ಹೈದರಾಬಾದ್: ಟಿ.ಆರ್.ಎಸ್ ಕಾರ್ಯಕರ್ತಕರು ಸಸಿ ನೆಡಲು ಹೋಗಿದ್ದ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ರಾಜ್ಯದ ಕೋಮಾರಂ ಭೀಮ್ ಅಸೀಫಾಬಾದ್ ಜಿಲ್ಲೆಯ ಸಿರ್ಪುರ ಕಾಗಜ್ನಗರ್ ಬ್ಲಾಕ್ ನಲ್ಲಿ ನಡೆದಿದೆ.
ತೆಲಂಗಾಣದ ಆಡಳಿತ ಪಕ್ಷ ಟಿಆರ್ಎಸ್ ಕಾರ್ಯಕರ್ತಕರು ದೊಣ್ಣೆಯಿಂದ ಹಿಗ್ಗಾಮುಗ್ಗಾ ಅಧಿಕಾರಿಗಳು ಹಾಗೂ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿ ಥಳಿಸಿಲಾಗಿದೆ.
ಹಲ್ಲೆಗೆ ಒಳಗಾದ ಮಹಿಳಾ ಪೊಲೀಸ್ ಅರಣ್ಯಾಧಿಕಾರಿ ಎಂಬುದು ತಿಳಿದು ಬಂದಿದ್ದು, ಮಹಿಳಾ ಪೊಲೀಸ್ ಅಧಿಕಾರಿ ಟ್ರ್ಯಾಕ್ಟರ್ ಮೇಲೆ ನಿಂತು ತಪ್ಪಿಸಿಕೊಳಲ್ಲು ಯತ್ನಿಸಿದ್ದಾಗ ಕಾರ್ಯಕರ್ತರು ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅಧಿಕಾರಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.