ಕಲಬುರಗಿ : ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ರಾಜ್ಯದಾದ್ಯಂತ ಸಾರ್ವಜನಿಕ ಸಮಾರಂಭ,ಅಚರಣೆಗಳು, ಮನೋರಂಜನಾ ಕಾರ್ಯಕ್ರಮಗಳಿಗೆ ಜನರ ಸೇರುವಿಕೆಯನ್ನು ಮಿತಿಗೊಳಿಸಿ ರಾಜ್ಯ ಸರ್ಕಾದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ರಾಜ್ಯಾದ್ಯಂತ ಸಾರ್ವಜನಿಕ ಸಮಾರಂಭ, ಆಚರಣೆಗಳು, ಮನರಂಜನೆ ಕಾರ್ಯಕ್ರಮಗಳಿಗೆ ಜನರ ಒಗ್ಗೂಡುವಿಕೆಗೆ ಇನ್ನಷ್ಟು ಬಿಗಿ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ.
ತೆರೆದ ಪ್ರದೇಶದಲ್ಲಿ ಮದುವೆ ಸಮಾರಂಭದಲ್ಲಿ 200 ಮಂದಿ ಮೀರದಂತೆ ಹಾಗೂ ಕಲ್ಯಾಣ ಮಂಟಪ, ಹಾಲ್ಗಳಲ್ಲಿ 100 ಜನ ಮೀರದಂತೆ ಜನ ಸೇರಬೇಕು ಎಂದು ಆದೇಶ ಹೊರಡಿಸಲಾಗಿದೆ.
ಜನ್ಮದಿನ ಹಾಗೂ ಇತರೆ ಆಚರಣೆ : ತೆರೆದ ಪ್ರದೇಶ- 50 ಮಂದಿಗೆ ಮಿತಿ, ಒಳಾಂಗಣ- 25 ಮಂದಿಗೆ ಮಿತಿ, ನಿಧನ/ಶವಸಂಸ್ಕಾರ : ತೆರೆದ ಪ್ರದೇಶ- 50 ಮಂದಿಗೆ ಮಿತಿ, ಒಳಾಂಗಣ- 25 ಮಂದಿಗೆ ಮಿತಿ, ಅಂತ್ಯಕ್ರಿಯೆ : 25 ಜನ ಮೀರಬಾರದು. ಇತರೆ ಸಮಾರಂಭ : 50 ಮಂದಿ ಮೀರಬಾರದು. ರಾಜಕೀಯ ಸಭೆ : ತೆರೆದ ಪ್ರದೇಶದಲ್ಲಿ 200 ಮಂದಿ ಮೀರಬಾರದು. ಧಾರ್ಮಿಕ ಆಚರಣೆ : ಸಂಪೂರ್ಣ ನಿಷೇಧ.