ಸುರಪುರ: ನಗರದ ಹಸನಾಪುರ ಯುಕೆಪಿ ಕ್ಯಾಂಪಲ್ಲಿಯ ಕಾಡಾ ಕಚೇರಿಯ ಡಿವಿಜನ್ ಸಂಖ್ಯೆ ೨ರ ವ್ಯಾಪ್ತಿಯಲ್ಲಿನ ಕಾಲುವೆ, ಚೆಕ್ ಡ್ಯಾಂ, ಬಸಿಗಾಲುವೆ ಕಾಮಗಾರಿಗಳಲ್ಲಿ ಬೋಗಸ್ ನಡೆದಿದ್ದು ಕೋಟಿಗಟ್ಟಲೇ ಭ್ರಷ್ಟಾಚಾರ ಎಸಲಾಗಿದ್ದು ಕೂಡಲೇ ಈ ಕುರಿತು ತನಿಖೆ ಜರುಗಿಸಿ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಸೇನೆ ಹಾಗೂ ಜೆಡಿ (ಎಸ್) ಪಕ್ಷ ಆಗ್ರಹಿಸಿವೆ.
ಈ ಕುರಿತು ನಗರಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಕೂರ್ಮರಾವ್ ಅವರಿಗೆ ಮನವಿ ಸಲ್ಲಿಸಿ, ಕಾಡಾ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಾಡಾ ಆಡಳಿತಾಧಿಕಾರಿ ಹೊಣೆಯಾಗಿದ್ದು ಕೂಡಲೇ ಈ ಕುರಿತು ತನಿಖೆ ಜರುಗಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದು ಅಲ್ಲದೆ ಹಸನಾಪುರ ಕ್ಯಾಂಪ್ ಕಾಡಾ ವಿಭಾಗ ಸಂಖ್ಯೆ ೨ ರಲ್ಲಿ ಹಾಗೂ ಎಫ್.ಐ.ಜಿ ವಿಭಾಗದ ವ್ಯಾಪ್ತಿಯಲ್ಲಿ ಗುತ್ತಿಗೆದಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸುಮಾರು ೬ ತಿಂಗಳುಗಳಿಂದ ಟೆಂಡರ್ ಪ್ರಕ್ರಿಯೆ ಮುಗಿಸುತ್ತಿಲ್ಲ ಎಂದು ದೂರಿರುವ ಮುಖಂಡರು ಇದರಿಂದ ರೈತರಿಗೆ ಸೌಲಭ್ಯ ಒದಗಿಸುವಲ್ಲಿ ವಿಳಂಬವಾಗುತ್ತಿದ್ದು ಗುತ್ತಿಗೆದಾರರು ಕಡಿಮೆ ದರದಲ್ಲಿ ಹೋಗಿದ್ದು ಅಗ್ರಿಮೆಂಟ್ ಮಾಡಿಕೊಳ್ಳುವದಕ್ಕೆ ಮುಂದೆ ಬರುತ್ತಿಲ್ಲಾ ಈ ಕುರಿತು ಕಾಡಾ ಮುಖ್ಯ ಅಭಿಯಂತರರು ನೋಟಿಸ್ ನೀಡಿ ೭ ದಿನಗಳ ಕಾಲಾವಕಾಶ ನೀಡಿದ್ದು ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ರೈತರಿಗೆ ಮೋಸವೆಸಗುತ್ತಿದ್ದಾರೆ ಕೂಡಲೇ ಇ.ಇ. ಅವರನ್ನು ಅಮಾನತ್ತುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಂಗನವಾಡಿ ಕೇಂದ್ರದ ಶಿಕ್ಷಕಿಯರು ಮೊಟ್ಟೆಗಳನ್ನು ಖರೀದಿ ಮಾಡಬೇಕು ಎಂಬ ನಿಯಮವಿದ್ದು ಆದರೆ ರಾಜಕೀಯ ಬೆಂಬಲದಿಂದ ಸಿ.ಡಿ.ಪಿ.ಓ ಅವರು ತಾವೇ ಖರೀದಿಸುತ್ತಿದ್ದು ಅಂಗವಾಡಿ ಕೇಂದ್ರಗಳಿಗೆ ಸರಿಯಾಗಿ ಪೂರೈಸುತ್ತಿಲ್ಲ ಅಲ್ಲದೆ ಮಕ್ಕಳಿಗೆ, ಬಾಣಂತಿಯರು ಹಾಗೂ ಗರ್ಭಿಣಿಯರಿಗೆ ಇಲಾಖೆಯಿಂದ ನೀಡಲಾಗುವ ಸೌಲಭ್ಯಗಳನ್ನು ನೀಡುವಲ್ಲಿ ಮೋಸವೆಸಗಲಾಗುತ್ತಿದ್ದು ಕೂಡಲೇ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಲಾಗಿದೆ, ನಗರಕ್ಕೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ತುಂಬಾ ಹಳೆಯದಾಗಿದ್ದು ಶೆಳ್ಳಗಿಯಿಂದ ನಗರಕ್ಕೆ ಇರುವ ೩೦-೪೦ ವರ್ಷಗಳ ಹಳೆಯದಾಗಿದ್ದು ಹಾಳಾಗಿ ಹೋಗಿದೆ ರಿಪೇರಿ ಹೆಸರಿನಲ್ಲಿ ಕೋಟಿಗಟ್ಟಲೇ ಹಣ ಲೂಟಿ ಮಾಡಲಾಗುತ್ತಿದ್ದು ನಗರಕ್ಕೆ ಸರಿಯಾಗಿ ನೀರು ಪೂರೈಸುತ್ತಿಲ್ಲ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜೆಚ್.ಡಿ.ಕುಮಾರಸ್ವಾಮಿ ಸೇನೆ ರಾಜ್ಯಾಧ್ಯಕ್ಷ ವೆಂಕೋಬ ದೊರೆ, ಜೆಡಿ (ಎಸ್) ತಾಲೂಕು ಮಹಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.