ಕಲಬುರಗಿ/ ಜೇವರ್ಗಿ: ಕೊರೋನಾ 2 ನೇ ಅಲೆಯಿಂದ ಕಂಗೆಟ್ಟಿರುವ ಜೇವರ್ಗಿ ಜನತೆಯ ನೆರವಿಗೆ ಧಾವಿಸಿರುವ ಧರಂಸಿಂಗ್ ಫೌಂಡೇಷನ್ ಶುಕ್ರವಾರ ಜೇವರ್ಗಿ ತಾಲೂಕಾ ಆಸ್ಪತ್ರೆಯಲ್ಲಿ ಆಕ್ಸೀಜನ್ ಸಹಿತ 16 ಹಾಸಿಗೆಗಳ ಉಚಿತ ಚಿಕಿತ್ಸೆಯ ಕೋವಿಡ್ ಕೇರ್ ಸೆಂಟರ್ ಆರಂಭಿಸಿದೆ.
ಜಿಲ್ಲಾಡಳಿತದ ಸಹಯೋಗದಲ್ಲಿ ತಾಲೂಕು ಆಸ್ಪತ್ರೆ ಅಂಗಳದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್‍ಗೆ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಚಾಲನೆ ನೀಡಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್, ತಾಲೂಕಾ ಆರೋಗ್ಯಾಧಿಕಾರಿ ಡಾ. ಸಿದ್ದು ಜೇರಟಗಿ, ತಹಶೀಲ್ದಾರ್ ವಿನೋದ ಪಾಟೀಲ್ ಈ ಸಂದರ್ಭದಲ್ಲಿ ಹಾಜರಿದ್ದರು.
ಈಗಾಗಲೇ ಈ ಕೊರೋನಾ ಕಾಳಜಿ ಕೇಂದ್ರದಲ್ಲಿ ಮೊದಲ ದಿನವೇ 13 ಸೋಂಕಿತರು ಚಿಕಿತ್ಸೆಗೆ ದಾಖಲಾಗದ್ದಾರೆ. ಇವರೆಲ್ಲರಿಗೂ ಆಕ್ಸೀಜನ್ ಸವಲತ್ತಿರುವ ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೆ ಈ ಕೇಂದ್ರದಲ್ಲಿ 2 ವೆಂಟಿಲೇಟರ್‍ಗಳನ್ನೂ ಅಳವಡಿಸಲಾಗಿದ್ದು ಸೋಂಕಿನ ತೀವ್ರತೆ ಅಧಿಕಗೊಂಡಲ್ಲಿ ಅಂತಹರಿಗೆ ಜೀವ ರಕ್ಷಕ ಸಾಧನೆಯ ಚಿಕಿತ್ಸೆಯ ಸವಲತ್ತನ್ನೂ ಇಲ್ಲಿ ಸಿದ್ಧವಾಗಿಡಲಾಗಿದೆ.
ಜಿಲ್ಲೆಯ ಸೇಡಂನಲ್ಲಿ 20, ಅಫಜಲ್ಪುರ, ಆಳಂದ ಹಾಗೂ ಚಿತ್ತಾಪುರದಲ್ಲಿ ತಲಾ 10 ಸಿಲಿಂಡರ್ ಸವಲತ್ತಿನ ಕೋವಿಡ್ ಕೇರ್ ಸೆಂಟರ್ ಸರಕಾರಿ ಹಂತದಲ್ಲಿ ಆರಂಭವಾಗಿವೆ, ಆದರೆ ಜೇವರ್ಗಿಯಲ್ಲಿ ಏಕಕಾಲಕ್ಕೇ 48 ಆಕ್ಸೀಜನ್ ಸಿಲಿಂಡರ್ ಬೆಂಬಲವಿರುವ 16 ಹಾಸಿಗೆಗಳ ಕಾಳಜಿ ಕೇಂದ್ರ ಆರಂಭವಾಗುತ್ತಿದೆ. ಆದರೆ ಜೇವರ್ಗಿಯಲ್ಲಿ ಸರಕಾರಿ ಸಹಯೋಗದಲ್ಲಿ ಧರಂಸಿಂಗ್ ಫೌಂಡೇಷನ್ ಸೋಂಕಿತರ ನೆರವಿಗೆ ನಿಂತಿರೋದು ವಿಶೇಷವಾಗಿದೆ.
