ಕಲಬುರಗಿ: ನಗರದ ಹೀರಾಪೂರದಿಂದ ಶರಣಸಿರಸಗಿವರೆಗಿನ ರಸ್ತೆ ಮಾರ್ಗಮಧ್ಯೆ ಬರುವ ಮೇಲಸೇತುವೆಗೆ ಸಂವಿಧಾನ ಶಿಲ್ಪಿ ರಾಷ್ಟ್ರಕಂಡ ಮಹಾನ ನಾಯಕ ಭಾರತ ರತ್ನ ಬಾಬಾ ಸಾಹೇಬ ಡಾ. ಬಿ. ಆರ್.ಅಂಬೇಡ್ಕರ ರವರ ಹೆಸರಿಡಲು ಶಾಸಕ ಹಾಗೂ ಕೆಕೆಆರಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಶಿಫಾರಸು ಮಾಡಿರುವುದು ಡಾ.ಬಿ ಆರ್ ಅಂಬೇಡ್ಕರ ರವರ ಮೇಲಿನ ಗೌರವ ಮತ್ತು ದಲಿತ ಸಮುದಾಯದ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಠಗಿ ಹೇಳಿದ್ದಾರೆ.
ಮಾಜಿ ಶಾಸಕರು ಹಾಗೂ ಈ ಭಾಗದ ಹಿರಿಯ ಮುತ್ಸದ್ಧಿ ನಾಯಕರಾಗಿದ್ದ ಚಂದ್ರಶೇಖರ ಪಾಟೀಲ ರೇವೂರ ಅವರು ಸಹ ಡಾ ಬಿ ಆರ್ ಅಂಬೇಡ್ಕರ ಹಾಗೂ ದಲಿತ ಸಮುದಾಯ ಹಿತಚಿಂತಕರಾಗಿದ್ದರು, ಅವರ ಸುಪುತ್ರರಾದ ದತ್ತಾತ್ರೇಯ ಪಾಟೀಲ ರೇವೂರ ರವರು ಡಾ.ಬಿ ಆರ್ ಅಂಬೇಡ್ಕರ ರವರ ಹೆಸರು ಮೇಲಸೆತುವೆಗೆ ನಾಮಕರಣ ಮಾಡಲು ಶಿಫಾರಸ್ಸು ಮಾಡಿರುವುದು, ದಲಿತ ಹಾಗೂ ತಳಸಮುದಾಯದಲ್ಲಿ ಸಂತಸ ಉಂಟುಮಾಡಿದೆ.
ಸಮಸ್ತ ಬಾಬಾಸಾಹೇಬ ಡಾ ಬಿ ಆರ್ ಅಂಬೇಡ್ಕರ ಅನುಯಾಯಿಗಳ ಹಾಗೂ ಅಭಿಮಾನಿಗಳ ಪರವಾಗಿ ದತ್ತಾತ್ರೇಯ ಪಾಟೀಲ ರೇವೂರ ಅವರನ್ನು ಈ ಭಾಗದ ಪ್ರಭಾವಿ ದಲಿತ ಮುಖಂಡರು ಆದ ಬಿಜೆಪಿ ನಾಯಕ ಅಂಬಾರಾಯ ಅಷ್ಠಗಿ ಅಭಿನಂದಸಿದ್ದಾರೆ.