ಕಮಲಾಪೂರ: ಕರೊನಾ ತಡೆಗಟ್ಟಲು ಪ್ರತಿಯೊಬ್ಬರು ಮಾಸ್ಕ್. ಸ್ಯಾನಿಟೈಜರ್ ಹಾಗೂ ಸಮಾಜಿಕ ಅಂತರ ಕಾಪಾಡಿಕೊಂಡು ಜಾಗೃತಿ ವಹಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಯುವ ಕಾಂಗ್ರೆಸ್ ಮುಖಂಡ ಡಾ ರವಿ ಚವ್ಹಾಣ ಹೇಳಿದರು.
ಕಮಲಾಪೂರ ತಾಲೂಕಿನ ಅಂಬಲಗಾ ಗ್ರಾಮದಲ್ಲಿ ನೇರೆಗಾ ಯೊಜನೆ ಅಡಿಯಲ್ಲಿ ಕೇಲಸ ಮಾಡುತಿರುವ ಕೂಲಿ ಕಾರ್ಮಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸಿ ಮಾತನಾಡಿ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡಿ ಮಾಸ್ಕ್ ಧರಿಸಿ ಕೇಲಸ ಮಾಡುವ ಜೊತೆಗೆ ಸ್ಯಾನಿಟೈಸರ ಬಳಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಪುತ್ರಪ್ಪ, ರಾಬಿಯಾ,ತೈಯಬ್, ಹಣಮಂತ ಹರಸೂರ, ಹಾರೂನ , ಶಿವಾನಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು.
ಕಲಬುರಗಿ ಜಿಲ್ಲೆಯಲ್ಲಿ ದಿನೆ ದಿನೆ ಕೊರೊನ ಸೋಂಕಿತರ ಸಂಖ್ಯೆ ಹೆಚ್ಚಾಗುತಿದು ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡಿ ಮಾಸ್ಕ್ ಧರಿಸಿ ಕೇಲಸ ಮಾಡುವ ಜೊತೆಗೆ ಸ್ಯಾನಿಟೈಸರ ಬಳಸಬೇಕು. -ಡಾ.ರವಿ ಚವ್ಹಾಣ, ಕಾಂಗ್ರೆಸ್ ಯುವ ಮುಖಂಡರು ಕಲಬುರಗಿ ಗ್ರಾಮೀಣ ಮತಕ್ಷೇತ್ರ