ಧರಂಸಿಂಗ್ ಫೌಂಡೇಷನ್ ಹಾಗೂ ಜಿಲ್ಲಾಡಳಿತದಿಂದ ತಲಾ 24 ರಂತೆ 48 ಆಕ್ಸೀಜನ್ ಸಿಲಿಂಡರ್ ಬೆಂಬಲದಿಂದ ಸದರಿ ಕೇಂದ್ರ ಆರಂಭಿಸಲಾಗಿದೆ. 16 ಸಿಲಿಂಡರ್ ನಂತೆ ನಾವು 3 ಪಾಳಿಯಲ್ಲಿ ಲಭ್ಯವಿರುವ ಆಕ್ಸೀಜನ್ ಬಳಸಬಹುದಾಗಿದೆ. ಹಾಗೇ ಖಾಲಿಯಾಗಿರುವ ಸಿಲಿಂಡರ್ ಆಕ್ಸೀಜನ್ ಭರಿಸಿ ದಾಸ್ತಾನು ನಿರ್ವಹಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಆಕ್ಸೀಜನ್ ಕೊರತೆ ಕಾಡದಂತೆ ಲೆಕ್ಕಹಾಕಿಯೇ ಈ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರು ಆಗಿರುವ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಕೋವಿಡ್ ಕೇರ್ ಸೆಂಟರ್‍ಗೆ ಚಾಲನೆ ನೀಡಿ, ಅಲ್ಲಿ ದಾಖಲಾಗಿರುವ ಕೋವಿಡ್ ಪಾಸಿಟಿವ್ ಸೋಂಕಿತರ ಉಭಯಕುಶಲೋಪರಿ ವಿಚಾರಿಸಿದ ನಂತರ ತಾಲೂಕು ಆಸ್ಪತ್ರೆಯಲ್ಲಿಯೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇನ್ನೂ 50 ಸಿಲಿಂಡರ್ ಹೆಚ್ಚುವಾರಾಗಿ ಇಂಡೇನೇಶಿಯಾ ದೇಶದ ರಾಜಧಾನಿ ಜಕಾರ್ತಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅಲ್ಲಿನ ನಿಸ್ಸಾನ್ ಇಂಡೋನೇಶಿಯಾ ಸಂಸ್ಥೆಯಿಂದ ಅದಾಗಲೇ ಸಿಲಿಂಡರ್‍ಗಳು ರವಾನೆಯಾಗಿ ಭಾರತದ ಚೆನ್ನೈ ಬಂದರಿಗೆ ಬಂದು ತಲುಪಿವೆ. ಅಲ್ಲಿಂದ ವಾರದೊಳಗೆ ಕಲಬುರಗಿ ಮಾರ್ಗವಾಗಿ ಜೇವರ್ಗಿ ಕೋವಿಡ್ ಕೇರ್ ಸೆಂಟರ್ ತಲುಪಲಿ ತಲುಪಲಿವೆ. ಈ 50 ಸಿಲಿಂಡರ್ ಸೇರಿದಂತೆ 98 ಆಕ್ಸೀಜನ್ ಸಿಲಿಂಡರ್ ಲಭ್ಯವಿರುವಂತಹ ವಿಶಿಷ್ಟ ಕೋವಿಡ್ ಕೇರ್ ಸೆಂಟರ್ ಆಗಿ ಜೇವರ್ಗಿ ಕಸೆಂಟರ್ ಹೊರಹೊಮ್ಮಲಿದೆ, ಯಾವುದೇ ಕಾರಣಕ್ಕೂ ಆಕ್ಸೀಜನ್ ಕೊರತೆ ಇಲ್ಲಿ ಕಾಡದಂತೆ ಸೋಂಕಿತರ ಆರೈಕೆ ಸಾಗಲಿದೆ ಎಂದು ಹೇಳಿದ್ದಾರೆ.
