ರಾಮ ಶಾಂತಿಯ ಸಂಕೇತವಾದರೆ, ರಾಯಣ್ಣ ಸ್ವಾಭಿಮಾನದ ಸಂಕೇತ: ರಾಜುಎಮ್ ಹಿರೇಮಠ

0
9

ಕಲಬುರಗಿ: ನರೋಣಾಗ್ರಾಮದಲ್ಲಿ ಭಗವಾನ ಶ್ರೀರಾಮನು ಪ್ರತಿಷ್ಠಾಪಿಸಿದ ಶ್ರೀ ಕ್ಷೇಮಲಿಂಗೇಶ್ವರಜ್ಯೋರ್ತಿಲಿಂಗ ನರೋಣಾ ಗ್ರಾಮದಲ್ಲಿ ಯಾವರೀತಿ ಶಾಂತಿಯ ಸಂಕೇತವಾಗಿದಿಯೋಅದೇರೀತಿರಾಯಣ್ಣ ಅಭಿಮಾನಿಗಳು ನಿರ್ಮಿಸಿದ ವೀರ ಸಂಗೋಳ್ಳಿ ರಾಯಣ್ಣ ವೃತ್ತ,ಗ್ರಾಮಸ್ಥರ,ರಾಯಣ್ಣ ಅಭಿಮಾನಿಗಳ ಸ್ವಾಭಿಮಾನದ ಸಂಕೇತವಾಗಿ ಉಳಿಯಲಿ ಎಂದುಕರ್ನಾಟಕ ವಿಜಯ ಸೇನೆ ಜಿಲ್ಲಾದ್ಯಕ್ಷರಾದರಾಜುಎಮ್ ಹಿರೇಮಠಅವರು ಹೇಳಿದರು.

ನರೋಣಾಗ್ರಾಮದಲ್ಲಿಸಂಗೋಳ್ಳಿ ರಾಯಣ್ಣ ಅಭಿಮಾನಿಗಳು ಹಮ್ಮಿಕೊಂಡಿದ್ದಸಂಗೋಳ್ಳಿ ರಾಯಣ್ಣನವರ ವೃತ್ತವನ್ನು ಉದ್ಘಾಟಿಸಿ, ಅಥಿತಿಯಾಗಿಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಬಡವರನ್ನು ಬಲ ಪಡಿಸಬೇಕು, ಪರಕೀಯರು ಭಾರತೀಯರಲ್ಲಿ ವಸೂಲಿ ಮಾಡುತ್ತಿದ್ದಕಂದಾಯವನ್ನು ನಿಲ್ಲಿಸಬೇಕು, ಇಲ್ಲಿರುವ ಮೂಲ ಭಾರತೀಯರಿಗೆ ಸ್ವತಂತ್ರ್ಯವನ್ನು ದೊರಕಿಸಿ ಕೊಡಬೇಕೆಂದು ಹಗಲು ಇರಲುತಾಯಿ ನಾಡಿಗಾಗಿ ಹೋರಾಡಿದಅಪ್ಪಟದೇಶ ಪ್ರೇಮಿ ಸಂಗೋಳ್ಳಿ ರಾಯಣ್ಣಈ ನಾಡಿನಯುವಕರಿಗೆ ನೀಜವಾದ ಹಿರೋ ಆಗಬೇಕು, ಹಳೆಯ ಕಾಲದಲ್ಲಿ ಬಿರೆಡ್( ಕಂದಾಯ) ವಸೂಲಿಗೆ ಬೇಸತ್ತು ಎಷ್ಟೋ ಬಡವರುತನ್ನ ಹೊಲ ಮನೆ ಎಲ್ಲವನ್ನುತೊರೆದು ಬೇರೆಗ್ರಾಮಕ್ಕೆ ವಲಸೆ ಹೋಗುತ್ತಿದ್ದನ್ನುಕಂಡ ಸಂಗೋಳ್ಳಿ ರಾಯಣ್ಣ ಬ್ರೀಟಿಷರ್ ವಿರುದ್ಧದ್ವನಿ ಎತ್ತುವ ಮೂಲಕ ಕಂದಾಯ ವಸೂಲಿ ನಿಲ್ಲಿಸಿ ಎಂದು ಬ್ರೀಟಿಷರ್ ವಿರುದ್ದ ಸಮರ ಸಾರಿದ ಮೊದಲ ಕೀರ್ತಿ ವೀರ ಸಂಗೋಳ್ಳಿ ರಾಯಣ್ಣನಿಗೆ ಸಲ್ಲುತ್ತದೆ ಎಂದರು.

