ್ನೊಂದು ಅವರ ಧರ್ಮದಲ್ಲಿ ಅಡಕವಾಗಿರುವ ಸಾಮಾಜಿಕ ವಿಚಾರವು ಅವರನ್ನು ನಿರಾಕರಿಸುತ್ತದೆ. ರಾಜಕೀಯ ಪ್ರಜಾಪ್ರಭುತ್ವಕ್ಕೆ ಸಾಮಾಜಿಕ ಪ್ರಜಾಪ್ರಭುತ್ವದ ಬುನಾದಿ ಇಲ್ಲದಿದ್ದರೆ ಅದು ಧೀರ್ಘಕಾಲ ಬಾಳುವುದಿಲ್ಲ.ಸಾಮಾಜಿಕ ಪ್ರಜಾಪ್ರಭುತ್ವ ಜೀವನ ವಿಧಾನವು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಗುರುತಿಸುವ ಜೀವನದ ಮಾರ್ಗವಾಗಿದೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವ ಕೇವಲ ಒಂದು ಸರ್ಕಾರದ ರೂಪವಲ್ಲ. ಇದು ಪ್ರಾಥಮಿಕವಾಗಿ ಸಂಯೋಜಿತ ಜೀವನ, ಸಂಯೋಜಿತ ಸಂವಹನ ಅನುಭವದ ವಿಧಾನವಾಗಿದೆ. ಇದು ಮುಖ್ಯವಾಗಿ ಸಹ ಗೌರವದ ವರ್ತನೆ ಮತ್ತು ಸಹ ವ್ಯಕ್ತಿ ಕಡೆಗೆ ತೋರುವ ಗೌರವವನ್ನು ಹೊಂದಿದೆ.  ರಾಜಕೀಯ ಸರ್ವಾಧಿಕಾರವು  ಸಾಮಾಜಿಕ ಸರ್ವಾಧಿಕಾರಕ್ಕೆ ಹೋಲಿಸಿದಲ್ಲಿ ಅದು ಏನೂ ಅಲ್ಲ ಮತ್ತು ಸಮಾಜವನ್ನು ವಿರೋಧಿಸುವ ಸುಧಾರಣಾವಾದಿ ಸರ್ಕಾರವನ್ನು ವಿರೋಧಿಸುವ ರಾಜಕಾರಣಿಗಿಂತ ಹೆಚ್ಚು ಧೈರ್ಯಶಾಲಿಯಾಗಿರುತ್ತಾನೆ .” ಸಮುದಾಯವೊಂದರ ಬೆಳವಣಿಗೆಯನ್ನು ನಾನು ಮಹಿಳೆಯರ ಸಾಧನೆ ಮೇಲೆ ಅಳೆಯುತ್ತೇನೆ ಸ್ವಾತಂತ್ರ, ಸಮಾನತೆ, ಭಾತೃತ್ವವನ್ನು ಸಾರುವ ಧರ್ಮವನ್ನು ನಾನು ಇಷ್ಟಪಡುತ್ತೇನೆ ಎಂದು  ಡಾ. ಬಿಆರ್ ಅಂಬೇಡ್ಕರ್ ತಿಳಿಸಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷರಾದ ಮೋದಿನ್ ಪಟೇಲ್ ಅಣಬಿ ಕಾರ್ಯಕ್ರಮದ ಉದ್ದೇಶಿ ಮಾತನಾಡಿದರು.

ನಂತರ ಸಂಘಟನೆಯ ಉಪಾಧ್ಯಕ್ಷರಾದ ಖಾಜಾ ಪಟೇಲ್ ಸರಡಗಿ ಮಾತನಾಡಿ, ಒಬ್ಬ ಮಹಾನ್ ವ್ಯಕ್ತಿ ಒಬ್ಬ ಶ್ರೇಷ್ಠ ವ್ಯಕ್ತಿಯಿಂದ ಭಿನ್ನವಾಗಿರುತ್ತಾನೆ ಏಕೆಂದರೆ, ಅವನು ಸಮಾಜದ ಸೇವಕನಾಗಲು ಸಿದ್ಧನಾಗಿರುತ್ತಾನೆ” ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು  ಹೇಳಿದರು.

ಪ್ರಜಾಪ್ರಭುತ್ವ ಕೇವಲ ಒಂದು ಸರ್ಕಾರದ ರೂಪವಲ್ಲ. ಇದು ಪ್ರಾಥಮಿಕವಾಗಿ ಸಂಯೋಜಿತ ಜೀವನ, ಸಂಯೋಜಿತ ಸಂವಹನ ಅನುಭವದ ವಿಧಾನವಾಗಿದೆ. ಇದು ಮುಖ್ಯವಾಗಿ ಸಹ ಗೌರವದ ವರ್ತನೆ ಮತ್ತು ಸಹ ವ್ಯಕ್ತಿ ಕಡೆಗೆ ತೋರುವ ಗೌರವವನ್ನು ಹೊಂದಿದೆ ಎಂದು ಶರಣು ತೆಗನೂರ್ ಹೇಳಿದರು. ರಾಜಕೀಯ ಸರ್ವಾಧಿಕಾರವು ಸಾಮಾಜಿಕ ಸರ್ವಾಧಿಕಾರಕ್ಕೆ ಹೋಲಿಸಿದಲ್ಲಿ ಅದು ಏನೂ ಅಲ್ಲ ಮತ್ತು ಸಮಾಜವನ್ನು ವಿರೋಧಿಸುವ ಸುಧಾರಣಾವಾಧಿ ಸರ್ಕಾರ ವಿರೋಧಿಸುವ ರಾಜಕಾರಣಿಗಿಂತ ಹೆಚ್ಚು ಧೈರ್ಯಶಾಲಿಯಾಗಿರುತ್ತಾನೆ ಅರವಿಂದ್ ಭಂಡಾರಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಸಂಘಟನೆಯ ಉಪಾಧ್ಯಕ್ಷ ಸಲೀಂ ಸಗರಿ,  ರಾಬಿಯಾ ಶಿಕಾರಿ, ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಖಾಲಿಕ್,  ಕಾರ್ಯದರ್ಶಿ ಸೈರಾ ಬಾನು ಅಬ್ದುಲ್ ವಾಹಿದ್, ರಾಪಿಯ ಸಿರಿನ್ ಖಾನ್,  ಗೀತಾ ಮುದ್ಗಲ್, ಬಾಬಾ ಫಕ್ರುದ್ದಿನ್ ಅನ್ಸಾರಿ, ಮೊಹಮ್ಮದ್ ಮುಸಾ ಅಜಮ್,  ಅಬ್ದುಲ್ ರಜಾಕ್ ಚೌದರಿ, ಮಕ್ಬುಲ್  ಅಹಮದ್ ಸಗರಿ, ಅಲ್ಲಾವುದ್ದೀನ್ ಪಟೇಲ್ , ಸವಿತಾ, ಸರಿತಾ,  ಯುನುಸ್ ಪಟೇಲ್,  ಉಮೇರ್ ಶಿಕಾರಿ, ಖಾನ್ ಸಾಹೇಬ್ ಹಾಗೂ ಪವನ್ ಚಿಂಚೋಳಿ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here