ಕರೋನಾ ವಾರಿಯರ್ಸ್,ನಿರ್ಗತಿಕರಿಗೆ ಆಹಾರ,ನೀರು ವಿತರಣೆ

0
16

ಚಿತ್ತಾಪುರ: ಕರೋನಾ 2 ನೇ ಅಲೆಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರೋನಾ ವಾರಿಯರ್ಸ್ ಹಾಗೂ ನಿರ್ಗತಿಕರಿಗೆ ಚಿತ್ತಾಪುರ ಬ್ಯಾಡ್ಮಿಂಟನ್ ಅಶೋಷಿಯನ್
ಹೊಟ್ಟೆ ತುಂಬಾ ಊಟ ಹಾಗೂ ಕುಡಿಯಲು ಶುದ್ಧ ನೀರು ವಿತರಿಸುವ ಸಮಾಜಮುಖಿ ಕಾರ್ಯ ನಿರ್ವಹಿಸುತ್ತದೆ.

ಪಟ್ಟಣದ ಲಾಡ್ಜಿಂಗ್ ಕ್ರಾಸ್ ಹತ್ತಿರ ಬ್ಯಾಡ್ಮಿಂಟನ್ ಅಶೋಷಿಯನ್ ತಾಲೂಕ ಘಟಕದ ವತಿಯಿಂದ ಕರೋನಾ ವಾರಿಯರ್ಸ್ ಅವರಿಗೆ ತಹಶೀಲ್ದಾರ್ ಉಮಾಕಾಂತ ಹಳ್ಳೆ ಆಹಾರದ ಪಾಕೇಟ್, ನೀರಿನ ಬಾಟಲಿ ವಿತರಿಸಿ ಮಾತನಾಡಿದರರು.

Contact Your\'s Advertisement; 9902492681

ಪಟ್ಟಣದಲ್ಲಿ ಯಾರು ಉಪವಾಸ ಇರಬಾರದು ಎಂಬ ಕಾರಣಕ್ಕೆ ಬ್ಯಾಡ್ಮಿಂಟನ್ ಅಶೋಷಿಯನ್ ಪದಾಧಿಕಾರಿಗಳು ಇಂತಹ ಮಹತ್ತರವಾದ ಸಮಾಜಮುಖಿ ಕಾರ್ಯ ಮಾಸುತ್ತಿದ್ದಾರೆ ಇವರ ಈ ಕಾರ್ಯ ಇತರರಿಗೆ ಮಾರ್ಗದರ್ಶನವಾಗಿದೆ ಎಂದರು.

ಬಸವೇಶ್ವರ ಜಯಂತಿ ಸರಳವಾಗಿ ಆಚರಣೆ

ಬ್ಯಾಡ್ಮಿಂಟನ್ ಅಶೋಷಿಯನ್ ತಾಲೂಕ ಅಧ್ಯಕ್ಷ ಸಾಬಣ್ಣ ಕಾಶಿ ಮಾತನಾಡಿ,ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ನಮ್ಮ ಅಶೋಷಿಯನ್ ವತಿಯಿಂದ ಸುಮಾರು 2 ತಿಂಗಳ ಕಾಲ ಆಹಾರ ಮತ್ತು ನೀರು ವಿತರಿಸಲಾಯಿತು, ಅಂತೆಯೇ ಈ ಬಾರಿಯೂ ಲಾಕ್ ಲಾಕ್ ಇರುವುದರಿಂದ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರೋನಾ ವಾರಿಯರ್ಸ್ ಗಳಿಗೆ,ಗುಡಿಸಲಿನಲ್ಲಿ ವಾಸಿಸುವ ಜನರಿಗೆ ಹಾಗೂ ನಿರ್ಗತಿಕರಿಗೆ ಕರೋನಾ ನಿಯಂತ್ರಣಕ್ಕೆ ಬರುವವರೆಗೂ ಯಾರು ಕೂಡ ಉಪವಾಸ ಇರಬಾರದು ಎಂಬ ಉದ್ದೇಶದಿಂದ ನಿತ್ಯ ಸುಮಾರು 350-400 ಜನರಿಗೆ ವಿತರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ,ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಅಸೋಸಿಯೇಷನ್ ಪದಾಧಿಕಾರಿಗಳಾದ ಸಂತೋಷ್ ಕಲಾಲ್,ಬಾಬು ಕಾಶಿ,ರಾಜಶೇಖರ ಬಳ್ಳಾ, ಲಖನ್ ಸಿಂಗ್,ಶ್ರೀನಿವಾಸ ಪೆಂದು,ಚಂದ್ರಶೇಖರ ಊಟಗೂರ,ಗುರು ಸ್ವಾಮಿ,ಸಾಗರ್ ಜಿತುರೆ, ಸಚಿನ್ ಕಾಶಿ,ರೋಹಿತ್,ರಿಯಾಜ್,ಸುರೇಶ್ ಸರಾಫ್,ಆನಂದ ಪಟವಾರಿ,ರೇಖಾ ತಳವಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here