9ಸ್ಟಾರ್ ಮಿತ್ರ ಮಂಡಳಿವತಿಯಿಂದ ಉಚಿತ ಊಟ ವಿತರಣೆ

0
28

ಕಲಬುರಗಿ: ಕೈಯಿಂದ ಎಸೆದ ಕಲ್ಲು ನೂರಡಿ ಹೋಗಿ ಬೀಳುತ್ತದೆ, ಬಂದೂಕಿನಿಂದ ಹೊಡೆದ ಗುಂಡು ಸಾವಿರ ಅಡಿ ಹೋಗಿ ಬೀಳುತ್ತದೆ ಆದರೆ ಹಸಿದ ಹೊಟ್ಟೆಗೆ ಕೊಟ್ಟ ಊಟ  ಸ್ವರ್ಗದ ಬಾಗಿಲಿಗೆ ಹೋಗಿ ಮುಟ್ಟುತ್ತದೆ ಎಂದು ಗ್ರಾಮೀಣ ಪೊಲೀಸ್ ಠಾಣಾಧಿಕಾರಿ ಭಾಷು ಚವ್ಹಾಣ  ಹೇಳಿದರು.

ಇಂದು ಹುಮ್ನಾಬಾದ ರಸ್ತೆಯ ಬೇಲೂರ ಕ್ರಾಸ  ನಲ್ಲಿ 9 ಸ್ಟಾರ್ ಮಿತ್ರ ಮಂಡಳಿ ವತಿಯಿಂದ ಬಡವರಿಗೆ ಉಚಿತವಾಗಿ ಊಟ ವಿತರಣೆ ಮಾಡಿ ಮಾತನಾಡುತ್ತ  ಲಾಕ್ ಡೌನ್ ಸಂದರ್ಭದಲ್ಲಿ  ಬಡವರಿಗೆ, ನಿರ್ಗತಿಕರಿಗೆ, ಕಾರ್ಮಿಕರಿಗೆ ಇಂತಹ ಸಂದಿಗ್ಧ ಪರಸ್ಥಿತಿಯಲ್ಲಿ ಉಚಿತವಾಗಿ ಅನ್ನದಾಸೋಹ ಮಾಡುವುದರೊಂದಿಗೆ ಸರಕಾರ ಮಾಡುವ ಕೆಲಸ  ಮಿತ್ರಮಂಡಳಿ ಮಾಡುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಸಂದರ್ಭದಲ್ಲಿ ಎಲ್ಲಾ ಕಾರ್ಯ ಸರ್ಕಾರದಿಂದಲೇ ಆಗಬೇಕೆಂದು  ಜನರು ನಿರೀಕ್ಷೆ ಮಾಡದೆ ಸಾರ್ವಜನಿಕರು, ಸಂಘ- ಸಂಸ್ಥೆಗಳು ಇಂಥ ಕಾರ್ಯಕ್ಕೆ  ಮುಂದೆ ಬರಬೇಕೆಂದು ವಿನಂತಿಸಿಕೊಂಡರು.

Contact Your\'s Advertisement; 9902492681

ಕೊರೊನಾ ಸೋಂಕು ಹರಡದಂತೆ ಸಾರ್ವಜನಿಕರು ಕಟ್ಟುನಿಟ್ಟಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಸುವುದು ಹಾಗೂ ದೈಹಿಕ ಅಂತರ ಕಾಪಾಡುವುದು ನಿಮ್ಮೆಲ್ಲರ ಕರ್ತವ್ಯವಾಗಿದೆ.  ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿ  ಸರ್ಕಾರದ ನಿಯಮ ಪಾಲಿಸುವುದರೊಂದಿಗೆ  ನಮಗೆ ಸಹಕಾರ ನೀಡಬೇಕೆಂದು ಸಲಹೆ ನೀಡಿದರು.

9ಸ್ಟಾರ್  ಮಿತ್ರ ಮಂಡಳಿ  ಮುಖ್ಯಸ್ಥರಾದ ಬಸವರಾಜ ಮಚೆಟ್ಟಿ, ಚಂದ್ರಕಾಂತ ಬಿರಾದಾರ, ಮನೋಹರ ಗುತ್ತೇದಾರ, ಲಕ್ಷ್ಮೀಪುತ್ರ ಬಿರಾದಾರ, ಶರಣಬಸಪ್ಪ ಪಾಟೀಲ ಉದನೂರ, ಉಮೇಶ ದೇಗಾಂವ, ವಿಜಯಕುಮಾರ ಕಾಳೆ, ಚಂದ್ರಕಾಂತ ಮುತ್ತಗಿ, ರವಿ ಮೂಲಗೆ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here