ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಅತ್ಯಂತ ಬಹುಸಂಖ್ಯಾತ ಕೂಲಿ ಕಬ್ಬಲಿಗ ಸಮಾಜವನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಎಸ್‌ಟಿ ಮಾಡುವ ಆಶೆ ತೋರಿಸಿ ಸಮಾಜವನ್ನು ಬಲಿ ಪಶು ಮಾಡಲಾಗಿದೆ, ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪ್ರಧಾನ ನರೇಂದ್ರ ಮೋದಿ ಅವರು ಕಲಬುಗಿ ಲೋಕಸಭಾ ಗೆಲ್ಲಿಸಿ ಕೊಟ್ಟರೆ ನಿಮಗೆ ಎಸ್‌ಟಿಗೆ ಸೇರಿಸಲಾಗುವುದ ಎಂದು ಭರವಸೆಯನ್ನು ನೀಡಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ತಮ್ಮದೇ ಸರಕಾರ ಇದ್ದರೂ ಕೂಡ ಕೂಲಿ ಸಮಾಜಕ್ಕೆ ಎಸ್‌ಟಿಗೆ ಸೇರ್ಪಡೆ ಮಾಡಲಿಲ್ಲ ಏಕೆ? ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ ಅವರು ತಮ್ಮ ಬಂಜಾರ ಸಮಾಜವನ್ನು ಎಸ್‌ಟಿಗೆ ಸೇರಿಸಲು ಮನವಿ ಮಾಡಿದ್ದು ಸತ್ಯವಾಗಿದೆ ಎಂದು ಮಾಜಿ ಸಚಿವ ಪ್ರೀಯಾಂಕ್ ಖರ್ಗೆ ತಿಳಿಸಿದರು.
ಆದರೆ ಓಟು ತೆಗೆದುಕೊಂಡು ಲೋಕಸಭಾ ಸದಸ್ಯರಾದ ಮೇಲೆ ನಮ್ಮ ಸಮಾಜವನ್ನು ನೆನಪಿಗೆ ಬರಲಿಲ್ಲ ಏಕೆ? ಜಾತಿ ವ್ಯಾಮೋಹದ ಎಂಪಿ ಎಂದು ಈಗಾಗಲೇ ಜಿಲ್ಲೆಯ ಹಾಗೂ ರಾಜ್ಯದ ಜನರಿಗೆ ಗೊತ್ತಾಗಿದೆ. ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಜನ ಸ್ವಯಂ ಪ್ರೇರಿತರಾಗಿದ್ದಾರೆಂದು ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹುನಗುಂಟಿ ಆಕ್ರೋಶ ವ್ಯಕ್ತಪಡಿಸಿದರು.
ಸಂಸದರು ಕೆಲವು ಜನ ಹಿಂಬಾಲಕರನ್ನು ಇಟ್ಟುಕೊಂಡು ಅವರಿಂದ ಹೇಳಿಕೆಗಳನ್ನು ಕೊಡಿಸಿ ಸಮಾಜಕ್ಕೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಂಸದರು ಹಿಂಬಾಲಕರಿಂದ ಹೇಳಿಕೆ ಕೊಡಿಸುವುದನ್ನು ಬಿಟ್ಟು ತಾವು ಸ್ವತಃ ತಮ್ಮ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಪ್ರಯತ್ನ ಮಾಡಿಲ್ಲವೆಂದು ಹೇಳಿಕೆ ನೀಡಲಿ ಅದಕ್ಕೆ ಸಾಕ್ಷಿ ಸಮೇತ ನಮ್ಮ ಪಕ್ಷದ ನಾಯಕರು ಉತ್ತರ ನೀಡುತ್ತಾರೆ ಎಂದರು.
ಆದ್ದರಿಂದ ಶಾಂತಪ್ಪ ಕೂಡಯವರ ಯಾವುದೇ ಸರಿಯಾದ ಮಾಹಿತಿ ಇಲ್ಲದೇ ಇನ್ನೊಬ್ಬರ ಮೇಲೆ ಗೂಬೆ ಕೂಡಿಸುವುದನ್ನು ಬಿಟ್ಟು ಸರಿಯಾದ ಮಾಹಿತಿ ಪಡೆದುಕೊಂಡು ಹೇಳಿಕೆ ನೀಡಬೇಕೆಂದು ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹುನಗುಂಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.