ಕಲಬುರಗಿ: ಪತ್ರಕರ್ತ, ಸಾಹಿತಿ ಮಹಿಪಾಲರೆಡ್ಡಿ ಅವರು ತಮ್ಮ ಹಾಗೂ ತಮ್ಮ ಮಗ ವಿಜಯಭಾಸ್ಕರ ರೆಡ್ಡಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೊಸ ಉಪಕ್ರಮವನ್ನು ಬಳಸಿದ್ದಾರೆ.
ಈ ಚಿತ್ರ ಬರಹ ಓದಿದರೆ ದಿನಪತ್ರಿಕೆಯೊಂದರ ಮುಖಪುಟದಂತಿದೆ. ಹಾಗೆಂದ ಮಾತ್ರಕ್ಕೆ ಇದು ಯಾವುದೇ ಪತ್ರಿಕೆಯ ಮುಖಪುಟ ಅಲ್ಲ. ಅಪ್ಪ-ಮಗನ ಪುಸ್ತಕ ಬಿಡುಗಡೆ ಕಾರ್ಯಕ್ರಮದ ವಿಭಿನ್ನ ವಿನ್ಯಾಸದ ಆಮಂತ್ರಣ ಪತ್ರಿಕೆ ಇದಾಗಿದೆ.
ಕಲಬುರಗಿ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಮಹಿಪಾಲರೆಡ್ಡಿ ತಮ್ಮ ಅವಧಿಯಲ್ಲಿ ಇಂತಹ ಸಾಕಷ್ಟು ಆಮಂತ್ರಣ ಪತ್ರಿಕೆ ತರುವ ಮೂಲಕ ಸಾಹಿತ್ಯ ಲೋಕದ ಮಂದಿಗೆ ಆಶ್ಚರ್ಯಗೊಳಿಸಿದ್ದರು. ಇದೀಗ ಅವರ ಮಗ ವಿಜಯಭಾಸ್ಕರರೆಡ್ಡಿ ಕೂಡ ಅವರ ಕ್ರಿಯಾಶೀಲತೆಗೆ ತನ್ನದೂ ಒಂದಿಷ್ಟು ಸೇರಿಸಿದ್ದಾನೆ.
ಅಂತೆಯೇ ಇಂತಹ ಅದ್ಭುತ ಆಮಂತ್ರಣ ಪತ್ರಿಕೆ ಸಿದ್ಧಗೊಂಡಿದೆ. ಕಾರ್ಯಕ್ರಮ ಏನು? ಯಾವಾಗ? ಎಲ್ಲಿ? ಯಾರು ಆಗಮಿಸಲಿದ್ದಾರೆ ಎಂಬುದನ್ನು ನೀವೆ ಓದಿರಿ.