ಡಾ.ಮಲ್ಲಿಕಾರ್ಜುನ ಖರ್ಗೆ 80 ನೇ ಜನ್ಮದಿನದ ನಿಮಿತ್ತ ಹಣ್ಣು ಹಂಪಲು ವಿತರಣೆ

0
109

ಶಹಾಬಾದ: ನಗರದ ಕಾಂಗ್ರೆಸ್ ಪಕ್ಷದ ವತಿಯಿಂದ ಬುಧವಾರ ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರ 80 ನೇ ಜನ್ಮದಿನವನ್ನು ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು ಹಂಪಲು, ಮಾಸ್ಕ್ ವಿತರಿಸಿ ಹಾಗೂ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.

ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಡಾ.ರಶೀದ್ ಮರ್ಚಂಟ್ ಮಾತನಾಡಿ, ಕಳೆದ ಐದು ದಶಕಗಳಿಂದ ಹೈದ್ರಬಾದ ಕರ್ನಾಟಕಕ್ಕೆ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಕೊಟ್ಟ ಕೊಡುಗೆ ಅಪಾರ. ಈ ಭಾಗದ ಅಭಿವೃದ್ಧಿಗಾಗಿ ಸದಾ ಹಗಲಿರುಳು ಶ್ರಮಿಸಿದ ನಾಯಕ. ಕಲಬುರಗಿಯ ನಗರದಲ್ಲಿ ಇಎಸ್‍ಐ ಆಸ್ಪತ್ರೆ, ಪೊಲೀಸ್ ಟ್ರೇನಿಂಗ್ ಸೆಂಟರ್, 370 ಜೆ (ಕಲಂ) ಒಳಗೊಂಡಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಕೀರ್ತಿ ಖರ್ಗೆ ಸಾಹೇಬರಿಗೆ ಸಲ್ಲುತ್ತದೆ.ಅವರ ರಾಜಕೀಯ ಜೀವನದಲ್ಲಿ ಹಲವಾರು ನಾಯಕರನ್ನು ಬೆಳೆಸಿದ್ದಾರೆ.

Contact Your\'s Advertisement; 9902492681

ಅವರು ಇಂದು ಸಂಸದರಾಗಿ ಇದ್ದರೇ ಇನ್ನೂ ಜನಪರವಾದ ಅಭಿವೃದ್ಧಿ ಕಾಣಬಹುದಿತ್ತು. ಅವರ ಜನ್ಮದಿನಾಚರಣೆಯನ್ನು ಕೊವಿಡ್ 19 ಸಂದರ್ಭದಲ್ಲಿ ಸರಳವಾಗಿ ಆಚರಿಸುವ ಮೂಲಕ ಪೌರಕಾರ್ಮಿಕರಿಗೆ ಹಣ್ಣು ಹಂಪಲು, ಸ್ಯಾನಿಟೈಜರ್ ಹಾಗೂ ಮಾಸ್ಕ್ ವಿತರಣೆ ಮಾಡಿದ್ದೆವೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿಜಯಕುಮಾರ ಮುತ್ತಟ್ಟಿ, ಗಿರೀಶ ಕಂಬಾನೂರ, ರಾಜೇಶ ಯನಗುಂಟಿಕರ್,ಕುಮಾರ ಚವ್ಹಾಣ, ಡಾ.ಅಹ್ಮದ್ ಪಟೇಲ್,ಹಾಷಮ ಖಾನ, ನಿಂಗಣ್ಣ ಸಂಗಾವಿಕರ, ಶಿವರಾಜ ಕೋರೆ, ಶರಣಬಸಪ್ಪ ಪಗಲಾಪೂರ, ತಿಪ್ಪಣ್ಣ ನಾಟೇಕಾರ, ಅನ್ವರ ಪಾಶಾ, ಕಿರಣ ಚವ್ಹಾಣ, ಭರತ್ ರಾಠೋಡ, ಮಹ್ಮದ್ ಮಸ್ತಾನ,ದೇವರಾಜ ರಾಠೋಡ,ಮ.ಜಾವೀದ್, ಕಾಶಿನಾಥ ಜೋಗಿ,ಮೇರಾಜ ಸಾಹೇಬ,ಅವಿನಾಶ ಕಂಬಾನೂರ, ಮ.ಇಮ್ರಾನ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here