ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ

0
66

ಕಲಬುರಗಿ: ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರವಿವಾರದಂದು ನಗರದ ವಿವಿಧ ಬಡಾವಣೆಗಳಲ್ಲಿ ನೂರಾರು ಸಸಿಗಳನ್ನು ಸ್ವಯಂ ಪ್ರೇರಿತವಾಗಿ ನೆಡುವ ಮೂಲಕ ಪರಿಸರದ ಕುರಿತು ಕಾಳಜಿ ಹೊಂದುವ ಪ್ರೇರಣೆ ನೀಡಿದರು.

ಮುಖ್ಯಸ್ಥರಾದ ಮಾಲಾ ದಣ್ಣೂರ ಮತ್ತು ಮಾಲಾ ಕಣ್ಣಿ ಮಾತನಾಡಿ, ರಾಸಾಯನಿಕಗಳ ಬಳಕೆ ಕಡಿಮೆ ಮಾಡುವುದರ ಮೂಲಕ ನಿಸರ್ಗಕ್ಕೆ ನಿಷ್ಠರಾಗಿ ಬದುಕುವುದರಿಂದ ಮಾತ್ರ ಪರಿಸರ ಸಮತೋಲನ ಕಾಪಾಡಲು ಸಾಧ್ಯ. ಪರಿಸರ ಎಂಬುದು ಇಂದು ವಿಶ್ವದಲ್ಲಿ ಅತೀ ಹೆಚ್ಚು ದೌರ್ಜನ್ಯಕ್ಕೆ ತುತ್ತಾಗುತ್ತಿದೆ ಎಂಬುದನ್ನು ಎಲ್ಲರಿಗೂ ಗೊತ್ತಿದೆ. ಆದಾಗ್ಯೂ, ಅದರ ವಿರುದ್ಧ ತನ್ನ ಆಸೆಗಳನ್ನು ಈಡೇರಿಸಿಕೊಳ್ಳಲು ಮನುಷ್ಯ ನಡೆಸುತ್ತಿರುವ ಕೃತ್ಯ ಮುಂದೊಂದು ದಿನ ದೊಡ್ಡ ಅಘಾತಕ್ಕೆ ಕಾರಣವಾಗಲಿದೆ. ಹಾಗಾಗಿ, ಮಹಾನಗರದಲ್ಲಿರುವ ಪ್ರತಿಯೊಂದು ಮನೆಯಲ್ಲೂ ಸಸಿ ನೆಡಲು ಮನಸ್ಸು ಮಾಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

Contact Your\'s Advertisement; 9902492681

ಸಂಶೋಧಕ ಮುಡುಬಿ ಗುಂಡೇರಾವ, ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಪ್ರಮುಖರಾದ ಶರಣರಾಜ್ ಛಪ್ಪರಬಂದಿ, ಗಗನ ಗಿಲ್ಡಾ, ಜಗದೀಶ, ವೀರೇಶ, ವಿಷ್ಣು ಮೋರೆ, ರಾಜು, ಕಲ್ಯಾಣಕುಮಾರ ಶೀಲವಂತ, ಪ್ರಭುಲಿಂಗ ಮೂಲಗೆ, ಪೂರ್ಣಿಮಾ ಜಾನೆ, ಪ್ರಸನ್ನ ವಾಂಜರಖೇಡೆ, ಪ್ರಭವ ಪಟ್ಟಣಕರ್, ವೈಶಾಲಿ ನಾಟೀಕರ್, ಕಲ್ಯಾಣರಾವ ಪಾಟೀಲ ಕಣ್ಣಿ, ಶಿವಾನಂದ ಮಠಪತಿ, ಮಂಜುನಾಥ ಕಂಬಳಿಮಠ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here