ಬಸವೇಶ್ವರ ಜಯಂತಿ ಸರಳವಾಗಿ ಆಚರಣೆ

0
24

ಚಿತ್ತಾಪುರ:ವಚನ ಭಂಡಾರಿ, ಸಮಾಜ ಸುಧಾರಕ,ಮಹಾಮಾನವತ ವಾದಿ ವಿಶ್ವಗುರು ಮಹಾತ್ಮ ಬಸವೇಶ್ವರರ 888 ನೇ ಜಯಂತಿಯನ್ನು ಪಟ್ಟಣದ ಎಪಿಎಂಸಿ ಹತ್ತಿರ ಇರುವ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ತಹಶೀಲ್ದಾರ ಉಮಾಕಾಂತ ಹಳ್ಳೆ ಸೇರಿದಂತೆ ಪುರಸಭೆಯ ಅಧ್ಯಕ್ಷ ಚಂದ್ರಶೇಖರ ಕಾಶಿ,ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ್ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಿ ಮಹಾ ಮಾನವತವಾದಿಗೆ ಗೌರವ ನಮನ ಸಲ್ಲಿಸಿದರು.

ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ತಹಶೀಲ್ದಾರರು,ಕೋವಿಡ್ ಎರಡನೇ ಅಲೆ ಪ್ರಬಲವಾಗಿದ್ದು ಕೋವಿಡ್-19ರ ಮಾರ್ಗಸೂಚಿಯಂತೆ ತಾಲೂಕಾಡಳಿತದಿಂದ ಸರಳವಾಗಿ ಜಯಂತ್ಸೋತ್ಸವ ಆಚರಿಸಲಾಗಿದೆ.ಅದರಂತೆ ಸಾರ್ವಜನಿಕಕರು ತಮ್ಮ ತಮ್ಮ ಮನೆಯಲ್ಲಿ ಬಸವೇಶ್ವರರನ್ನು  ಪೂಜಿಸಿ ಜಯಂತಿ ಆಚರಿಸುವಂತೆ ಹೇಳಿದರು.

Contact Your\'s Advertisement; 9902492681

ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್ ರಿಗೆ ನುಡಿ ನಮನ

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ,ವೀರಶೈವ ಮಹಾಸಭಾದ ಜಿಲ್ಲಾಉಪಾಧ್ಯಕ್ಷ ಸಿದ್ದುಗೌಡ ಅಫಜಲಪುರಕರ್, ಮಲ್ಲಣ ಮಾಸ್ಟರ್,ರವೀಂದ್ರ ಸಜ್ಜನಶೆಟ್ಟಿ,ಅಣ್ಣಾರಾವ ಮುಡಭೂಳ,ಚಂದ್ರಶೇಖರ ಅವಂಟಿ,ಪ್ರಭುದೇವ ಬೊಮ್ಮನಹಳ್ಳಿ,ತಾಲೂಕ ವೀರಶೈವ ಯುವ ಘಟಕದ ಅಧ್ಯಕ್ಷ ನಾಗರಾಜ ಭಂಕಲಗಿ,ವೀರಶೈವ ಮಹಾಸಭಾ ಜಿಲ್ಲಾ ಯುವ ಕಾರ್ಯದರ್ಶಿ ಜಗದೇವ ದಿಗ್ಗಾಂವಕರ್, ವೀರಣ್ಣ ಸುಲ್ತಾನಪುರ್,ನಾಗರಾಜ ರೇಶ್ಮಿ, ನಾಗರಾಜ ಹೂಗಾರ,ಅಂಬರೀಶ್ ಸುಲೆಗಾಂವ,ಆನಂದ ನರಬೋಳಿ, ವೀರಸಂಗಪ್ಪಾ ಸುಲೆಗಾಂವ, ರಮೇಶ ಬಟಗೇರಿ,ಕೊಟ್ಟೇಶ್ವರ್ ರೇಷ್ಮಿ,ಬಾಲಾಜಿ ಬುರಬುರೆ, ಮಲ್ಲಿಕಾರ್ಜುನ ಪೂಜಾರಿ,
ಜಗದೀಶ ಚವ್ಹಾಣ್,ವಿಠ್ಠಲ ನಾಯಕ್,ಪ್ರಸಾದ ಅವಂಟಿ,ರಮೇಶ್ ಕಾಳನೂರ್ ಸೇರಿದಂತೆ ಅನೇಕ ಗಣ್ಯರಿದ್ದರು,

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here