ಶೆಳ್ಳಗಿ ಗ್ರಾಮದಲ್ಲಿ ಕೆಟ್ಟುನಿಂತ ಶುದ್ಧ ಕುಡಿಯುವ ನೀರಿನ ಘಟಕ ಜನರ ಆಕ್ರೋಶ

0
28

ಸುರಪುರ: ತಾಲೂಕಿನ ಶೆಳ್ಳಗಿ ಗ್ರಾಮದಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದ್ದು ಇದರಿಂದ ಗ್ರಾಮದ ಜನರು ಕುಡಿಯುವ ನೀರಿಗೆ ತೊಂದರೆ ಪಡುವಂತಾಗಿದೆ.

ಇದರ ಕುರಿತು ಗ್ರಾಮದ ಅನೇಕ ಜನರು ಬೇಸರ ವ್ಯಕ್ತಪಡಿಸಿ,ಕಳೆದ ಮೂರು ವಾರಗಳಿಂದ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದೇವೆ.ಘಟಕ ದುರಸ್ಥಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಕೇಳಿದರೆ ಘಟಕದ ನಿರ್ವಹಣೆ ಖಾಸಗಿಯವರಿಗಿದೆ ಎಂದು ನೆಪ ಹೇಳುತ್ತಾರೆ.ಖಾಸಗಿ ಏಜೆನ್ಸಿಯವರಿಗೆ ಕೇಳಿದರೆ ಗ್ರಾಮ ಪಂಚಾಯತಿಗೆ ಬಿಟ್ಟು ಕೊಟ್ಟಿರುವುದಾಗಿ ಹೇಳುತ್ತಾರೆ.

Contact Your\'s Advertisement; 9902492681

ಇಬ್ಬರ ಮದ್ಯದ ನಿರ್ಲಕ್ಷ್ಯ ದಿಂದ ಗ್ರಾಮದ ಎಲ್ಲಾ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.ಮನೆಯಲ್ಲಿ ಈಗ ಜನರು ಚಹಾ ಮಾಡಿದರೆ ಕಲುಷಿತ ನೀರಿನಿಂದ ಚಹಾ ಕೆಡುತ್ತಿದೆ,ಕುಡಿಯಲು ಯೋಗ್ಯವಲ್ಲದ ನೀರು ಜನರಿಗೆ ರೋಗ ಹರಡುವ ಭೀತಿ ಎದುರಾಗಿದೆ.ಆದ್ದರಿಂದ ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥಗೊಳಿಸುವಂತೆ ಆಗ್ರಹಿಸುತ್ತೇವೆ.

ಒಂದು ವೇಳೆ ನಮ್ಮ ಮನವಿಗೆ ಪಂಚಾಯತಿ ಅಧಿಕಾರಿಗಳು ಸ್ಪಂಧಿಸದಿದ್ದಲ್ಲಿ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗುವುದಾಗಿ ಮುಖಂಡ ಸುರೇಶ ಭೂಮಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here