ಮಹಾನಗರ ಪಾಲಿಕೆ ಚುನಾವಣೆ: ಮೀಸಲಾತಿ ಗೊಂದಲ ಸರಿಪಡಿಸುವಂತೆ ಒತ್ತಾಯ

0
17

ಕಲಬುರಗಿ: ಮಹಾನಗರ ಪಾಲಿಕೆಯ ಮುಂಬರುವ ಚುನಾವಣೆಯಲ್ಲಿ ಹಿಂದುಳಿದ ವರ್ಗ (ಬಿ) ಮೀಸಲಾತಿ ಇಟ್ಟಿರುವ ಒಟ್ಟು ೪ ಸ್ಥಾನಗಳನ್ನು ನಿಗದಿ ಪಡಿಸಿದ್ದು, ಅದನ್ನು ಕಲಬುರಗಿ ನಗರದ ಉತ್ತರ ಮತಕ್ಷೇತ್ರಕ್ಕೆ ವರ್ಗಾವಣೆ ಮಾಡಲಾಗಿದ್ದು, ಆದ್ದರಿಂದ ಕಲಬುರಗಿ ನಗರದ ದಕ್ಷಿಣ ಮತಕ್ಷೇತ್ರದಲ್ಲಿ ಇರುವಂತಹ ಹಿಂದುಳಿದ ವರ್ಗ (ಬಿ) ಮೀಸಲಾತಿ ಸಂಬಂಧಪಟ್ಟವರಿಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ಅನಾನುಕೂಲವಾಗಿರುತ್ತದೆ, ಆದ್ದರಿಂದ ಮೀಸಲಾತಿ ಗೊಂದಲವನ್ನು ಸರಿಪಡಿಸಬೇಕು ಎಂದು ರಾಜ್ಯ ಜನತಾ ದಳ ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾದ ಕೃಷ್ಣಾ ರೆಡ್ಡಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೀಸಲಾತಿಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರೀಶಿಲನೆ ಮಾಡಿ ದಕ್ಷಿಣ ಮತಕ್ಷೇತ್ರಕ್ಕೆ ಒಟ್ಟು ೪ ಸ್ಥಾನಗಳ ಪೈಕಿ ಎರಡು ಕ್ಷೇತ್ರದಲ್ಲಿ ಹಿಂದುಳಿದ ವರ್ಗ (ಬಿ) ಮೀಸಲಾತಿ ಹೊಂದಿರುವ ಮತದಾರರಿಗೆ ದಕ್ಷಿಣ ಮತಕ್ಷೇತ್ರದಲ್ಲಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಕೂಲ ಮಾಡಿಕೊಡಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಒಂದು ವೇಳೆ ಸದರಿ ವಿಷಯದ ಬಗ್ಗೆ ನಿರ್ಲಕ್ಷ್ಯ ತೋರಿದರೆ ಮುಂಬರುವ ಚುನಾವಣೆಯಲ್ಲಿ ರಾಜ್ಯ ಜನತಾ ದಳ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಲು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here