ರಾಯಚೂರು: ಕೋವಿಡ್-19 ನಿಂದ ಇಡೀ ರಾಜ್ಯದಲ್ಲಿ ದುಡಿಯುವ ಜನರಿಗೆ ದಲಿತರಿಗೆ ಪರಿಹಾರ ಒದಗಿಸ ಬೇಕು ಮತ್ತು ಎಲ್ಲಾರಿಗೆ ಉಚಿತವಾಗಿ ಲಸಿಕೆಯನ್ನು ಮನೆ ಮನೆಗೆ ತೆರಳಿ ಹಾಕಬೇಕು ಎಂದು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿಯಿಂದ ಮನೆಗಳ ಮುಂದೆ ಪ್ರತಿಭಟನೆ ನೀಡಿಸಿ ಆಗ್ರಹಿಸಿದರು.
ಈ ವೇಳೆಯಲ್ಲಿ 10 ಸಾವಿರ ನಗದು ಹಣ ಜೋತೆಗೆ ಅಗತ್ಯ ವಸ್ತುಗಳನ್ನು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಹರಿಜನವಾಡ ಏರಿಯಾದಲ್ಲಿ ಮನೆ ಮನೆಗಳ ಮುಂದೆ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಹಕ್ಕುಗಳ ಸಂಚಾಲಕರಾದ, ಕೆ.ಜಿ. ವೀರೇಶ್, ಹೆಚ್ ಪದ್ಮಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.