ಶಹಾಬಾದ: ಕಾಯಕವೇ ಕೈಲಾಸ ತತ್ವದಡಿ ಎಲ್ಲರೂ ಸಮಾನರು. ಯಾವುದೇ ಕೆಲಸದಲ್ಲಿ ಮೇಲು-ಕೀಳಿಲ್ಲ ಎಂದು ಸಾರಿದ ಬಸವಣ್ಣ ಅವರು ಸಾಮಾಜಿಕ ಕ್ರಾಂತಿಯ ಹರಿಕಾರರು ಎಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಹೇಳಿದರು.
ಅವರು ಶುಕ್ರವಾರ ನಗರಸಭೆಯ ವತಿಯಿಂದ ನಗರಸಭೆಯ ಕಾರ್ಯಾಲಯದಲ್ಲಿ ಆಯೋಜಿಸಲಾದ ಬಸವ ಜಯಂತಿಯನ್ನು ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ, ೧೨ನೇ ಶತಮಾನದ ಅಂದಿನ ಸಮಾಜ ತಾರತಮ್ಯದಿಂದ ಕೂಡಿತ್ತು. ಶೋಷಿತರು, ದೀನದಲಿತರು ಹಾಗೂ ಮಹಿಳೆಯರು ಅಭಿವ್ಯಕ್ತಿ ಸ್ವಾತಂತ್ರ್ಯ ವಿಲ್ಲದೆ ತಮ್ಮ ದನಿಯನ್ನೇ ಕಳೆದುಕೊಂಡಿದ್ದರು. ಅಂತಹ ಸಂದರ್ಭದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾಜದ ಕಟ್ಟಕಡೆ ಯವರನ್ನು ಒಂದೆಡೆ ಕಲೆಹಾಕಿ ತಮ್ಮ ಸರಳ ವಚನ ಸಾಹಿತ್ಯದ ಮೂಲಕ ಎಲ್ಲರನ್ನು ಜಾಗೃತ ಗೊಳಿಸಿದರು. ಅ ಮೂಲಕ ಸಮಾನತೆಯ ತತ್ವ ವಿಚಾರಗಳಿಗೆ ಮುನ್ನುಡಿ ಬರೆದ ಬಸವಣ್ಣ ಅವರು ಶ್ರೇ? ಸಮಾಜ ಸುಧಾರಕರಾದರು ಎಂದು ಹೇಳಿದರು.
ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಮಾತನಾಡಿ, ಬಸವಣ್ಣನವರು ತಮ್ಮ ಶ್ರೇ? ಚಿಂತನೆಗಳ ಮೂಲಕ ಶೋಷಿತರು, ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಕಾರಣರಾದರು. ಅವರು ಅಂದು ಸ್ಥಾಪಿ ಸಿದ ಅನುಭವ ಮಂಟಪದ ಮಾದರಿಯೇ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ. ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ,ನಗರಸಭೆ ಸದಸ್ಯರಾದ ಸೂರ್ಯಕಾಂತ ಕೋಬಾಳ, ಮಲ್ಲಿಕಾರ್ಜುನ ವಾಲಿ,ನಾಗಣ್ಣಗೌಡ ಶಂಕರವಾಡಿ, ಸಿದ್ದು ಮುದಿಗೌಡ, ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ ಸೇರಿದಂತೆ ಅನೇಕರು ಇದ್ದರು.