ಕಲಬುರಗಿ: ಮರಗುತ್ತಿ ಗ್ರಾಮದ ಹುತಾತ್ಮ ಯೋಧ ಮಹಾದೇವ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ ನಂತರ ಕಲಬುರಗಿ ನಗರಕ್ಕೆ ವಾಪಸಾಗುತ್ತಿದ್ದ, ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾರ್ಗಮಧ್ಯದಲ್ಲಿ ಬೈಕ್ ಮೇಲಿಂದ ಬಿದ್ದು ಗಾಯಗೊಂಡಿದ್ದ ಯುವಕರಿಗೆ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದರು.
ವಾಹನ ಚಾಲನೆ ಮಾಡುತ್ತಿರುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆಯೂ ಗಾಯಗೊಂಡ ಬೈಕ್ ಸವಾರಿನಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಸಚಿವರ ಬೆಂಗಾವಲು ಸಿಬ್ಬಂಧಿ ಸೇರಿದಂತೆ ಮುಂತಾದವರು ಇದ್ದರು.