ಸುರಪುರ: ತಾಲೂಕಿನ ಮುನೀರ ಬೊಮ್ಮನಹಳ್ಳಿ ಗ್ರಾಮದ ಹರಿಜನ ವಾರ್ಡಿನಲ್ಲಿರುವ ಅಂಗನವಾಡಿ ಕೇಂದ್ರವನ್ನು ಅಂಗನವಾಡಿ ಶಿಕ್ಷಕಿ ತಮ್ಮ ಸ್ವಂತಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇದನ್ನು ತಡೆಯುವಂತೆ ಆಗ್ರಹಿಸಿ ಮುನೀರ್ ಬೊಮ್ಮನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ನಗರದಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿರುವ ಜನರು ಮಾತನಾಡಿ,ಅಂಗನವಾಡಿ ಕೇಂದ್ರವನ್ನು ತಮ್ಮ ಸ್ವಂತ ಬಳಕೆಗೆ ಯುಪಯೋಗಿಸುತ್ತಿದ್ದಾರೆ,ಅಲ್ಲದೆ ಅಂಗನವಾಡಿ ಕೇಂದ್ರದ ಪಕ್ಕದಲ್ಲಿರುವ ಹಳೆಯ ಶಾಲಾ ಕಟ್ಟಡವನ್ನು ಅವರ ಸಂಬಂಧಿಗಳ ಬಳಕೆಗೆ ತೊಡಗಿಸಿದ್ದಾರೆ.
ಇದನ್ನು ಕೇಳಿದವರಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತಾರೆ.ಇದರಿಂದ ಜನರು ಬೇಸತ್ತು ಹೋಗಿದ್ದಾರೆ.ಅಲ್ಲದೆ ಮಕ್ಕಳ ಕಲಿಕೆಗಾಗಿ ನಿರ್ಮಿಸಿರುವ ಅಂಗನವಾಡಿ ಕೇಂದ್ರವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡು ಮಕ್ಕಳು ಕಲಿಯಲು ತೊಂದರೆ ಮಾಡುತ್ತಿದ್ದಾರೆ.ಆದ್ದರಿಂದ ಕೂಡಲೇ ಈ ಎರಡು ಕಟ್ಟಡಗಳಲ್ಲಿ ವಾಸವಾಗಿರುವವರನ್ನು ಖಾಲಿ ಮಾಡಿಸಿ ಇಲಾಖೆಗಳ ವಶಕ್ಕೆ ಪಡೆದು,ಹಳೆಯ ಕಟ್ಟಡಗಳ ಜಾಗದಲ್ಲಿ ಹೊಸ ಕಟ್ಟವನ್ನು ನಿರ್ಮಿಸಬೇಕು.ಈ ನಮ್ಮ ಮನವಿಗೆ ಸ್ಪಂಧಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿಯನ್ನು ನಡೆಸಲಾಗುವುದು ಎಂದು ಎಚ್ಚರಿಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯ ಸಹಾಯಕರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಭೀಮಪ್ಪ ಕಿರಣಗಿ,ಸೋಮಪ್ಪ ದೊಡ್ಮನಿ,ಗುತ್ತಪ್ಪ ಅಚೀಕೇರಿ,ಚಂದ್ರಪ್ಪ ದೊಡ್ಮನಿ,ಶರಣಪ್ಪ ಗ್ರಾ.ಪಂ.ಸದಸ್ಯರು ಯಕ್ತಾಪುರ,ಬಸಪ್ಪ ನಾಟಿಕಾರ,ಶರಣಪ್ಪ ನಾಟೆಕಾರ,ಜೆಟ್ಟೆಪ್ಪ ದೋರನಹಳ್ಳಿ,ಮಲ್ಲಪ್ಪ ಬಳಗಾನೂರ,ಅಂಬ್ರಪ್ಪ ದೊಡ್ಮನಿ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಜನರಿದ್ದರು.