ಶಹಾಬಾದ: ನಗರ ಪೊಲೀಸ್ ಠಾಣೆಯ ಪಿಐಯಾಗಿ ಸಂತೋಷ ಹಳ್ಳೂರ್ ಅವರು ಗುರುವಾರ ಸಾಯಂಕಾಲ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ನಗರ ಪೊಲೀಸ್ ಠಾಣೆಯ ಪಿಐಯಾಗಿದ್ದ ಅಮರೇಶ.ಬಿ ಅವರು ವರ್ಗಾವಣೆಯಾದ ನಂತರ ಸುಮಾರು ನಾಲ್ಕೈದು ತಿಂಗಳವರೆಗೆ ಠಾಣೆಯ ಅಧಿಕಾರಿ ಇಲ್ಲದೇ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತೊಂದರೆಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿ ಅವರು ಇಎಸ್ಐ ಆಸ್ಪತ್ರೆಯನ್ನು ವೀಕ್ಷಣೆ ಮಾಡಲು ಬಂದಾಗ ಠಾಣೆಗೆ ಪಿಐ ಇಲ್ಲದೇ ತೊಂದರೆಯಾಗುತ್ತಿದೆ ಎಂದು ಅವರ ಗಮನಕ್ಕೆ ತಂದಾಗ ಅವರು ಆದಷ್ಟು ಬೇಗನ ಪಿಐ ನೇಮಿಸಲಾಗುವುದು ಎಂದು ಭರವಸೆ ನೀಡಿದ್ದರು.ಭರವಸೆ ನೀಡಿ ಹತ್ತು ದಿನದೊಳಗೆ ಕೊಟ್ಟ ಮಾತು ನಡೆಸಿಕೊಟ್ಟಿದ್ದಾರೆ. ನಗರ ಪೊಲೀಸ್ ಠಾಣೆಗೆ ಪಿಐಯಾಗಿ ಸಂತೋಷ ಹಳ್ಳೂರ್ ಅವರು ಅಧಿಕಾರ ಸ್ವೀಕರಿಸಿದರು.