ಖರ್ಗೆ ಸೋಲು ವೈಯಕ್ತಿಕ ಸೋಲಲ್ಲ ಅದು ಶೋಷಿತರ ಸೋಲು: ಸಚಿವ ಯು.ಟಿ.ಖಾದರ್

0
192

ಕಲಬುರಗಿ: ಹಿರಿಯ ನಾಯಕರಾದ‌ ಶ್ರೀ‌ ಮಲ್ಲಿಕಾರ್ಜುನ‌ ಖರ್ಗೆ ಅವರ ಸೋಲು ಅದು ಕೇವಲ ವೈಯಕ್ತಿಕ ಸೋಲಲ್ಲ ಬದಲಿಗೆ ಶೋಷಿತರ ಹಾಗೂ ‌ಹಿಂದುಳಿದವರ ಸೋಲಾಗಿದೆ‌ ಎಂದು‌ ನಗರಾಭಿವೃದ್ದಿ‌ ಸಚಿವರಾ‌ದ‌ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.

ಜಿಲ್ಲಾ‌ ಕಾಂಗ್ರೇಸ್ ಕಮಿಟಿ ಏರ್ಪಡಿಸಲಾಗಿದ್ದ ಚಿಂತನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಲೋಕಸಭೆಯಲ್ಲಿ ನಾವು‌ ಸೋತಿದ್ದೇವೆ ಆದರೆ‌ ಈ ಸೋಲು ಕೊನೆಯಲ್ಲ. ನಾವು ಬಲಿಷ್ಠರಾಗಬೇಕಾದರೆ  ಹೋರಾಟ ಮಾಡುವ ಮೂಲಕ ಪಕ್ಷ ಸಂಘಟನೆ ಮಾಡಬೇಕಾಗಿದೆ. ಆ ಕೆಲಸ ಇಂದಿನಿಂದಲೇ ಪ್ರಾರಂಭವಾಗಬೇಕಿದ್ದು ನಿಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನ ಹಾಗೂ ತ್ಯಾಗದಿಂದ ಸಾಧ್ಯವಾಗಲಿದ್ದು ಮುಂದಿನ‌ ದಿನಗಳಲ್ಲಿ ನಾವು ಮತ್ತೆ ಪ್ರಬಲವಾಗಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Contact Your\'s Advertisement; 9902492681

ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಬೂತ್ ಮಟ್ಟದಿಂದಲೇ ಪಕ್ಷ ಕಟ್ಟಬೇಕು. ನಿಮ್ಮ ಈ ಪ್ರಯತ್ನ ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದ ಸಚಿವರು, ಕಾಂಗ್ರೇಸ್ ಈ‌ ಹಿಂದೆ ಕೇಂದ್ರದಲ್ಲಿ‌ ಸೋತಿದ್ದರೂ ಕೂಡಾ ಮತ್ತೆ ಪ್ರಬಲವಾಗಿ ಬೆಳೆದಿತ್ತು ಅದಕ್ಕೆ‌ ಕಾರಣ ನಿಷ್ಠಾವಂತ ಕಾರ್ಯಕರ್ತರ ಹೋರಾಟದ ಫಲ ಎಂದು ಹೇಳಿದರು.

ಬಿಜೆಪಿಯವರು ಏನೇ ಗೊಂದಲ ಸೃಷ್ಠಿಸಿದರೂ ಕೂಡಾ ರಾಜ್ಯದ ಸಮ್ಮಿಶ್ರ ಸರಕಾರ‌ ಗಟ್ಟಿಯಾಗಿದ್ದು ಜನಪರ‌ ಕೆಲಸ ಮಾಡಿಕೊಂಡು ಹೋಗುತ್ತದೆ ಎಂದು ಒತ್ತಿ ಹೇಳಿದ ಸಚಿವ ಖಾದರ್ ಅವರು ಕೇಂದ್ರ ಸರಕಾರದ ವಿರುದ್ದ ಹೋರಾಟ ಮಾಡಲು‌ ನೀವು ಸತತ ಪ್ರಯತ್ನ ಮಾಡಬೇಕು. ಹಾಗಾಗಿ‌ ನಿಮ್ಮ ಮಧ್ಯೆ ಏನಾದರೂ ಮುನಿಸು, ಭಿನ್ನಾಭಿಪ್ರಾಯ ಇದ್ದರೆ ಅದನ್ನು ಬದಿಗೊತ್ತಿ‌ ಪಕ್ಷ ಸಂಘಟನೆಗೆ ಯುದ್ದೋಪಾದಿಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲಲು ಸಹಕರಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಸಮಾಜಕಲ್ಯಾಣ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಜಿಲ್ಲಾಧ್ಯಕ್ಷರಾದ ಜಗದೇವ ಗುತ್ತೇದಾರ, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು , ಶಿವಾನಂದ್ ಪಾಟೀಲ್ ಸೇರಿದಂತೆ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here