ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಬೇಡಿಕೆಗಳ ಈಡೇರಿಕೆಗೆ ಆಗ್ರಹ

0
102

ಕಲಬುರಗಿ: ಕರ್ನಾಟಕರಾಜ್ಯಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಸಂಘದಜಿಲ್ಲಾ ಶಾಖೆ  ವತಿಯಿಂದ ಕಲಬುರಗಿ ಜಿಲ್ಲಾ ಆರೋಗ್ಯ ಅಧಿಕಾರಿಗೆ ವಿವಿಧ ಬೇಡಿಕೆಗಳಿಗಾಗಿ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಕೋವಿಡ-೧೯ ಎರಡನೇ ಅಲೇಯು ತೀವ್ರಗತವಾಗಿ ಹರಡುತ್ತಿರುವ ಪ್ರಯುಕ್ತ ಕಿರಿಯ ಆರೋಗ್ಯ ಸಹಾಯಕರು ಮಹಿಳಾ & ಪುರುಷ, ಹಗಲಿರುಳು ಯಾವುದೇ ರಜೆ ಪಡೆಯದೆ ರವಿವಾರವು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾರದಲ್ಲಿ ಒಂದು ದಿನವು ರಜೆ ಇಲ್ಲದಂತಾಗಿದೆ ಈ ಸೇರಿದಂತೆ ಹಲವಾರು ಬೇಡಿಕೆಗಳಿಗೆ ಒತ್ತಾಯಿಸಿ ಕ.ರಾ.ಆ.ಸ ಮತ್ತು ಮೇ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಠ್ಠಲ ಬಡಿಗೇರ ವಾರದಲ್ಲಿ ಒಂದು ದಿನವಾದರು ರಜೆ ಕೊಡಬೇಕು.

Contact Your\'s Advertisement; 9902492681

ಸಾರ್ವಜನಿಕರು ಕೊರೋನಾ ಜಾಗೃತಿ ವಹಿಸುವುದು ಅವಶ್ಯಕ :ಅಂಬಾರಾಯ ಅಷ್ಠಗಿ*

ಕೋವಿಡ ಕೆಲಸದ ಒತ್ತಡದಲ್ಲಿ ಕುಟುಂಬದವರನ್ನು ನೊಡಿಕೊಳ್ಳುವದು ಕಷ್ಟಕರವಾಗುತ್ತಿದ್ದು, ಕೆಲಸದ ಒತ್ತಡದಲ್ಲಿ ಹಲವಾರು ಸಮಸ್ಯೆಗಳು ಉಂಟಾಗಿ ಕಷ್ಟ ಅನುಭವಿಸುವಂತಾಗಿದೆ. ಕುಟುಂಬದ ಸದಸ್ಯರಿಗೆ ಕೋವಿಡ ಪಾಸಿಟಿವ ಬಂದಾಗ ಅವರನ್ನು ರಕ್ಷಿಸಿಕೊಳ್ಳಲು ನಮಗೆ ಸಮಯವಿಲ್ಲದಂತಾಗಿದೆ, ಅಲ್ಲದೆ ಅವರಿಗೆ ಯಾವುದೆ ಆಸ್ಪತ್ರೆಗಳಲ್ಲಿ ಸೆರ್ಪಡೆಮಾಡಲು ಹಾಸಿಗೆಗಳು ಸಿಗುತ್ತಿಲ್ಲ್.

ಅದಕ್ಕಾಗಿ ನೌಕರರಿಗೆ ಮತ್ತು ಅವರಕುಟುಂಬ ಅವಲಂಬಿತರಿಗೆ ಪ್ರತ್ಯೆಕವಾದ ವಾರ್ಡ ವ್ಯವಸ್ಥೆ ಕಲ್ಪಿಸಿಕೊಡಬೇಕು,  ಹೀಗೆ ಹಲವಾರು ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸರಕಾರದಿಂದ ಕೋವಿಡ ಭತ್ಯ ಸಿಗುತ್ತಿಲ್ಲ, ನೌಕರರಿಗೆ ಪ್ರತಿ ತಿಂಗಳು 5ನೇ ತಾರಿಖಿನೊಳಗೆ ಸಂಬಳ ನೀಡಬೇಕೆಂದು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ವಿ.ಟಿ.ಯು  ಪರೀಕ್ಷೆ ಮುಂದೂಡಲು ಕ್ಯಾಂಪಸ್ ಫ್ರಂಟ್ ಆಗ್ರಹ

ಈ ವೇಳೆಯಲ್ಲಿ ಪದ್ಮಿನಿ ಕಿರಣಗಿ, ಉಪಾಧ್ಯಾಕ್ಷರಾದ ಅನುಸುಯಾ ಗೊಳಾ, ಸಹ ಕಾರ್ಯದರ್ಶಿ ಶಿವಶರಣಪ್ಪ ಸಾಲಹಳ್ಲಿ, ಸೈಯದ ಅಹಮದ ಅಲಿ, ರಫಿಕ ಅಹಮದ ಅಲಿ, ರಮಾಕಾಂತ ಅಳ್ಳೊಳ್ಳಿ ಶಕುಂತಲಾ, ಸೈಯದ ಮುಸ್ತಪಾ, ಶಾರದಬಾಯಿ ನಾಲ್ವಾರ, ಸೈಯದ ರವಸತ ಅಲಿ, ಕಮಲಾ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here