ಬಿಜೆಪಿಯಿಂದ ಸಸಿ ನೆಡುವ ಕಾರ್ಯಕ್ರಮ

0
49

ಶಹಾಬಾದ :ಪರಿಸರವನ್ನು ಉಳಿಸಿ ಬೆಳೆಸದಿದ್ದಲ್ಲಿ ಮುಂದಿನ ಪೀಳಿಗೆಗೆ ನಾವೇ ವಿಷ ಉಣಿಸದಂತೆ ಆಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಆತಂಕ ವ್ಯಕ್ತಪಡಿಸಿದರು.

ಅವರು ರವಿವಾರ ಭಂಕೂರ ಗ್ರಾಮದಲ್ಲಿ ಬಿಜೆಪಿಯಿಂದ ಆಯೋಜಿಸಲಾದ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸಸಿಗೆ ನೀರುಣಿಸಿ ಮಾತನಾಡಿದರು. ಪರಿಸರ, ಅಂತರ್ಜಲವನ್ನು ನಾವು ಮುಂದಿನ ಪೀಳಿಗೆಗೆ ಉಳಿಸಬೇಕಿದೆ.ಪರಿಸರವನ್ನು ಉಳಿಸುವ ಕಾರ್ಯ ಸರ್ಕಾರದ್ದು ಎಂದು ಸರ್ಕಾರದ ಮೇಲೆ ಭಾರ ಹಾಕಿ ಕೂಡದೇ ನಮ್ಮ ನಮ್ಮ ಪಾತ್ರವನ್ನು ನಿಭಾಯಿಸಬೇಕಾಗಿದೆ.ನಮ್ಮ ಮನೆ, ನಿವೇಶನದ ಅಕ್ಕ ಪಕ್ಕದಲ್ಲಿನ ಖಾಲಿ ಸ್ಥಳ, ಸರ್ಕಾರಿ ಜಮೀನಿನಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸ ಆಗಬೇಕೆಂದು ತಿಳಿಸಿದರು.

Contact Your\'s Advertisement; 9902492681

ಚಿತ್ತಾಪೂರ ಬಿಜೆಪಿ ಅಧ್ಯಕ್ಷ ನೀಲಕಂಠ ಪಾಟೀಲ ಮಾತನಾಡಿ, ಸಸಿಗಳನ್ನು ನೆಡುವುದರಿಂದ ಶುದ್ಧ ಆಮ್ಲಜನಕ ಸಿಗಲಿದೆ.ಕಾಲಕಾಲಕ್ಕೆ ಮಳೆಯಾಗಲಿದೆ. ಅಂತರ್ಜಲ ವೃದ್ಧಿಯಾಗುವುದರ ಜತೆಗೆ ಜೀವಜಲದ ಸಂಗ್ರಹವಾಗುತ್ತದೆ.ಕೊರೊನಾ ಸಂದರ್ಭದಲ್ಲಿ ಆಮ್ಲಜನಕ ಮಹತ್ವ ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ.ಆದ್ದರಿಂದ ಸಸಿಗಳನ್ನು ನೆಡುವುದರ ಮೂಲಕ ಮುಂದಿನ ಪೀಳಿಗೆಗೆ ಆರೋಗ್ಯಯುತ ಜೀವನ ಸಾಗಿಸಲು ಅನುವು ಮಾಡಿಕೊಡಬೇಕಾಗಿದೆ ಎಂದರು.

ಗ್ರಾಪಂ ಸದಸ್ಯ ಈರಣ್ಣ ಕಾರ್ಗಿಲ್, ಶರಣಪ್ಪ ಸಣಮೋ, ಮಲ್ಲಿಕಾರ್ಜುನ ಇಟಗಿ, ನಿಂಗಣ್ಣ ಪೂಜಾರಿ, ಭರತ್ ಮುತ್ತಗಾ, ಸಂತೋಷ ಕಲಶೆಟ್ಟಿ, ಚಂದ್ರಕಾಂತ ಚನ್ನೂರ, ಪವನ ಶಿರಗೊಂಡ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here