ಶಹಾಬಾದ: ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಗ್ರಾಪಂ ನೌಕರರ ಸಂಘದ (ಸಿಐಟಿಯು) ವತಿಯಿಂದ ಜುಲೈ ೧೫ರಂದು ಕಲಬುರಗಿ ಜಿಪಂ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಕೈಗೊಂಡಿದ್ದೆವೆ ಎಂದು ಗ್ರಾಪಂ ನೌಕರರ ಸಂಘದ ಚಿತ್ತಾಪೂರ, ಶಹಾಬಾದ ಹಾಗೂ ಕಾಳಗಿ ತಾಲೂಕಿನ ಕಾರ್ಯದರ್ಶಿ ಮಲ್ಲಣ್ಣ ಕಾರೊಳ್ಳಿ ತಿಳಿಸಿದ್ದಾರೆ.
ಬಡ್ತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದರೂ ಕೂಡ ಆರ್‌ಡಿಪಿಆರ್ ಇಲಾಖೆಯವರ ದುರುದ್ದೇಶದಿಂದ ಬಿಲ್ ಕಲೆಕ್ಟರ್/ಗುಮಾಸ್ತರಿಂದ ಕಾರ್ಯದರ್ಶಿ ಗ್ರೇಡ-೨ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ಆದೇಶ ಹಿಂಪಡೆದಿದ್ದು, ಅದನ್ನು ಮೊದಲಿನಂತೆ ಜಾರಿಗೊಳಿಸಬೇಕು. ೧೫ನೇ ಹಣಕಾಸು ಯೋಜನೆಯಲ್ಲಿ ಸಿಬ್ಬಂದಿಗಳ ವೇತನ ಪಾವತಿಸುವಂತೆ, ಸ್ವಚ್ಛತಾಗಾರರ ಅನುಮೋದನೆ ಮತ್ತು ಇತರ ಸಿಬ್ಬಂದಿಗಳ ಅನುಮೋದನೆ ಮಾಡಬೇಕು.
ಕರೊನಾದಿಂದ ಮೃತರಾದ ಕುಟುಂಬಕ್ಕೆ ೩೦ ಲಕ್ಷ ಪರಿಹಾರ ಬಗ್ಗೆ ಮತ್ತು ಅನುಕಂಪ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು ಸೇರಿದಂತೆ ಇತರ ಬೇಡಿಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತೆವೆ ಎಂದು ಮಲ್ಲಣ್ಣ ಕಾರೊಳ್ಳಿ ತಿಳಿಸಿದ್ದಾರೆ.