ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಹಳ್ಳೆ ಚಾಲನೆ

0
44

ಚಿತ್ತಾಪುರ:ಕೃಷಿ ಇಲಾಖೆ ಮತ್ತು ಕೃಷಿಗೆ ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ 2021-22 ನೇ ಸಾಲಿನ ಕೃಷಿ ಅಭಿಯಾನ ಕಾರ್ಯಕ್ರಮದಡಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮವನ್ನು ತಹಶೀಲ್ದಾರ್ ಉಮಾಕಾಂತ ಹಳ್ಳೆ ಚಾಲನೆ ನೀಡಿದರು.

ಮಂಗಳವಾರ ಪಟ್ಟಣದ ತಹಶೀಲ್ ಕಾರ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ
ಹಸಿರು ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂಜುಕುಮಾರ ಮಾನಕರ್ 2021-22 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿರುವ ರೈತರಿಗಾಗಿ ಇಲಾಖೆಯಿಂದ ಆ ಅಭಿಯಾನ ಹಮ್ಮಿಕೊಂಡಿದ್ದ, ರೈತರಿಗೆ ಸುಧಾರಿತ ಕೃಷಿ ಉತ್ಪಾದನೆ, ತಾಂತ್ರಿಕತೆ, ಗುಣಮಟ್ಟದ ಕೃಷಿ ಪರಿಕರಗಳ ಪೂರೈಕೆ ಮತ್ತು ಶಿಫಾರಸ್ಸು ಮಾಡಲಾದ ರಸಗೊಬ್ಬರಗಳ ಸಮರ್ಪಕ ಬಳಕೆ,ರೋಗ,ಕೀಟಗಳ ಹತೋಟಿ, ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ಕುರಿತು ಮಾಹಿತಿ ಒಡಗಿಸುವುದಾಗಿದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ರೈತರಿಗೆ ಸೂಕ್ತ ಬೆಳೆ ಬೆಳೆಯಲು ಪ್ರೋತ್ಸಾಹ ನೀಡುವುದರ ಜೊತೆ ಜೊತೆಗೆ ಇಲಾಖೆಯಿಂದ ಸೂಕ್ತ ಮಾರ್ಗದರ್ಶನ ನೀಡುವುದರ ಮೂಲಕ ರೈತರ ಆದಾಯ ಹೆಚ್ಚಿಸುವುದು ಇದರ ಬಹು ಮುಖ್ಯ ಉದ್ದೇಶವಾಗಿದ್ದು,ರೈತರಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತ್ತು ಮಾಹಿತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಈ ಅಭಿಯಾನದ ಸಮಗ್ರ ಕೃಷಿ ಮಾಹಿತಿ ಘಟಕವುಳ್ಳ ವಾಹನಗಳು ನಾಲವಾರ,ಶಹಾಬಾದ,ಚಿತ್ತಾಪುರ ಹೋಬಳಿಗೆ ಒಂದರಂತೆ ರೈತರು ಸಾಮಾನ್ಯವಾಗಿ ಒಂದೆಡೆ ಸೇರುವ ಸ್ಥಳಗಳಿಗೆ ಹೋಗಿ,ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಛಾಯಾಚಿತ್ರ ಹಾಗೂ ವಿಡಿಯೋ ತುಣುಕುಗಳ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ರವೀಂದ್ರ ಧಾಮಾ,ಅಧಿಕಾರಗಳಾದ ಬಸಲಿಂಗಪ್ಪಾ ಡಿಗ್ಗಿ,ಸಿದ್ದಣ ಅಣಬಿ,ವೀಲಾಸ್ ಹರಸೂರ್, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್,ಕಾರ್ಯದರ್ಶಿ ಸವಿತಾ ಗೋಣಿ, ಕರಣಕುಮಾರ್,ಸಂಗೀತಾ,ರಾಮು ರಾಠೋಡ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here