ಜೇವರ್ಗಿ ಮತಕ್ಷೇತ್ರದಲ್ಲಿ ಇದುವರೆಗೂ 2, 258ಸೋಂಕಿನ ಪ್ರಕರಣ ಪತ್ತೆಯಾಗಿದ್ದು ಈ ಪೈಕಿ 1, 225 ಮಂದಿ ಗುಣಮುಖರಾಗಿದ್ದಾರೆ. 1, 030 ಸಕ್ರೀಯ ಪ್ರಕರಣಗಲಿದ್ದು ಈ ಪೈಕಿ 1008 ಮನೆಯಲ್ಲೇ ಪ್ರತ್ಯೇಕವಾಗಿದ್ದಾರೆ. 22 ಮಂದಿ ವಿವಿಧ ಆಸ್ಪತ್ರೆಗಳಲ್ಲಿದ್ದು ಈ ಪೈಕಿ 13 ಮಂದಿ ಜೇವರ್ಗಿ ಕೋವಿಡ್ ಸೆಂಟರ್‍ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲೆಡೆ ಆಕ್ಸೀಜನ್ ಹಾಹಾಕಾರ ಗಮನಿಸಿz್ದÉೀವೆ. ಜೇವರ್ಗಿಯಲ್ಲಿ ಆತುರದಲ್ಲಿ ಕೇರ್ ಸೆಂಟರ್ ತೆಗೆದು, ಆಕ್ಸೀಜನ್ ಪೂರೈಕೆಯಲ್ಲಿ ಯಾವುದೇ ಮುನ್ನೆಚ್ಚರಿಕೆ ವಹಿಸದೆ, ಬೆಡ್ ಹೆಚ್ಚಿಗೆ ಹಾಕಿ ಸೋಂಕಿತರಿಗೆ ದಾಖಲೆ ಮಾಡಿಕೊಂಡರೆ ಅದೆಲ್ಲಿ ಆಕ್ಸೀಜನ್ ಹಾಹಾಕಾರ ಆಗೋವುದೋ ಎಂದುಎಲ್ಲವನ್ನು ಅಳೆದು ಸುರಿದು, ಮುನ್ನೆಚ್ಚರಿಕೆ ವಹಿಸಿ, ಎಲ್ಲವನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿ, ಯಾವುದೇ ಸಮಸ್ಯೆಗೆ ಆಸ್ಪದ ನೀಡದಂತೆ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ ಎಂದು ಡಾ. ಅಜಯ್ ಸಿಂಗ್ ಸ್ಪಷ್ಟಪಡಿಸಿದರು.
ಆಕ್ಸೀಜನ್, ಬೆಡ್ ಕೊರತೆಯಿಂದ ಜೇವರ್ಗಿಯಲ್ಲಿ ಸೋಂಕಿತರು ತೊಂದರೆ ಎದುರಿಸಬಾರದು ಎಂಬುದೇ ತಮ್ಮ ಗುರಿ, ಸೋಂಕಿತರಿಗೆ, ಅವರ ಸಹಾಯಕರಿಗೆ ಫೌಂಡೇಷನ್ ವತಿಯಿಂದಲೇ ಎರಡು ಹೊತ್ತು ಊಟೋಪಚಾರಕ್ಕೂ ವ್ಯವಸ್ಥೆ ಮಾಡಲಾಗುತ್ತದೆ. ಬರುವ ದಿನಗಳಲ್ಲಿ ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ಹಾಸಿಗೆ ಸಾಮಥ್ರ್ಯ ಹೆಚ್ಚಿಸುವ ಚಿಂತನೆ ಮಾಡಲಾಗುತ್ತದೆ ಎಂದು ಡಾ. ಅಜಯ್ ಸಿಂಗ್ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತ ಹೇಳಿದರು.
ಕೋವಿಡ್ ಸೋಂಕಿತರ ಆರೈಕೆಗೆ ಕಳೆದ ವರ್ಷವೂ ಸಾಕಷ್ಟು ಕೆಲಸ ಮಾಡಲಾಗಿತ್ತು, ಈ ಬಾರಿಯೂ ಧರಂಸಿಂಗ್ ಫೌಂಡೇಷನ್ ಈ ದಿಶೆಯಲ್ಲಿ ನಿರಂತರ ಕೆಲಸ ಮಾಡಲಿದೆ. ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಈಗಲೂ ಜೇವರ್ಗಿಯಲ್ಲಿ ಫೌಂಡೇಷನ್‍ನ 2 ಅಂಬುಲನ್ಸ್ ಲಭ್ಯ ಇವೆ. ಜನ ಇವೆಲ್ಲದರ ಸದುಪಯೋಗ ಪಡೆದುಕೊಂಡು ತಮ್ಮ ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ಪಡೆಯುವಂತಾಗಲಿ ಎಂದು ಡಾ. ಅಜಯ್ ಸಿಂಗ್ ಕೋರಿದ್ದಾರೆ.