ಸಿಯುಕೆಯಲ್ಲಿ ಬಸವ ಜಯಂತಿ ಆಚರಣೆ

0
27

ಕಲಬುರಗಿ: ನಾವು ಮನುಷ್ಯರಾಗಿರಬೇಕು ಮತ್ತುಜೊತೆಗಿರುವವರನ್ನು ಮನುಷ್ಯರಂತೆಕಾಣಬೇಕುಎಂಬುದು ಬಸವಣ್ಣನವರ ಬಹುದೊಡ್ಡಚಿಂತನೆ. ಬಸವಣ್ಣತನ್ನ ಒಳಗಿನ ತಳಮಳವನ್ನು ಯಾವತ್ತೂ ಹಿಡಿದಿಟ್ಟುಕೊಳ್ಳಲಿಲ್ಲ ಬದಲಾಗಿತನ್ನ ದೌರ್ಬಲ್ಯಗಳಿಂದ ತಾನೇ ಹೊರಬರಬೇಕೆಂಬ ವಿಷಯವನ್ನುಎದುರಿನವರಿಗೆತೆರೆದಿಡುವ ಮೂಲಕ ಅವರು ಸಮಾಜಕ್ಕೆಕನ್ನಡಿಯಂತೆಕಾಣುತ್ತಿದ್ದರು, ಎಂದು ಬೆಂಗಳೂರಿನ ಖ್ಯಾತ ಲೇಖಕರಾದಡಾ. ಎಂ.ಎಸ್. ಆಶಾದೇವಿ ಅಭಿಪ್ರಾಯಪಟ್ಟರು.

ಅವರುಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದ ಬಸವ ಪೀಠದ ವತಿಯಿಂದ ನಡೆಸಿದ ’ಮಹಾತ್ಮ ಬಸವೇಶ್ವರರ ೮೮೮ನೇ ಜಯಂತ್ಯೋತ್ಸವಆಚರಣೆಯ’ ಕಾರ‍್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಆತ್ಮವಂಚನೆಯ ನೂರು ದಾರಿಗಳನ್ನು ಅರ್ಥಮಾಡಿಕೊಂಡವರು ಬಸವಣ್ಣನವರಿಗಿಂತ ಬೇರೊಬ್ಬರಿಲ್ಲ. ಆದ್ದರಿಂದಅವರುಯಾವತ್ತೂತನ್ನ ನಡೆ ಮತ್ತು ನುಡಿ ಬೇರೆ ಬೇರೆ ದಿಕ್ಕಿನಲ್ಲಿ ನಡೆಯದಂತೆ ಜಾಗೃತರಾಗಿದ್ದರು. ಅವರುಯಾವತ್ತೂತಮ್ಮಆತ್ಮವಿಶ್ವಾಸಕ್ಕೆ ವಿರುದ್ಧವಾಗಿ ನಡೆತುತ್ತಿರಲಿಲ್ಲ ಎಂದು ಹೇಳಿದರು.

Contact Your\'s Advertisement; 9902492681

ಹೊನ್ನಕಿರಣಗಿಯಲ್ಲಿ ಸರಳ ವಿಶ್ವ ಗುರು ಬಸವಣ್ಣ ಜಯಂತಿ.

ತಾನುಕಟ್ಟಬೇಕೆಂದಿರುವ ಸಮಾಜದ ಬಗ್ಗೆ ಅವರುಯಾವತ್ತೂಉಪನ್ಯಾಸ ನೀಡಲಿಲ್ಲ. ಆದರೆಅದರ ಮಹತ್ವವನ್ನುಎದುರಿಗಿದ್ದವರಿಗೆ ಮನದಟ್ಟು ಮಾಡುವುದರಲ್ಲಿ ಸೋಲಲಿಲ್ಲ. ಯಾವುದೇ ಸಂದರ್ಭದಲ್ಲೂಅವರುತಮಗೆ ಅನುಯಾಯಿಗಳು ಬೇಕು ಎಂದು ಬಯಸಿಲ್ಲ. ಅದರ ಪರಿಕಲ್ಪನೆಯನ್ನು ಹೊಂದದಿದ್ದದಕ್ಕೇಆತನಕ್ರಾಂತಿಗುರಿ ಮುಟ್ಟಲು ಸಾಧ್ಯವಾಯಿತು. ನಾಯಕನ ಪರಿಕಲ್ಪನೆ ಬಂದಕೂಡಲೇಅಲ್ಲಿ ಸರ್ವಾಧಿಕಾರದ ಮನಸ್ಥಿತಿ ಒಳಹೊಕ್ಕು ಕ್ರಾಂತಿಗೆದ್ದಲು ಹಿಡಿದು ಬಿಡುತ್ತೆಎನ್ನುವುದನ್ನುಅವರುಚೆನ್ನಾಗಿಅರ್ಥ ಮಾಡಿಕೊಂಡಿದ್ದರು. ಇಡೀ ಶರಣರ ಚಳುವಳಿಯನ್ನು ಸಮಾನ ಮನಸ್ಕರ ಪ್ರಯಾಣದಂತೆ ಮಾಡಿದ್ದುಅವರ ವ್ಯಕ್ತಿ ವಿಶಿಷ್ಠವಾದ ಸಿದ್ಧಾಂತದಿಂದ ಎಂದುಡಾ. ಆಶಾದೇವಿ ತಿಳಿಸಿದರು.

ಎಲ್ಲಿ ಕೀಳರಿಮೆ ಇತ್ತೋ, ಅಲ್ಲಿಘನವಾದಆತ್ಮವಿಶ್ವಾಸ ತುಂಬಿಸಿದ್ದು ಬಸವಣ್ಣತನ್ನ ವಿನಯದಿಂದ. ನಾವು ಯಾವ ವೃತ್ತಿಯನ್ನುಜಾತಿಯ ಹೆಸರಿನಲ್ಲಿತಿರಸ್ಕರಿಸುತ್ತಿದ್ದೆವೋ, ಅದನ್ನು ಬಸವಣ್ಣಕಾಯಕದಂತೆ ಬಿಂಬಿಸಿದರು ಎಂದು ಬಸವಣ್ಣನವರ ಮಹತ್ವವನ್ನು ಸಾರಿ ಹೇಳಿದರು.
ಕಾರ‍್ಯಕ್ರಮದಲ್ಲಿಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದಗೌರವಾನ್ವಿತ ಕುಲಪತಿಗಲಾದ ಪ್ರೊ. ಎಂ. ವಿ ಅಳಗವಾಡಿ, ಕುಲಸಚಿವ ಪ್ರೊ. ಬಸವರಾಜ. ಪಿ . ಡೋಣೂರ, ಸಿಒಇ ಪ್ರೋ. ಬಿ ಕೆರೂರ್, ಬಸವಪೀಠದ ಸಂಯೋಜಕರಾದಡಾ. ಗಣಪತಿ ಬಿ. ಸಿನ್ನೂರ, ಪ್ರೊ. ವಿಕ್ರಮ್ ವಿಸಾಜಿ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here