ಕ್ರಿಮಿನಲ್ ಕೇಸ್‌ನ್ನು ಖುದ್ದಾಗಿ ವಕೀಲರಿಗೆ ನೀಡುತ್ತಿರುವ ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಮ ಜರುಗಿಸಲು ಒತ್ತಾಯ

0
742

ಶಹಾಬಾದ:ನಗರದ ಪೊಲೀಸ್ ಠಾಣೆಯಲ್ಲಿ ಬರುವಂತಹ ಹೊಸ ಕ್ರಿಮಿನಲ್ ಕೇಸ್‌ಗಳನ್ನು ತಮಗೆ ಬೇಕಾಗಿರುವ ವಕೀಲರಿಗೆ ಮಾತ್ರ ಒತ್ತಾಯ ಪೂರ್ವಕವಾಗಿ ನೀಡುತ್ತಿರುವ ಪೊಲೀಸ್ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ರವಿವಾರ ವಕೀಲರ ಸಂಘದ ವತಿಯಿಂದ ಆರಕ್ಷಕ ನಿರೀಕ್ಷಕ ಸಂತೋಷ ಹಳ್ಳೂರ ಅವರಿಗೆ ಮನವಿ ಪತ್ರ ಸಲ್ಲಿಸಿಲಾಯಿತು.

ನಗರದ ನ್ಯಾಯಾಲಯದ ವ್ಯಾಪ್ತಿಯಲ್ಲಿ ಸುಮಾರು ೪೦ ರಿಂದ ೫೦ ವಕೀಲರು ವಕೀಲವೃತ್ತಿಯಲ್ಲಿ ಕಾರ್ಯಪ್ರವರ್ತರಾಗಿದ್ದಾರೆ. ಆದರೆ ಸುಮಾರು ೧೦ ವರ್ಷಗಳ ಅವಧಿಯಲ್ಲಿ ವಕೀಲರು ಹೇಳಿಕೊಳ್ಳಲಾಗದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದೆವೆ. ಕಾರಣ ಶಹಾಬಾದ ನಗರ ಪೋಲಿಸ್ ಠಾಣೆಯಿಂದ ಕೆಲವು ಪೋಲಿಸ್ ಸಿಬ್ಬಂದಿಯವರು ಪೋಲಿಸ್ ಠಾಣೆಗೆ ಬರುವಂತಹ ಕ್ರಿಮಿನಲ್ ಕೇಸುಗಳಲ್ಲಿ ಆರೋಪಿಗಳಿಗೆ ಹೆದರಿಸಿ, ತಮಗೆ ಬೇಕಾದ ವಕೀಲರಗೆ ಕೇಸನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ವಕೀಲರು ಹಾಗೂ ಆರೋಪಿಗಳು ಕೊಡುವ ಹಣದ ಆಸೆಗಾಗಿ ಕೆಲ ವಕೀಲರನ್ನೂ ತಮ್ಮ ಕೈಗೊಂಬೆ ಮಾಡಿಕೊಂಡು ಅವರಿಂದ ಹಣ ಪಡೆಯುತ್ತಿದ್ದಾರೆ. ಪೊಲೀಸರೆ ಕ್ರಿಮಿನಲ್ ಕೇಸುಗಳನ್ನು ಠಾಣೆಯಲ್ಲಿ ಕುಳಿತುಕೊಂಡು ಅವರ ಹಿಡಿತದಲ್ಲಿರುವ ವಕೀಲರಿಗೆ ಕರೆಸಿ ತಾವೇ ಫೀಸ್ ನಿರ್ಧರಿಸುತ್ತಿದ್ದಾರೆ. ಹೀಗಾಗಿ ನ್ಯಾಯಾಲಯದ ಎಲ್ಲ ಕ್ರಿಮಿನಲ್ ಕೇಸುಗಳು ಕೇವಲ ಒಂದಿಬ್ಬರ ವಕೀಲರ ಪಾಲಗುತ್ತಿವೆ.

Contact Your\'s Advertisement; 9902492681

ವಕೀಲ ವೃತ್ತಿಯನ್ನೇ ನಂಬಿಕೊಂಡಿರುವ ಉಳಿದ ವಕೀಲರು ಹಾಗೂ ಅವರ ಕುಟುಂಬ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಾಗಿದೆ. ಈ ಕಾಳಧಂದೆಯಲ್ಲಿ ರೈಟರ, ಬೇರಳಚ್ಚುಗಾರರು, ಸಮಸ್ಸ ಪಿಸಿ, ವಾರೆಂಟ ಪಿಸಿ ಹಾಗೂ ನಮ್ಮ ವಕೀಲರ ಸಂಘದ ಸದಸ್ಯರ ಇಲ್ಲದ ಒಂದಿಬ್ಬರು ವಕೀಲರು ಶಾಮಿಲಾಗಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಪ್ರತಿ ೪ ಅಥವಾ ೬ ತಿಂಗಳಿಗೊಮ್ಮೆ ಮೇಲ್ಕಾಣಿಸಿದ ಪೊಲೀಸ್ ಸಿಬ್ಬಂದಿಯವರನ್ನು ಬದಲಾಯಿಸಬೇಕು. ನ್ಯಾಯಾಲಯದಲ್ಲಿ ಪೊಲೀಸ್ ಸಿಬ್ಬಂದಿಯವರು ಆರೋಪಿ ಸಮನ್ಸ್ ಜಾರಿ ಮಾಡಿಸಿದಾಗ, ಸಾಕ್ಷಿಗಳಿಗೆ ಸಮನ್ಸ್ ಜಾರಿ ಮಾಡಿಸಿ ನ್ಯಾಯಾಲಯಕ್ಕೆ ಕರೆ ತಂದಾಗ ಪೊಲೀಸ್ ಸಿಬ್ಬಂದಿಯವರು ಆರೋಪಿಯವರ ಹತ್ತಿರ ಒತ್ತಾಯ ಪೂರ್ವವಾಕವಾಗಿ ಹಣ ವಸೂಲಿ ಮಾಡುತ್ತಿರುವುದು ಕಂಡುಬಂದಿದ್ದು ಇದರಿಂದ ನಮ್ಮ ಕಕ್ಷಿದಾರಿಗೆ ಬಹಳಷ್ಟು ತೊಂದರೆ ಆಗುತ್ತಿದೆ.ಆದ್ದರಿಂದ ಇದರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಾಗಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here