ಆದುನಿಕಯುಗದಲ್ಲಿ ನಡೆಯುತ್ತಿರುವ ಬ್ರಷ್ಠಾಚಾರವನ್ನುತಾವುತಡೆಯಬೇಕಾದರೆ ಮೊದಲು ಶೈಕ್ಷಣಿಕವಾಗಿ ಪ್ರಬಲರಾಗಬೇಕು, ನಾವೆಲ್ಲರೂ ಬುದ್ದಿ ಜೀವಿಗಳಾದಾಗ ಬ್ರಷ್ಠರು ಮಾಡುವಅನ್ಯಾಯಅಕ್ರಮವನ್ನು ಹೊರತರಲು ಸಾದ್ಯವೆಂದುಯುವಕರಲ್ಲಿ ಶಿಕ್ಷಣದ ಕುರಿತುಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ರೇವಣಸಿದ್ದಪ್ಪಾ ಪೂಜಾರಿಅವರು ಮಾತನಾಡಿರಾಯಣ್ಣ ಅಭಿಮಾನಿಗಳ ಈ ನಡೆಗ್ರಾಮದಲ್ಲಿ ಶಾಂತಿಕಾಪಾಡಲಿ, ಮಾಹಾತ್ಮರ ಸ್ಮರಣೆ ಎಂದಿಗೂ ಕೂಡಾನಿಲ್ಲಬಾರದು, ಅವರಜೀನದಚರಿತ್ರೆ ನಮಗೆ ಸ್ಪೂರ್ತಿಯಾಗಬೇಕು, ಪ್ರತಿಯೊಬ್ಬರು ರಾಯಣ್ಣನ ಜೀವನದ ಚರಿತ್ರಯನ್ನು ಓದಬೇಕು, ಸಮಾಜದಲ್ಲಿ ನೊಂದವರು ಮತ್ತು ಶಿಕ್ಷಣದಿಂದ ವಂಚಿತರಾದವರನ್ನು ಗುರುತಿಸಿ ಅವರನ್ನುಉಚಿತ ಶಿಕ್ಷಣ ನೀಡುವಜವಾಬ್ಧಾರಿ ಸಂಗೋಳ್ಳಿ ರಾಯಣ್ಣ ಅಭಿಮಾನಿಗಳು ಮಾಡಬೇಕೆಂದು ಮಾತನಾಡಿದರು.

ಕಾರ್ಯಕ್ರಮದಲ್ಲಿಗುಂಜಬಬಲಾದದ ಸಂಗೋಳ್ಳಿ ರಾಯಣ್ಣಅಭಿಮಾನಿ ಸಂಘದಅದ್ಯಕ್ಷರಾದಅಂಬ್ರೇಶ ಪೂಜಾರಿಅವರು ಮಾತನಾಡಿ ಸದ್ಯರಾಜಕೀಯವಾಗಿ ಮಾಹಾತ್ಮರ, ದೇಶಭಕ್ತರ, ಯೋಧರ ಹೆಸರನ್ನು ಬಳಸಿ ಕೊಳ್ಳುವದು ನಿಲ್ಲಿಸಬೇಕು, ಶರಣರು, ಮಾಹಾತ್ಮರುಒಂದು ವರ್ಗಕ್ಕೆ ಸೀಮಿತವಲ್ಲದ ವ್ಯಕ್ತಿಗಳವರು, ಅವರ ಹೆಸರಿನಲ್ಲಿರಾಜಕೀಯ ಸಲ್ಲದು, ರಾಯಣ್ಣನ ಸೇವೆಗೆ ನಾನು ಸದಾತನು ಮನ ಧನದಿಂದದುಡಿಯುವೆ, ರಾಯಣ್ಣನಜಯಂತಿ ಸ್ವಾಭಿಮಾನವಾಗಿ ಭಾರತೀಯರಲ್ಲಿ ಸದಾ ಉಳಿಯಲಿ, ರಾಜಕೀಯ ನಾಯಕರು ಗ್ರಾಮದಲ್ಲಿ ಅನ್ಯಾಯದ ಹಣವನ್ನು ಲಪಾಟಿಯಿಸುತ್ತಿದ್ದರೆ, ಸಂಗೋಳ್ಳಿ ರಾಯಣ್ಣ ಅಭಿಮಾನಿಗಳಾದ ನಾವು ತಡೆದು ನಿಲ್ಲಿಸಬೇಕುಇದು ನಮ್ಮ ಮೂಲ ಭೂತ ಹಕ್ಕು ಎಂದುಯುವಕರಿಗೆ ತಿಳಿಸಿದರು.

ಕಾರ್ಯಕ್ರಮವನ್ನು ಬಸವರಾಜಕರಬಿರ್‌ಅವರು ಸ್ವಾಗತಿಸಿದರು, ಮಲ್ಲು ಮುದ್ದಡಗಿ ನಿರೂಪಿಸಿದರು, ಮನೋಜ ಭಂಕುರ ವಂದಿಸಿದರು ಮೊದಲಿಗೆಕಾರ್ಯಕ್ರಮವನ್ನು ಸಂಗೋಳ್ಳಿಯ ರಾಯಣ್ಣ ಪ್ರತಿಮಿಗೆ ಪೂಜೆ ಸಲ್ಲಿಸುವದರ ಮುಖಾಂತರ ಚಾಲನೆ ನೀಡಲಾಗಿತ್ತು.

ಕಾರ್ಯಕ್ರಮದಲ್ಲಿ ಶಿವರಾಜ ಕರಿಬೀರ್‌ಕ್ಷೇಮಲಿಂಗ ಮುನ್ನೋಳ್ಳಿ ಆಕಾಶ ಅಮಗೊಂಡ ಮಹೇಶ ಭಂಕೂರ, ಭೀಮಾಶಂಕರದಣ್ಣೂರ, ರಾಯಣ್ಣ ಅಭಿಮಾನಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here