ಶಹಾಬಾದ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಹಾಗೂ ಕಲಬುರಗಿ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಕಟ್ಟಡ ಕಾರ್ಮಿಕರಿಗೆ ಆಹಾರಧಾನ್ಯ ಒಳಗೊಂಡ ಆಹಾರ ಕಿಟ್‌ಗಳನ್ನು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ವಿತರಣೆ ಮಾಡಿದರು.
ಅರ್ಹ ಫಲಾನುಭವಿಗಳಿಗೆ ಕಿಟ್ಸ್ ವಿತರಣೆ ಮಾಡಿ ಮಾತನಾಡಿದ ಶಾಸಕ ಬಸವರಾಜ ಮತ್ತಿಮಡು, ಕೋವಿಡ್ ಸಂದರ್ಭದಲ್ಲಿ ಕೆಲಸವಿಲ್ಲದೇ ತೊಂದರೆಗೆ ಒಳಗಾದ ಕಟ್ಟಡ ಕಾರ್ಮಿಕರಿಗೆ ನಮ್ಮ ಸರ್ಕಾರ ಕಾರ್ಮಿಕ ಇಲಾಖೆಯ ವತಿಯಿಂದ ಆಹಾರ ಕಿಟ್ ವಿತರಿಸಿದೆ.ನಗರದಲ್ಲಿ ಸುಮಾರು ಎರಡು ಸಾವಿರ ಜನರಿಗೆ ಆಹಾರ ಕಿಟ್ ವಿತರಿಸಲಾಗುತ್ತಿದೆ.ಮತ್ತೆ ಅಗತ್ಯ ಬಿದ್ದರೇ ಮತ್ತೆ ಎರಡು ಸಾವಿರ ಕಿಟ್‌ಗಳನ್ನು ವಿತರಿಸಲಾಗುತ್ತದೆ. ಅರ್ಹ ನೋಂದಾಯಿತ ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆಯಿಂದ ನೀಡಿರುವ ಗುರುತಿನ ಚೀಟಿ, ಆಧಾರ್‌ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಹಾಜರುಪಡಿಸಿ, ಕೋವಿಡ್-೧೯ ನಿಯಮ ಪಾಲಿಸಿ, ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಆಹಾರ ಸಾಮಾಗ್ರಿಗಳ ಕಿಟ್‌ಗಳನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕಲಬುರಗಿ ಉಪ ಕಾರ್ಮಿಕ ಆಯುಕ್ತ ಡಿ.ಟಿ.ಗಣೇಶ ಮಾತನಾಡಿ, ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ವತಿಯಿಂದ ನಗರದ ಕಟ್ಟಡ ಕಾರ್ಮಿಕರಿಗೆ ಕೊವಿಡ್ ಮಾಹಾಮಾರಿಯಲ್ಲಿ ಕೆಲಸವಿಲ್ಲದೆ ಇರುವ ಕಾರ್ಮಿಕರಿಗೆ ಕಾರ್ಮಿಕ ಆಧಾರನ್ನು ಗುರುತಿಸಿ ಅವರನ್ನು ಫುಡ್ ಕಿಟ್ಟ ಕೊಡುವಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.ಕಾರ್ಮಿಕ ಇಲಾಖೆಯಿಂದ ಸಿಗುವ ಸಾಮಾಜಿಕ ಸೇವಾ ಸೌಲಭ್ಯಗಳಾದ, ಮದುವೆ ಧನ ಸಹಾಯ, ಶೈಕ್ಷಣಿಕ ಸೌಲಭ್ಯ, ಹೆರಿಗೆ, ವೈದ್ಯಕೀಯ ಸೌಲಭ್ಯ ಇನ್ನಿತರ ಕಟ್ಟಡ ಕಾರ್ಮಿಕರ ಸೌಲಭ್ಯಗಳನ್ನು ಪಡೆಯಬೇಕು ಎಂದು ಹೇಳಿದರು.
ಪ್ರೋಬೇಶನರಿ ಕಾರ್ಮಿಕ ಆಯುಕ್ತ ದತ್ತಾತ್ರೇಯ, ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ,ಉಪಾಧ್ಯಕ್ಷೆ ಸಲೀಮಾಬೇಗಂ, ತಹಸೀಲ್ದಾರ ಸುರೇಶ ವರ್ಮಾ, ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ವೇದಿಕೆಯ ಮೇಲಿದ್ದರು. ರಘುನಾಥ ನರಸಾಳೆ ನಿರೂಪಿಸಿದರು, ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಸ್ವಾಗತಿಸಿದರು, ಶಂಕರ ಇಂಜಗನೇರಿ ವಂದಿಸಿದರು.
ನಗರಸಭೆಯ ಸದಸ್ಯ ರವಿ ರಾಠೋಡ,ದತ್ತಾ ಫಂಡ್, ಶರಣು ವಸ್ತ್ರದ್, ನಿಂಗಣ್ಣ ಹುಳಗೋಳಕರ್, ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ನಾಗರಾಜ ಮೇಲಗಿರಿ,ಜಯಶ್ರೀ ಸೂಡಿ, ಮಹಾದೇವ ಗೊಬ್ಬೂರಕರ್, ಭೀಮಯ್ಯ ಗುತ್ತೆದಾರ, ವಿರೇಶ ಬಂದಳ್ಳಿ , ಬಸವರಾಜ ಮದ್ರಿಕಿ, ದೇವೆಂದ್ರ ಯಲಗೋಡಕರ್,ದುರ್ಗಪ್ಪ ಪವಾರ, ಪಾರ್ವತಿ ಪವಾರ ಸೇರಿದಂತೆ ಅನೇಕರು ಇದ್ದರು.