ಸಾಹಿತ್ಯ ಸಾರಥ್ಯಕಾಗಿ ಸ್ತ್ರೀ ಸಾಹಿತಿಗೆ ಬೆಂಬಲಿಸಿ: ಡಾ. ಸರಸ್ವತಿ ಚಿಮ್ಮಲಗಿ

0
54
ಡಾ. ಸರಸ್ವತಿ ಚಿಮ್ಮಲಗಿ

ಕಲಬುರಗಿ: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಸಾಹಿತ್ಯ ಸಮ್ಮೆಳನಗಳನ್ನು ವಿಶಿಷ್ಟ ರೀತಿಯಲ್ಲಿ ಆಯೋಜಿಸಲು ಮಹಿಳಾ ಅಭ್ಯರ್ಥಿಯನ್ನು ಗೆಲ್ಲಿಸಿ, ಈ ಬಾರಿ ಸಾಹಿತ್ಯ ಸಾರಥ್ಯಕ್ಕೆ ಸ್ತ್ರೀ ಸಾಹಿತಿಗೆ ಬೆಂಬಲಿಸಿ ಎಂದು ಕಸಾಪನ ರಾಜ್ಯಾಧ್ಯಕ್ಷೆ ಆಕಾಂಕ್ಷಿ ಡಾ. ಸರಸ್ವತಿ ಚಿಮ್ಮಲಗಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿಗೆ ಇಲ್ಲಿಯವರೆಗೆ ೨೫ಜನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ದ್ದಾರೆ, ಆದರೇ ಮಹಿಳೆಯೊಬ್ಬರು ಅಧ್ಯಕ್ಷೆ ಚು ಕ್ಕಾಣಿ ಹಿಡಿದಿಲ್ಲ , ಹೀಗಾಗಿ ಮೊದಲ ಬಾರಿ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನನಗೆ ಬೆಂಬಲಿಸಿ ಚುನಾಯಿಸಬೇಕೆಂದು ಮನವಿ ಮಾಡಿದ ಅವರು, ೧೨ ನೇ ಶತಮಾನದ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಉಚ್ಛ ಸ್ಥಾನದಲ್ಲಿ ಕಲ್ಪಿಸಿದರು, ಸಾಹಿತ್ಯ ಬೆಳವಣಿಗೆ ಹಾಗೂ ಸಾಹಿತ್ಯ ಚಟುವಟಿಕೆ ನಡೆಸುವ ಸಂಸ್ಥೆಗಳಿಗೆ ಮಹಿಳೆಯರ ಸಾರಥ್ಯ ಕ್ಷೀಣವಾಗಿದೆ. ಇಂದಿನ ದಿನಗಳಲ್ಲೂ ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟಾಗ ಮಾತ್ರ ಸಹಸ್ರ ಮಟ್ಟದಲ್ಲಿ ಮಹಿಳಾ ಸಾಹಿತಿಗಳು ಹುಟ್ಟು ವುದು ಸಾಧ್ಯವೆಂದು ಡಾ. ಸರಸ್ವತಿ ಚಿಮ್ಮಲಗಿ ಅವರು ತಿಳಿಸಿದರು.

Contact Your\'s Advertisement; 9902492681

ಕನ್ನಡ ಸಾಹಿತ್ಯ ಪರಿಷತ್ತಿಗೆ ಆಯ್ಕೆಯಾದರೆಜ್ಯೈದು ವರ್ಷದ ಅವಧಿಯಲ್ಲಿ ಇಬ್ಬರು ಮಹಿಳಾ ಸಾಹಿತಿಗಳನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡುವುದು, ಜಿಲ್ಲೆ ಹಾಗೂ ತಾಲೂಕುವಾರು ಈಗಾಗಲೇ ಸಮ್ಮೇಳನಗಳಿಗೆ ಬರುತ್ತಿರುವ ಅನುದಾನವನ್ನು ದುಪ್ಪಟ್ಟಾಗಿ ಹೆಚ್ಚಿಸಿ ಉನ್ನತ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸುವುದು, ಮಹಿಳೆಯರಿಗಾಗಿಯೇ ರಾಜ್ಯ ಹಾಗೂ ವಿಭಾಗ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳಗಳನ್ನು ಹಮ್ಮಿಕೊಂಡು ಮಹಿಳಾ ಸಾಹಿತಿಗಳಿಗೆ ಅವಕಾಶ ಮಾಡುವ ಮನೋಭಾವನೆ ಹೊಂದಿದ್ದು, ಮಹಿಳೆಯನ್ನು ಅಡುಗೆ ಮನೆ ಸಾಹಿತ್ಯದಿಂದ ಹೊರ ಸಾಹಿತ್ಯಕ್ಕೆ ಹೆಚ್ಚಿನ ಆಸಕ್ತಿ ತೋರುವಂತಹ ಕಾರ್ಯ ಮಾಡುವ ಮಹತ್ವಕಾಂಕ್ಷೆ ಹೊಂದಿದ್ದೇವೆಂದು ಸುದ್ದಿಗ  ಷ್ಠಿಯಲ್ಲಿ ಡಾ. ಸರಸ್ವತಿ ಚಿಮ್ಮಲಗಿ ತಮ್ಮ ಪ್ರಣಾಳಿಕೆ ಬಿಡಿ ಸಿಟ್ಟರು. ಕರ್ನಾಟಕದಾದ್ಯಂತ ಈಗಾಗಲೇ ೨೫ ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ ಬಂದಿದ್ದು, ನಾನು ಸಹ ನಾಡಿನಾದ್ಯಂತ ಹಲವಾರು ನಾಟಕಗಳನ್ನು ಮಾಡುತ್ತಾ ಸಂಚರಿಸಿದ್ದೇನೆ, ೩೦ ಕ್ಕೂ ಹೆಚ್ಚಿನ ಪುಸ್ತಕಗಳನ್ನು ಬರೆದಿದಲ್ಲದೇ, ನನ್ನ ಕವಿತೆಗಳು ದೇಶದ ವಿವಿಧ ಭಾಷೆಗಳಿಗೆ ಭಾಷಾಂತರವಾಗಿವೆ ಎಂದು ಮಾಹಿತಿ ಹಂಚಿಕೊಂಡರು.

ಡಾ. ವಿಜಯಲಕ್ಷ್ಮೀ ಕೋಸಗಿ, ಆಶಾದೇವಿ ಖೂಬಾ, ಭುವನೇಶ್ವರಿ, ಚಂದ್ರಕಲಾ ಇತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here