ಕಲಬುರಗಿ: ಛತ್ತಿಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದ ನಕ್ಸಲ್ ಕಾರ್ಯಾಚಾರಣೆಯಲ್ಲಿ ಹುತಾತ್ಮರಾದ ಕಲಬುರಗಿ ಜಿಲ್ಲೆ ಮರಗುತ್ತಿ ಗ್ರಾಮದವರಾದ ಸಬ್ ಇನ್ಸಪೆಕ್ಟರ್ ಮಹಾದೇವ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲಾಯಿತು.
ಹೈದರಾಬಾದ್ ನಿಂದ ರಸ್ತೆ ಮೂಲಕ ಕರೆತರಲಾದ ಹುತಾತ್ಮ ಯೋಧನಿಗೆ ಗ್ರಾಮದಲ್ಲಿ ಸರಕಾರಿ ಗೌರವಂದನೆ ಸಲ್ಲಿಸಲಾಯಿತು. ಹುತಾತ್ಮ ಯೋಧ ಮಹಾದೇವ ಅವರ ಪಾರ್ಥಿವ ಗ್ರಾಮದ ಹಿರಿಯರು ಮತ್ತು ಗಣ್ಯರು ನಮನಸಲ್ಲಿಸುವ ಮೂಲಕ ಕಂಬನಿ ಮಿಡಿದರು.
ಹುತಾತ್ಮ ಯೋಧ ಮಹಾದೇವ ಪೊಲೀಸ್ ಪಾಟೀಲ್ ಅಂತಿಮ ದರ್ಶನ ಪಡೆದ ನಂತರ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಮೃತ ಯೋಧನ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ ನೀಡುತ್ತೇವೆ ಎಂದು ಘೋಷಿಸಿದರು. ಇದೆ ವೇಳೆ ಸಂಸದ ಡಾ.ಉಮೇಶ್ ಜಾಧವ್ ಮಾತನಾಡಿ ಕೇಂದ್ರ ಸರ್ಕಾರದಿಂದ ಯೋಧನ ಕುಟುಂಬಕ್ಕೆ ಸಿಗುವ ಎಲ್ಲಾ ಸೌಲಭ್ಯಗಳ ಒದಗಿಸುವ ಭರವಸೆ ನೀಡಿದರು.