ಬ್ರಿಡ್ಜ್ ಕಮ್ ಬ್ಯಾರೇಜ್‌ನಲ್ಲಿ ಕಂಡು ಬಂದ ಬಿರುಕು ಪರಿಶೀಲನೆ

0
55

ಶಹಾಬಾದ:ತಾಲೂಕಿನ ಗೋಳಾ(ಕೆ) ಗ್ರಾಮದ ಕಾಗಿಣಾ ನದಿಗೆ ಕಟ್ಟಲಾದ ಬ್ರಿಡ್ಜ್ ಕಮ್ ಬ್ಯಾರೇಜ್ ಗೋಡೆಯಲ್ಲಿ ಕಂಡು ಬಂದ ಬಿರುಕನ್ನು ಸಣ್ಣ ನೀರಾವರಿ ಇಲಾಖೆಯ ಎಇಇ ನರೇಂದ್ರ ಅವರು ಬೇಟಿ ನೀಡಿ ಪರಿಶೀಲಿಸಿದರು.

ಕಳೆದ ಎರಡು ದಿನಗಳ ಹಿಂದಷ್ಟೆ ಪ್ರತಿಕೆಗಳಲ್ಲಿ ಬಂದ ವರದಿಗೆ ಸ್ಪಂದಿಸಿದ ಶಾಸಕ ಬಸವರಾಜ ಮತ್ತಿಮಡು ಅವರು ತಕ್ಷಣವೇ ಅಧಿಕಾರಿಗಳಿಗೆ ಕರೆ ಮಾಡಿ ಪರಿಶೀಲಿಸಲು ತಿಳಿಸಿದ್ದರು. ಪರಿಶೀಲನೆ ನಡೆಸಿದ ಎಇಇ ನರೇಂದ್ರ ಬ್ರಿಡ್ಜ್ ಕಮ್ ಬ್ಯಾರೇಜ್‌ನಲ್ಲಿ ಬಿರುಕು ಮೂಡಿಲ್ಲ. ಬ್ಯಾರೇಜ ಹಾಗೂ ಅದಕ್ಕೆ ಹೊಂದಿಕೊಂಡಿರುವ ಸಪೋರ್ಟಿಂಗ್ ಗೋಡೆ ನಡುವೆ ಇರುವ ಸಂದು ಇದಾಗಿದೆ.ಮಳೆ ಹಾಗೂ ನದಿಯ ಪ್ರವಾಹದಿಂದ ಮಣ್ಣಿನಿಂದ ಮುಚ್ಚಲ್ಪಟ್ಟ ಗೋಡೆಯ ಮಣ್ಣು ಹರಿದು ಹೋಗಿರುವುದರಿಂದ ಎರಡು ಗೋಡೆಗಳ ಮಧ್ಯದ ಸಂದು ಕಾಣಿಸಿಕೊಂಡಿದೆ.ಇದರಿಂದ ಸೇತುವೆಗೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದರು.

Contact Your\'s Advertisement; 9902492681

ಅಲ್ಲದೇ ಬ್ರಿಡ್ಜ್ ಕಮ್ ಬ್ಯಾರೇಜ್ ಹೊಂದಿಕೊಂಡು ಭಾರಿ ವಾಹನಗಳು ಹೋಗದಂತೆ ಕಬ್ಬಿಣದ ಪೈಪುಗಳನ್ನು ಅಳವಡಿಸಲಾಗಿತ್ತು.ಆದರೆ ಕೆಲವು ತಿಂಗಳ ಹಿಂದೆ ರಸ್ತೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಜಲ್ಲಿ ಕಲ್ಲುಗಳು ತೆಗೆದುಕೊಂಡು ಹೋಗಲು ಗುತ್ತಿಗೆದಾರ ಅದನ್ನು ತೆರವುಗೊಳಿಸಿದ್ದರು.ಕಾಮಗಾರಿ ಮುಗಿದ ನಂತರ ಮತ್ತೆ ಅಳವಡಿಸುತ್ತೆನೆ ಎಂದು ಹೇಳಿದ್ದರು.ಆದರೆ ಕಾಮಗಾರಿ ಮುಗಿದು ಹಲವು ತಿಂಗಳುಗಲೇ ಗತಿಸಿದರೂ ಅಳವಡಿಸದೇ ಹೋಗಿದ್ದಾರೆ. ಆದರೂ ಆದಷ್ಟು ಬೇಗನೆ ನಮ್ಮ ಇಲಾಳೆಯಿಂದ ಪೈಪುಗಳನ್ನು ಅಳವಡಿಸಿ ಭಾರಿ ವಾಹನಗಳನ್ನು ಹೋಗದಂತೆ ಕ್ರಮಕೈಗೊಳ್ಳುತ್ತೆನೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here