ಕಲಬುರಗಿ: ಸಂವಿಧಾನ ಭಾರತ ದೇಶಕ್ಕೆ ವಿಶೇಷ ಕೊಡುಗೆಯಾಗಿ ನೀಡಿರುವ ಡಾ. ಅಂಬೇಡ್ಕರ್ ಅವರ ವಿಚಾರವನ್ನು ದಿನನಿತ್ಯದ ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ನಿಂಗಣ್ಣ ಕರಡಿ ಕರೆ ನೀಡಿದರು.
ಅವರು ಇಂದು 130 ನೇ ಬಾಬಾ ಸಾಹೇಬ್ ಅಂಬೇಡ್ಕರ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ನಾಲ್ಕು ವರ್ಷಗಳಾದರು ಇನ್ನು ಜಾತಿಯತೆ ತಾಂಡವಾಡುತ್ತಿದೆ ಅಸಮಾನತೆ ಮೇಲು ಕೀಳು ಬಡವ ಶ್ರೀಮಂತ ಹೆಣ್ಣು ಗಂಡು ಹೀಗೆ ಒಂದಲ್ಲಾ ಒಂದು ಬಗೆಯ ಅಸಮಾನತೆ ಜಿವಂತವಾಗಿದೆ ಅನಕ್ಷರಸ್ತರಿಗಿಂತ ವಿಧ್ಯಾಂವಂತರೆ ಹೆಚ್ಚು ಜಾತಿಯತೆ ಮಾಡುತ್ತಿದ್ದಾರೆ ವಿಪರ್ಯಾಸವೆಂದರೆ ನಮ್ಮಲ್ಲಿರುವ ಕೆಲವು ಅತೃಪ್ತರು ಅಸಮಾದಾನಿಗಳಿಂದಲೆ ದೇಶದಲ್ಲಿ ಜಾತಿ ಗಲಬೆಗಳು ನಡೆಯುತ್ತಿವೆ ಎಂದರು.
ಯುವ ಮುಖಂಡ ನಾಗರಾಜ ಚಲುವಾದಿ ಮಾತನಾಡಿ ಡಾ,,ಅಂಬೇಡ್ಕರ ಹುಟ್ಟಿದಾಗಿನಿಂದ ಸಾಯುವತನಕ ಕಷ್ಟ ಸವಾಲುಗಳನ್ನು ದಿಟ್ಟತನದಿಂದ ಹೆದರಿಸಿ ಹೊರಾಡಿದಂತ ಮಹಾನ ಧಿಮಂತ ವ್ಯಕ್ತಿ ಸಂವಿಧಾನದಲ್ಲಿ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಡಿಯಲ್ಲಿಯೆ ಇಂದಿಗೂ ಕೇಂದ್ರ ಸರಕಾರ ರಾಜ್ಯ ಸರಕಾರಗಳು ನಡೆಯುತ್ತಿವೆ ಶೊಷಿತರು ದಲಿತರು ಹಿಂದುಳಿದವರು ಅಸಹಾಯಕರಿಗೆ ಧ್ವನಿಯಾಗಿದ್ದು ಅಂಬೇಡ್ಕರ ವಿಚಾರಗಳನ್ನು ವಿಧ್ಯಾರ್ಥಿಗಳು ತಿಳಿದುಕೊಳ್ಳಬೇಕು ಹಲವಾರು ಪಧವಿ ಪಿಎಚ್ ಡಿ ಪಡೆದಿರುವ ಅಂಬೇಡ್ಕರ್ ಹೊರದೇಶಗಳಲ್ಲಿಯೂ ಅಧ್ಯಯನ ನಡೆಸಿದ್ದಾರೆ.
ಇಂದಿನ ವಿಧ್ಯಾರ್ಥಿಗಳಲ್ಲಿ ಶಿಕ್ಷಣದ ಕಡೆ ಆಸಕ್ತಿ ಕಡಿಮೆಯಾಗುತ್ತಿದೆ ವಿಧ್ಯಾರ್ಥಿ ಜೀವನ ಎಂಬುದು ಒಂದು ಸುವರ್ಣ ಅವಕಾಶವಿದ್ದಂತೆ ಪುಸ್ತಕ ಕೊಳ್ಳಲು ಆಗದೆ ಕಷ್ಟದಲ್ಲಿದ್ದ ಅಂಬೇಡ್ಕರ ಸಂವಿಧಾನ ರಚಿಸಿ ಭಾರತ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಹಾಗಾಗಿ ವಿಧ್ಯಾರ್ಥಿಗಳು ಪ್ರತಿನಿತ್ಯವು ಅಂಬೇಡ್ಕರ ಅವರನ್ನು ಸ್ಮರಿಸಿಕೊಂಡು ಸಾಗಬೇಕು ಎಂದರು.
ಈ ಸಂದರ್ಬದಲ್ಲಿ ಗ್ರಾಮದ ಯುವಕರು ಅಂಬೇಡ್ಕರ ಅಭಿಮಾನಿಗಳು ಮತ್ತು ಇತರರು ಭಾಗವಹಿಸಿದರು.