ಶಹಾಬಾದ: ಕರೊನಾ ವ್ಯಾಪಕವಾಗಿ ಹರಡುತ್ತಿರುವುದು ಎಲ್ಲರ ಆರೋಗ್ಯದ ದೃಷ್ಟಿಯಿಂದ ಮುಗುಳನಾಗಾವಿಯ ಮಠದ ದರ್ಶನ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ ಎಂದು ಮುಗುಳನಾಗಾವಿಯ ಸಿದ್ದಲಿಂಗ ಶಿವಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರೊನಾ ಅಟ್ಟಹಾಸದ ಸಮಯದಲ್ಲಿ ಜೀವ ಇದ್ದರೆ ತಾನೇ ಜೀವನ ಎಂಬುದು ಸಾರ್ವಜನಿಕರು ಮರೆಯಬಾರದು.ಅದಕ್ಕಾಗಿ ಸರಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು.ಅದರಲ್ಲೂ ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಕೆ ಮಾಡುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಬಹು ಮುಖ್ಯ ಆದ್ಯ ಕರ್ತವ್ಯವಾಗಿದೆ.ರತನ್ ಟಾಟಾ ಅವರು ಹೇಳಿದಂತೆ ಲಾಭ ಮತ್ತು ನಷ್ಟದ ಬಗ್ಗೆ ತಲೆಕೆಡಿಸಿಕೊಳ್ಳದೇ ಅಮೂಲ್ಯವಾದ ಜೀವ ಉಳಿಸಿಕೊಳ್ಳುವತ್ತ ಸಾಗಬೇಕಿದೆ.
BJPಯಲ್ಲಿ ಮಾತ್ರ ಮಹಿಳೆಯರಿಗೆ ಪ್ರಾತಿನಿಧ್ಯ: ಸುರೇಖಾ ಪದಕಿ
ಅಲ್ಲದೇ ೨೦೨೦-೨೧ ಜೀವ ಉಳಿಸಿಕೊಳ್ಳುವ ಕಾಲ ಎಂದು ಹೇಳಿದ್ದು ನಿಜಕ್ಕೂ ಪ್ರಸ್ತುತ.ಭಕ್ತಾಧಿಗಳು ಶ್ರೀ ಮಠಕ್ಕೆ ಬರದೇ ಮನೆಯಲ್ಲೇ ಇದ್ದು, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ನಮ್ಮ, ನಿಮ್ಮ ಹಾಗೂ ಕುಟುಂಬದ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದ್ದಾರೆ.