ಜನಸಾಮನ್ಯರ ಪರಿಷತ್ತ ಮಾಡುತ್ತೆನೆ: ವಿಜಯಕುಮಾರ ತೇಗಲತಿಪಿ

0
70

ಶಹಾಬಾದ: ಈ ಬಾರಿ ಮತದಾರರ ಆಶೀರ್ವಾದ ಸಿಕ್ಕರೇ ಕನ್ನಡ ಸಾಹಿತ್ಯ ಪರಿಷತ್‌ನ್ನು ಜನಸಾಮನ್ಯರ ಪರಿಷತ್ತ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಅವರು ಶನಿವಾರ ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕಸಾಪ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ಈಗಾಗಲೇ ನಾನು ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಹಾಗೂ ಸಾರ್ವಜನಿಕವಾಗಿ ಸುಮಾರು ಎರಡು ದಶಕಗಳಿಂದ ನಿತ್ಯ ನಿರಂತರವಾಗಿ ಕಾರ್ಯಕ್ರಮಗಳ ಮೂಲಕ ನಮ್ಮ ಕಲಬುರಗಿ ಜಿಲ್ಲೆಯಲ್ಲಿ ಎಲ್ಲರಿಗೂ ಸಾಹಿತ್ಯದ ರಸದೌತಣ ನೀಡಿದ್ದೆನೆ.
ಕಲಬುರಗಿ ಜಿಲ್ಲೆಯ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ಅತ್ಯಂತ ಶ್ರೀಮಂತ್ರ ನಾಡು.ಈ ನಾಡಿನಲ್ಲಿ ಸಾಹಿತ್ಯವನ್ನು ಪಸರಿಸಲು ಎಲ್ಲಾ ಕ್ರಮಕೈಗೊಳ್ಳಲು ರೂಪರೇಷೆ ಹಾಕಿಕೊಂಡಿದ್ದೆನೆ.ಎಲ್ಲರನ್ನು ಗೆಲ್ಲಿಸಿ ನೋಡಿದ್ದೀರಿ.ಒಂದು ಬಾರಿ ನನ್ನ ಕೈಹಿಡಿದರೇ ಪ್ರತಿ ಹಳ್ಳಿಗಳಲ್ಲಿ ಕಸಾಪ ಶಾಖೆಯನ್ನು ತೆರೆದು, ಪ್ರತಿ ಶಾಲೆಗೆ, ಮನೆಮನಗಳಿಗೆ ಸಾಹಿತ್ಯವನ್ನು ಮುಟ್ಟಿಸುವ ಕೆಲಸ ಮಾಡುತ್ತೆನೆ.ಅಲ್ಲದೇ ಶಹಾಬಾದ ನಗರದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಕೈಗೊಳ್ಳುತ್ತೆನೆ ಎಂದರು.ಈ ಒಂದು ಬಾರಿ ಆಶೀರ್ವಾದ ಮಾಡಿ ಎಲ್ಲರಿಗೂ ಮೆಚ್ಚುವಂತ ಕಸಾಪವನ್ನು ಹೊಸ ದಿಕ್ಕಿನಲ್ಲಿ ಸಾಗುವಂತೆ ಮಾಡುತ್ತೆನೆ ಎಂದು ಹೇಳಿದರು.

Contact Your\'s Advertisement; 9902492681

ಶ್ರೀ ಸಮರ್ಥ ಗೋಭಕ್ತರ ಸಮಾಗಮ, ಉಪನ್ಯಾಸ ಕಾರ್ಯಕ್ರಮ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ೨೦೨೧ ರ ಜಿಲ್ಲಾ ಕನ್ನಡ ಸಾಹಿತ್ಯ ಪರಿ?ತ್ ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಹೊಸಮುಖ, ಅತ್ಯಂತ ಕ್ರೀಯಾಶೀಲ, ಒಳ್ಳೆ ಸಂಘಟಕನನ್ನು ಕಾಣಲು ಜನರು ಹಾತೊರೆಯುತ್ತಿದ್ದಾರೆ. ತೇಗಲತಿಪ್ಪಿಯವರು ಪಾದರಸದಂತೆ ನಿತ್ಯ ನಿರಂತರ ನೂತನ ಕಾರ್ಯಕ್ರಮಗಳು, ಸಮ್ಮೇಳನಗಳು, ಕವಿಗೋಷ್ಠಿ, ಸಾವಿರಾರು ಕಾರ್ಯಕ್ರಮ ಮಾಡುವ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಇಂತಹ ಒಳ್ಳೆಯ ಸಂಘಟಕ ಕನ್ನಡ ಸಾಹಿತ್ಯ ಪರಿ?ತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಾರೆ. ಈ ಬಾರಿ ಕನ್ನಡ ಸಾಹಿತ್ಯ ಪರಿ?ತ್ ಸದಸ್ಯರು ತಮ್ಮ ಅಮೂಲ್ಯವಾದ ಮತವನ್ನು ನೀಡಿ ಮತ್ತು ಆಶೀರ್ವಾದ ಮಾಡಿ ಗೆಲ್ಲಿಸಿ ತರಬೇಕೆಂದು ಮನವಿ ಮಾಡಿದರು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ೧೩೦ನೇ ಜಯಂತ್ಯೋತ್ಸವ

ಧೂಳಪ್ಪ ಇಟಗಿಕರ್, ಶರಣಬಸಪ್ಪ ಕೋಬಾಳ, ಅಣವೀರ ಇಂಗಿನಶೆಟ್ಟಿ, ಸಿದ್ದು ಬಾಳಿ, ವಿಶ್ವರಾಧ್ಯ ಬೀರಾಳ, ಮೃತ್ಯುಂಜಯ್ ಹಿರೇಮಠ,ಈರಣ್ಣ ಕಾರ್ಗಿಲ್,ಬಸವರಾಜ ಮದ್ರಿಕಿ, ನಾಗಣ್ಣ ರಾಂಪೂರೆ,ಲೋಹಿತ್ ಕಟ್ಟಿ, ಕನಕಪ್ಪ ದಂಡಗುಲಕರ್,ಶರಣಗೌಡ ಪಾಟೀಲ ಗೋಳಾ, ಸೋಮಶೇಖರ ನಂದಿಧ್ವಜ,ರವಿಕುಮಾರ ಅಲ್ಲಂಶೆಟ್ಟಿ, ಪೀರಪಾಶಾ,ಮಹೇಶ ಬಾಳಿ,ರಾಮಣ್ಣ ಇಬ್ರಾಹಿಂಪೂರ,ಬಾಬುರಾವ ಪಂಚಾಳ, ಶಶಿಕಲಾ ಸಜ್ಜನ್, ಜಯಶ್ರೀ ಸೂಡಿ, ನಾನಾಗೌಡ ಹಿಪ್ಪರಗಿ, ಶರಣು ತುಂಗಳ, ಅಶೋಕ ತುಂಗಳ,ಸಂಗಣ್ಣ ಇಜೇರಿ, ಚಂದ್ರಕಾಂತ ದಸ್ತಾಪೂರ ಶರಣು ವಸ್ತ್ರದ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here