ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಸೈಬರ್ ಕೆಫೆ ಸೌಲಭ್ಯ

0
83

ಕಲಬುರಗಿ: ಕಲಬುರಗಿ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಆಳಂದ ತಾಲೂಕಿನ ಮಾಡಿಯಾಳ ಮತ್ತು ಯಳಸಂಗಿ, ಸೇಡಂ ತಾಲೂಕಿನ ಮಳಖೇಡ ಮತ್ತು ಮುಧೋಳ ಹಾಗೂ ಕಲಬುರಗಿ ತಾಲೂಕಿನ ಕಮಲಾಪೂರ ಮತ್ತು ಶ್ರೀನಿವಾಸ ಸರಡಗಿ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಲ್ಲಿ ಸೈಬರ್ ಕೆಫೆ ಸೌಲಭ್ಯ ಒದಗಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೆಶಕರು ತಿಳಿಸಿದ್ದಾರೆ.

ಕಲಬುರಗಿಯ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಸೈಬರ್ ಕೆಫೆ ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here