ಕಲಬುರಗಿ: ಕೋವಿಡ್ ಸಂಕಷ್ಟದಲ್ಲಿರುವ ರೈತರೆಲ್ಲರಿಗೂ ಮುಂಗಾರು ಬಿತ್ತನೆಯ ಬೀಜಗಳನ್ನು ಉಚಿತವಾಗಿ ಆಯಾ ಗ್ರಾಪಂಗಳ ಮೂಲಕ ವಿತರಿಸಬೇಕು ಎಂಬ ವಿವಿಧ ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಜಿಲ್ಲಾ ಜಾತ್ಯಾತೀತ ಜನತಾದಳದ ನೇತೃತ್ವದಲ್ಲಿ ನಗರದ ಟೌನ್ಹಾಲ್ನಲ್ಲಿರುವ ಮಹಾತ್ಮ ಗಾಂಧಿಜೀ ಪುತ್ಥಳಿ ಎದುರುಗಡೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಬೇಡಿಕೆಯ ಮನವಿ ಸಲ್ಲಿಸಲಾಯಿತು.
ಶಾಮರಾವ ಸೂರನ, ಶಂಕರಕಟ್ಟಿ ಸಂಗಾವಿ, ಮನೋಹ ಪೊದ್ದಾರ, ಬಸವರಾಜ ಸಿದ್ರಾಮಗೋಳ, ದೇವಿಂದ್ರ ಹಸನಾಪೂರ, ಮಾಣಿಕ ಶಾಹಪೂರಕರ ಇದ್ದರು.