ಲಾಕ್‌ಡೌನ್ ಸಂಕಷ್ಟದಲ್ಲಿ ದಿನಸಿ ದಾನ ಜೀವದಾನ

0
29

ವಾಡಿ: ದಾನ ಧರ್ಮ ಎಂಬುವುದು ಮಾನವ ಜೀವನದ ಮಹತ್ವದ ಕಾಯಕ. ಸಾಂಕ್ರಾಮಿಕ ರೋಗದ ಗಳಿಗೆಯ ಲಾಕ್‌ಡೌನ್ ಸಂಕಷ್ಟದಲ್ಲಿ ದುಡಿಮೆಯಿಲ್ಲದೆ ಮನೆಯಲ್ಲಿರುವ ಬಡ ಕುಟುಂಬಗಳಿಗೆ ನೀಡುವ ದಿನಸಿ ಪದಾರ್ಥಗಳ ದಾನ ಎಂಬುದು ಜೀವದಾನಕ್ಕೆ ಸಮ ಎಂದು ಹಳಕರ್ಟಿ ಕಟ್ಟಿಮನಿ ಹಿರೇಮಠದ ಪೂಜ್ಯ ಶ್ರೀ ಮುನೀಂದ್ರ ಸ್ವಾಮೀಜಿ ನುಡಿದರು.

ಎಸಿಸಿ ಸಿಮೆಂಟ್ ಕಂಪನಿಯ ಡೆಪ್ಯೂಟಿ ಮ್ಯಾನೇಜರ್ ವೀರಭದ್ರಯ್ಯ ಬೆಲ್ಲದ್ ಹಾಗೂ ನಿರ್ಮಲಾ ವೀರಭದ್ರಯ್ಯ ಬೆಲ್ಲದ್ ದಂಪತಿಗಳಿಂದ ಮಂಗಳವಾರ ಏರ್ಪಡಿಸಲಾಗಿದ್ದ ಹಳಕರ್ಟಿ ಗ್ರಾಮದ ವಿಧವೆಯರು, ಅಂಗವಿಕಲರು, ಖಾಸಗಿ ಶಾಲಾ ಶಿಕ್ಷಕರು, ಅತಿಥಿ ಶಿಕ್ಷಕರು ಹಾಗೂ ಗ್ರಾಪಂ ಪೌರಕಾರ್ಮಿಕರು ಸೇರಿದಂತೆ ಒಟ್ಟು ೧೫೦ ಜನರಿಗೆ ದಿನಸಿ ಕಿಟ್ ವಿತರಿಸಿದ ನಂತರ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿದರು.

Contact Your\'s Advertisement; 9902492681

ಮನುಷ್ಯ ಸಂಕುಲಕ್ಕೆ ಪ್ರಾಣಾಪಾಯ ತಂದಿಟ್ಟಿರುವ ಕೊರೊನಾ ಎಂಬ ಮಹಾಮಾರಿ ವೈರಸ್ ಬದುಕು ಸರ್ವನಾಶಗೊಳಿಸಿದೆ. ಪ್ರಾಣುವಾಯು ಕೊರತೆಯಿಂದ ಜನರು ಪ್ರಾಣ ಬಿಡುತ್ತಿದ್ದಾರೆ. ಕಣ್ಣಿಗೆ ಕಾಣದ ಮಾಯಾವಿ ರೋಗವನ್ನು ನಿಯಂತ್ರಿಸಲು ಸರಕಾರ ಲಾಕ್‌ಡೌನ್ ಘೋಷಿಸಿದೆ. ಪರಿಣಾಮ ಕೆಲಸ ವಂಚಿತ ಬಡ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಜನಪರ ಕಾಳಜಿಯುಳ್ಳವರು ಆಹಾರ ಮತ್ತು ದಿನಸಿ ದಾನಕ್ಕೆ ಮುಂದಾಗುವುದು ಅತ್ಯಂತ ಪುಣ್ಯದ ಕಾರ್ಯವಾಗಿದೆ. ನಮ್ಮ ಸುತ್ತಮುತ್ತಲಿನ ಬಡವರ ಕಷ್ಟಕ್ಕೆ ಮರುಗುವ ಮನಸ್ಸುಗಳು ದಾನಕ್ಕೆ ಮುಂದಾಗಬೇಕು ಎಂದರು.

ದಿನಸಿ ದಾನಿಗಳಾದ ವೀರಭದ್ರಯ್ಯ ಬೆಲ್ಲದ್, ನಿರ್ಮಲಾ ವಿ.ಬೆಲ್ಲದ್, ತಾಪಂ ಸದಸ್ಯ ಬಸವರಾಜ ಲೋಕನಳ್ಳಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲಣ್ಣ ಸಾಹು ಸಂಗಶೆಟ್ಟಿ, ಗ್ರಾಪಂ ಸದಸ್ಯರಾದ ರಾಘವೇಂದ್ರ ಅಲ್ಲಿಪುರ, ಚಂದ್ರಕಾಂತ ಮೇಲಿನಮನಿ, ವಿರೇಶ ಕಪ್ಪರ್, ಶಿಕ್ಷಕ ಶರಣುಕುಮಾರ ದೋಶೆಟ್ಟಿ, ಮುಖಂಡರಾದ ರಾಜುಗೌಡ ಪೊಲೀಸ್ ಪಾಟೀಲ, ಸಿದ್ದು ಮುಗುಟಿ, ಯಲಗುರೇಶ ಬಿಸನಾಳ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here